ಅಂತಾರಾಷ್ಟ್ರೀಯ

ರಕ್ಷಣಾ ಸಚಿವಾಲಯದ ಮಾಹಿತಿ ಕದ್ದು ಚೀನಾಕ್ಕೆ ನೀಡುತ್ತಿದ್ದ ಪತ್ರಕರ್ತ ಆರ್ .ಪಿ ಶರ್ಮಾ ಅಂದರ್

ನವದೆಹಲಿ prajakiran.com :  ರಕ್ಷಣಾ ಸಚಿವಾಲಯದ ಮಾಹಿತಿ ಕದ್ದು ಚೀನಾಕ್ಕೆ ನೀಡುತ್ತಿದ್ದ ದೆಹಲಿ ಮೂಲದ ಪತ್ರಕರ್ತ ಆರ್ .ಪಿ ಶರ್ಮಾ ಅಂದರ್ ಆಗಿದ್ದಾನೆ.

ಲಡಾಖ್ ನಲ್ಲಿ ನಿಯೋಜನೆಗೊಂಡ ಸೇನೆಯ ವಿವರವನ್ನು ಈತ ಚೀನಾಕ್ಕೆ ನೀಡಿದ್ದ ಎಂಬ ಆರೋಪ ಪೊಲೀಸ್ ತನಿಖೆ ವೇಳೆ ಬಯಲಿಗೆ ಬಂದಿದೆ.

ಈ ಗೌಪ್ಯ ಮಾಹಿತಿ ನೀಡಿ ಆರ್. ಪಿ. ಶರ್ಮಾ ಲಕ್ಷ ಲಕ್ಷ ಪಡೆದಿದ್ದ. ಈತನಿಗೆ ಶೆಲ್ ಎಂಬ ಚೀನಾದ ನಕಲಿ ಕಂಪನಿ ಮೂಲಕ ಹಣ ಸಂದಾಯವಾಗುತ್ತಿತ್ತು.

ಇತನಿಗೆ ಇನ್ನು ಯಾರು ಸಹಾಯ ಮಾಡುತ್ತಿದ್ದರು. ಇದರ ಹಿಂದೆ ಇನ್ನೂ ಯಾರಿದ್ದಾರೆ ಎಂಬುದರ ಕುರಿತು  ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈತನಿಗೆ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ನೇಪಾಳಿ ಪ್ರಜೆ ಶೇರ್ ಸಿಂಗ್ ಹಾಗೂ ಚೀನಾದ ಗುಪ್ತಚರ ಎಜೆಂಟ್ ಕಿಂಗ್ ಶಿ  ಕೂಡ ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

ಕಿಂಗ್ ಶಿ ವ್ಯಾಪಾರ ವೀಸಾ ಪಡೆದು ಭಾರತಕ್ಕೆ ಬಂದಿದ್ದಳು. ಈಕೆ ಈ ಮೊದಲು ಚೀನಾದ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದಳು.

ಆರ್ ಪಿ ಶರ್ಮಾ ಎಂಬ ಪತ್ರಕರ್ತ ದಲಾಯಿ ಲಾಮಾ ವಿರುದ್ದ, ಪಾಕ್ ಆಕ್ರಮಿತ ಕಾಶ್ಮೀರದ ವಿರುದ್ದ, ಚೀನಾ ಗಡಿ ಭಾಗದ ಸ್ಥಿತಿಗತಿ  ಹಾಗೂ ಹಿಂದೂ ಮುಸ್ಲಿಂ ನಡುವೆ ಬಿರುಕು ಹುಟ್ಟಿಸುವಂತಹ ಲೇಖನ ಬರೆದು ಚೀನಾದ ಪತ್ರಿಕೆಯೊಂದರಿಂದ ಕೂಡ ಹಣ ಪಡೆದಿದ್ದ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *