ಅಂತಾರಾಷ್ಟ್ರೀಯ

ಧಾರವಾಡದಲ್ಲಿ ಐಐಟಿ ಕಾನ್ಪೂರ್ ವಿದ್ಯಾರ್ಥಿ ಕಾರ್ತಿಕ್ ಕಟ್ಟಿಮಠ ನವರಾತ್ರಿ ವೈಭವ ವಿಭಿನ್ನ , ವೈಶಿಷ್ಟ್ಯ, ಅರ್ಥಪೂರ್ಣ

ಕಿತ್ತೂರು ಸಂಸ್ಥಾನದ ರಾಜಗುರು ಮನೆತನದ ಕುಡಿ

ಧಾರವಾಡ prajakiran.com : ನವರಾತ್ರಿ ಅಂದ ತಕ್ಷಣ ಪ್ರತಿ ದಿನ ದುರ್ಗಾ ದೇವಿಗೆ ದೇವಸ್ಥಾನ ಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಪ್ರಾರ್ಥನೆ ಮಾಡುವುದು ರೂಢಿ.

ಆದರೆ ಮನೆಯಲ್ಲಿಯೇ ದೇವಿಗೆ ಒಂಬತ್ತು ದಿನಗಳ ಕಾಲ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ಅಲಂಕಾರ ಮಾಡಿ ಪೂಜೆ ಪ್ರಾರ್ಥನೆ ಸಲ್ಲಿಸುವುದು ಮತ್ತು ದೇವಿಯ ಆರಾಧನೆ ಮಾಡುವುದು
ವಿರಳ ಎಂದರೆ ತಪ್ಪಾಗಲಾರದು.

ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಸತ್ಯ.
ಅದರಲ್ಲೂ ಐಐಟಿ ಕಾನ್ಫೂರ್ ನಲ್ಲಿ
ಎಂ ಟೆಕ್ ಓದುತ್ತಿರುವ ಧಾರವಾಡ ಮೂಲದ ವಿದ್ಯಾರ್ಥಿಯೊಬ್ಬ ಈ ರೀತಿ ದೇವಿಗೆ ಮನಸೋತಿರುವುದು ನಾವಂತೂ ಕೇಳಿಲ್ಲ.

ಅಂತಹ ವಿದ್ಯಾರ್ಥಿಯ ಹೆಸರು ಕಾರ್ತಿಕ ಕಟ್ಟಿಮಠ. ಇವರು ಧಾರವಾಡದ ಕಾಮನಕಟ್ಟಿಯಲ್ಲಿ ನೆಲೆಸಿರುವ ಕಿತ್ತೂರರಿನ ವೀರರಾಣಿ ಚೆನ್ನಮ್ಮ ಹಾಗೂ ಮಲ್ಲ ಸರ್ಜ ದೇಸಾಯಿ ಸಂಸ್ಥಾನದ ರಾಜಗುರುಗಳಾದ ಹುಚ್ಚಪ್ಪಜ್ಜನ ವಂಶಸ್ಥರ ಕುಡಿ.

ಬಾಲ್ಯದಲ್ಲೇ ಅವರಿಗೆ ದೇವಿಯ ಮೇಲೆ ವಿಶೇಷ ಆಸಕ್ತಿ ಭಕ್ತಿ ಭಾವ ಮೂಡಿ ಕಳೆದ ಹನ್ನೊಂದು ವರ್ಷಗಳಿಂದ ಇಂದಿನವರೆಗೂ ಅಂದಾಜು ನೂರಾರು
ನಾನಾ ಬಗೆಯ ದೇವಿಯ ಅಲಂಕಾರ ಮಾಡಿ ಧಾರವಾಡ ಜನತೆ ಗಮನ ಸೆಳೆದಿದ್ದಾರೆ.

ಅವರ ದೇವಿಯ ಅಲಂಕಾರ ನೋಡಿದರೆ ಮೈ ಮನ ತುಂಬಿ ಭಕ್ತಿ ಭಾಚ ಉಕ್ಕಿ ಹರಿಯುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಅದರಲ್ಲೂ ಈ ಬಾರಿ ಒಂಬತ್ತು ದಿನಗಳ ಕಾಲ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಿ,
ಶ್ರೀ ಮಹೇಶ್ವರಿ ದೇವಿ
ಶ್ರೀ ಅಖಿಂಲಾಡೇಶ್ವರಿ ದೇವಿ,
ಗಾಯತ್ರಿ ದೇವಿ,
ಶ್ರೀ ಸಂಧ್ಯಾ ತಾಂಡವ, ಶ್ರೀ ರಾಮಕೃಷ್ಣ ಪರಮಹಂಸರು ಒಲಿಸಿಕೊಂಡ ಕೋಲ್ಕತ್ತಾದ ಶ್ರೀ ಕಾಳಿ ಮಾತಾ, ಶ್ರೀ ಬಾಹ್ಮರಿ ಹೀಗೆ ರಾತ್ರಿಯೀಡಿ ಕುಳಿತು ಹಲವಾರು ಅಲಂಕಾರ ಮಾಡುವ ಮೂಲಕ ಶ್ರದ್ಧೆಯಿಂದ ದಿನವೀಡಿ ಪೂಜಿಸಿ, ತಮ್ಮ ಜೊತೆಗೆ ಇತರರನ್ನು ಕೂಡ ಭಕ್ತಿ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ಕಾರ್ತಿಕ ಕಟ್ಟಿಮಠ ಅವರ ದಿವ್ಯ ಚೇತನ ಶಕ್ತಿ ಇತರರಿಗೆ ದಾರಿ ದೀಪವಾಗಿದೆ.

ಅಲ್ಲದೆ, ಅದರಲ್ಲೂ ವಿಶೇಷವಾಗಿ ಯುವ ಶಕ್ತಿಯನ್ನು ಇಂತಹ ಸನ್ಮಾರ್ಗದಲ್ಲೆ ಕರೆದುಕೊಂಡು ಹೋಗುವ ಪರಿಗೆ ಪ್ರತಿಯೊಬ್ಬರೂ ಮನಸೋಲಲೇಬೇಕು.

ಇಂತಹ ಗಮನ ಸೆಳೆಯುವ ನವರಾತ್ರಿ ಹಬ್ಬದ ವಿಭಿನ್ನ , ವೈಶಿಷ್ಟ್ಯಪೂರ್ಣ ಅಚರಣೆಯ ಸಂಭ್ರಮ ಸಡಗರ ಎಲ್ಲಡೆ ಪಸರಿಸಲಿ ಎಂಬುದು ನಮ್ಮ ಪ್ರಜಾಕಿರಣ. ಕಾಮ್ ಆಶಯವಾಗಿದೆ.

ಕಾರ್ತಿಕಗೆ ಬಾಲ್ಯದಿಂದಲೇ ಅಜ್ಜ ಶಶಿಧರ ಕಟ್ಟಿಮಠ, ಅಜ್ಜಿ ಪ್ರಭಾವತಿ ಕಟ್ಟಿಮಠ ಅವರ ಪ್ರೇರಣೆ, ಅಗತ್ಯ ಸಹಕಾರ ಮತ್ತು ಪೂಜೆ ಮಾಡುವ ಧಾರ್ಮಿಕ ವಿಧಿ ವಿಧಾನಗಳ ಅರಿವು ಮೂಡಿಸಿ, ಅದಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ಒದಗಿಸಿ ಅಪಾರ ಜ್ಞಾನವನ್ನು ಧಾರೆ ಎರೆದಿದ್ದಾರೆ.

ಅದಕ್ಕೆ ಕಾರ್ತಿಕ ಅತ್ತೆ ವಿಜಯಲಕ್ಷ್ಮಿ ಕಟ್ಟಿಮಠ, ತಂದೆ ಶಾಂತವೀರ ಕಟ್ಟಿಮಠ, ತಾಯಿ ಭಾಗ್ಯಶ್ರೀ ಹಾಗೂ ಚಿಕ್ಕಪ್ಪ ಮತ್ತು ಕುಟುಂಬ ಸದಸ್ಯರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಫಲವಾಗಿ ಪ್ರತಿಬಾರಿ ವಿಜಯದಶಮಿ ಸಂತಸ ಹೆಚ್ಚುತ್ತಲೇ ಸಾಗಿದ್ದು, ಇತರರಿಗೆ ಮಾದರಿಯಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *