ರಾಜ್ಯ

ಧಾರವಾಡದ ಹೆಬ್ಬಳ್ಳಿಯಲ್ಲಿ ನಾಮಕಾವಾಸ್ತೆ ಸೀಲ್ ಡೌನ್ ….!

ಧಾರವಾಡ prajakiran.com : ಕರೋನಾ ಸೋಂಕು ಧಾರವಾಡ ಜಿಲ್ಲೆಯ ಬಹುತೇಕ ಹಳ್ಳಿಗಳನ್ನು ಬಿಟ್ಟು ಬಿಡದೆ ಕಾಡುತ್ತಿದೆ.

ಆದರೆ ಅದರ ವಿರುದ್ದ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಗಳಾಗುತ್ತಿಲ್ಲ ಎಂಬ ದೂರುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿವೆ.

ಇದಕ್ಕೆ ಉತ್ತಮನಿರ್ದಶನವೆಂಬಂತೆಧಾರವಾಡದ ಹೆಬ್ಬಳ್ಳಿಯಲ್ಲಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಯಡವಟ್ಟು ಆಗಿದೆ.

ಹೆಬ್ಬಳ್ಳಿ ಗ್ರಾಮದಲ್ಲಿ ಪಾಸಿಟಿವ್ ಬಂದ ವ್ಯಕ್ತಿ ಊರೆಲ್ಲಾ ಓಡಾಡಿದ ಮೇಲೆ ಆತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗುತ್ತಿದೆ.

ಅಲ್ಲದೆ, ಕೇಸ್ ಬಂದಿದ್ದು ಕಳೆದ ಬುಧವಾರ, ಆದರೆ ಅಡ್ಮೀಟ್ ಆಗಿ ಕೇವಲ ಎರಡು ದಿನಗಳಲ್ಲಿ ಆರಾಮಆಗಿ ಮನೆಗೆ ಮರಳಿದ್ದಾನೆ. ಈಗ ಓಣಿಯ ಸೀಲ್ ಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ.

ಈ ಬಗ್ಗೆ ಪ್ರಜಾಕಿರಣ.ಕಾಮ್ ದೊಂದಿಗೆ ಮಾತನಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ, ಈಗ ಆ ಓಣಿಯ ಸಿಲ್ಡೌನ್ ಮಾಡಿ ಪ್ರಯೋಜನವೇನು.

ಯಾಕೆ ಈ ರೀತಿಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ನಮ್ಮ ಶಾಸಕರು  ಏನೂ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಜನ ಸತ್ತರೆ ಸಾಯಲಿಬಿಡಿ ಎಂಬ ಮನಸ್ಥಿತಿಗೆ ಬಂದು ತಲುಪಿದರೆ ಹೇಗೆ ಎಂದು ಪ್ರಶ್ನಿಸಿದರು.

ಕಳೆದ ಬುಧವಾರ ತಹಸೀಲ್ದಾರ್ ಸಿಬ್ಬಂದಿ, ಪಿ ಡಿ ಓಗೆ ಫೋನ್ ಮಾಡಿ,ಸಿಲ್ಡೌನ್ ಮಾಡೋಣ ಅಂತ ಹೇಳಿದರೂ ಬಾರದ ಸಿಬ್ಬಂದಿಯನ್ನು ಇಟ್ಟುಕೊಂಡು ಎನೂ ಮಾಡಬೇಕು.

ಅವರು ಯಾವುದೇ ಲೇಖಿ ಇಲ್ಲದೆ ನಾವೇನು ಮಾಡೊದು ಅಂತ ಪಂಚಾಯಿತಿಯವರು ಸುಮ್ಮನೆ ಆದರೆ, ಮುಂದೆ ‌ಮೂರು ದಿನ ಬಿಟ್ಟು ಸಭೆಯಲ್ಲಿ ಚರ್ಚೆ, ಈಗಲಾದರೂ ಸೀಲ್ ಡೌನ್ ಮಾಡೋಣಾ ಅಂತಾ ಪಂಚಾಯಿತಿ ಅಧಿಕಾರಿಗಳು ವ್ಯರ್ಥ ಪ್ರಯತ್ನ ಮಾಡಿದರು.

ಆದರೆ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಯಿಂದ ಯಾವುದೇ ಮಾಹಿತಿ ಇಲ್ಲ ಅಂತ ಅವರು ಹೀಗಾಗಿ ಒಂದೊಂದು ಇಲಾಖೆಯು ಸಂಬಂಧ ಇಲ್ಲದೆ ಹೋದರೆ ಎಡವಟ್ಟಿಗೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೆ ಕರೋನಾ ಸೋಂಕಿತ ರೋಗಿಗೆ ಪಾಸಿಟಿವ್ ಅಂತ ಹೇಳಿದ್ದು ಯಾರು, ಅವನು ಸಾಂಘೀಕ ಕೋರಾಂಟೈನಿಂದ ಆಸ್ಪತ್ರೆಗೆ ದಾಖಲು ಯಾರು ಮಾಡಿದರು.

ಅವನು ಆರಾಮವಾಗಿ ಬಂದು ಮೂರು ದಿನಗಳ ನಂತರ ಸೀಲ್ ಡೌನ್ ಯಾಕೆ ಎಂದು ಬೇಸರ ವ್ಯಕ್ತಪಡಿಸಿದರು.

ಮತ್ತೇ ಆ ಓಣಿಯಲ್ಲಿ ಸೊಂಕು ಹೆಚ್ಚು ಆದರೆ ಯಾರು ಹೊಣೆ, ಆ ಮನೆಯವರ ಗತಿ ಏನು ? ಪ್ರೋಟೋಕಾಲ್ ಏನಿದೆ ? ಸರಿಯಾದ ರೀತಿಯಲ್ಲಿ ಜಿಲ್ಲಾಡಳಿತ ಕರ್ತವ್ಯ ನಿರ್ವಹಿಸುತ್ತಿರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಆರೋಗ್ಯ ಇಲಾಖೆ ಸಿಬ್ಬಂದಿಗಳ ನಿಷ್ಕಾಳಜಿ, ಜಿಲ್ಲಾಡಳಿತದಿಂದ ಸರಿಯಾದ ರೀತಿಯಲ್ಲಿ ನಿರ್ವಹಣೆ ಆಗುತ್ತಿಲ್ಲ. ಟಾಸ್ಕಪೊರ್ಸ ಕಮೀಟಿ ಏನು ಮಾಡುತ್ತಿದೆ.

ಈ ಕಡೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ಗಮನ ಹರಿಸಬೇಕು.ಇನ್ನೂ ಮುಂದಾದರೂ ಮತ್ತೆ ಇಂತಹ ಯಡವಟ್ಟಗಳಾಗದಿರಲಿ ಎಂದು ಆಗ್ರಹಿಸಿದ್ದಾರೆ.

ಬಡವರ ಪ್ರಾಣ ಅಷ್ಟು ಕಡೆಗಣಿಸುವದು‌ ಸರಿಯಲ್ಲ. ಜನ ಗಾಬರಿ ಆಗಿದ್ದಾರೆ ಮುಂದೆ ಗತಿ ಏನು???? ಎಂದು ಪ್ರಶ್ನಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *