ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಅವಳಿನಗರದ ಈ ಪ್ರದೇಶಗಳಲ್ಲಿಯೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚು….!

ಸಾರ್ವಜನಿಕರು ಜಾಗೃತೆಯಿಂದ ಇರಲು ಪಾಲಿಕೆ ಆಯುಕ್ತರ ಮನವಿ

ಧಾರವಾಡ prajakiran. com ಜೂ. 8: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಈ ವಾರ್ಡ್‍ಗಳ ವ್ಯಾಪ್ತಿಯ ನಗರಗಳಲ್ಲಿ ಪರಿಶೀಲಿಸಲಾಗಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿ ಇರುವುದು ಕಂಡು ಬಂದಿದೆ.

ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಪೋಲಿಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳು ಸತತವಾಗಿ ಶ್ರಮಿಸುತ್ತಿದ್ದಾರೆ.

ಅವಳಿನಗರದ ಪ್ರತಿ ವಾರ್ಡ್‌ ನ ಪ್ರತಿಯೊಬ್ಬರು ತಪ್ಪದೇ ಮಾಸ್ಕ್ ಧಾರಣೆ, ಸ್ಯಾನಿಟೈಜರ್ ಬಳಕೆ ಮತ್ತು ಪರಸ್ಪರ ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.

ಆದರೂ ಮಹಾನಗರದ ಕೆಲವು ವಾರ್ಡ್‍ಗಳ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವಳಿ ನಗರದಲ್ಲಿ ಅತಿ ಹೆಚ್ಚು ಕೋವಿಡ್-19 ಸೋಂಕಿತರಿರುವ ಪ್ರದೇಶಗಳು :

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜೂನ್ 7ರ ವರೆಗೆ, ವಲಯ 6 ರ ವಾರ್ಡ್ ನಂ: 48 ಚೇತನಾ ಕಾಲೋನಿ, ಗದಗ ರಸ್ತೆ ಹುಬ್ಬಳ್ಳಿ – 125 ಪ್ರಕರಣಗಳು, ವಲಯ 1 ರ ವಾರ್ಡ್ ನಂ: 1 ಬಸವ ನಗರ, ಕೆಲಗೇರಿ ಧಾರವಾಡ – 103 ಪ್ರಕರಣಗಳು, ವಲಯ 4 ರ ವಾರ್ಡ್ ನಂ: 23 ನವನಗರ, ಇ.ಡಬ್ಲ್ಯೂ.ಎಸ್,. ಎಲ್.ಐ.ಜಿ., ಕೆ.ಎಚ್.ಬಿ ಕಾಲೋನಿ ಹುಬ್ಬಳ್ಳಿ – 102 ಪ್ರಕರಣಗಳು,

ವಲಯ 7 ರ ವಾರ್ಡ್ ನಂ: 36 ರೇಣುಕಾ ನಗರ, ರವಿ ನಗರ, ಗೋಕುಲ್ ರೋಡ್ ಹುಬ್ಬಳ್ಳಿ- 99 ಪ್ರಕರಣಗಳು , ವಲಯ 5 ವಾರ್ಡ್ ನಂ: 35 ವಿದ್ಯಾನಗರ, ಜಯನಗರ ಹುಬ್ಬಳ್ಳಿ – 97 ಪ್ರಕರಣಗಳು

ವಲಯ 12 ರ ವಾರ್ಡ್ ನಂ: 22 ರಾಜೀವಗಾಂಧಿ ನಗರ, ಎಸ್.ಡಿ.ಎಮ್ ಮೆಡಿಕಲ್ ಕಾಲೇಜ ಧಾರವಾಡ – 73 ಪ್ರಕರಣಗಳು,

ವಲಯ 12 ರ ವಾರ್ಡ್ ನಂ: 19 ವಿದ್ಯಾಗಿರಿ, ಗಾಂಧಿ ನಗರ ಧಾರವಾಡ -72 ಪ್ರಕರಣಗಳು,

ವಲಯ 6 ರ ವಾರ್ಡ್ ನಂ : 30 ದಯಾನಂದ ಕಾಲೋನಿ, ಹಳೇ ಬಾದಾಮಿ ನಗರ ಹುಬ್ಬಳ್ಳಿ – 71 ಪ್ರಕರಣಗಳು ,

ವಲಯ 7 ರ ವಾರ್ಡ್ ನಂ: 40 ಬಸವಾ ನಗರ, ಗುಡಿ ಪ್ಲಾಟ್ ಹುಬ್ಬಳ್ಳಿ – 71 ಪ್ರಕರಣಗಳು,

ವಲಯ 3 ರ ವಾರ್ಡ್ ನಂ: 3 ಸಂಪಿಗೆ ನಗರ, ಕುಮಾರೇಶ್ವರ ನಗರ ಧಾರವಾಡ – 64 ಪ್ರಕರಣಗಳು,

ವಲಯ 7 ರ ವಾರ್ಡ್ ನಂ: 39 ಆನಂದ ನಗರ ರಸ್ತೆ, ವಿಶಾಲ ನಗರ ಸಿದ್ಧಾರೋಡ ಮಠ ಹುಬ್ಬಳ್ಳಿ – 63 ಪ್ರಕರಣಗಳು,

ವಲಯ 5 ರ ವಾರ್ಡ್ ನಂ: 28 ಅಶೋಕ ನಗರ, ರಾಜ ನಗರ , ಚಾಮುಂಡೇಶ್ವರಿ ನಗರ ಹುಬ್ಬಳಿ ್ಳ-59 ಪ್ರಕರಣಗಳು,

ವಲಯ 1 ರ ವಾರ್ಡ್ ನಂ: 2 ನಾರಾಯಣಪೂರ, ಫ್ಪಾರೇಸ್ಟ್ ಕಾಲೋನಿ ಧಾರವಾಡ – 55 ಪ್ರಕರಣಗಳು ,

ವಲಯ 7 ರ ವಾರ್ಡ್ ನಂ: 37 ರಾಮಲಿಂಗೇಶ್ವರ ನಗರ ಹುಬ್ಬಳ್ಳಿ- 54 ಪ್ರಕರಣಗಳು,

ವಲಯ 1 ರ ವಾರ್ಡ್ ನಂ: 17 ಸಿ.ಬಿ.ನಗರ, ಕಲ್ಯಾಣ ನಗರ, ಶಿವಗಿರಿ ಧಾರವಾಡ – 47 ಪ್ರಕರಣಗಳು,

ವಲಯ 6 ರ ವಾರ್ಡ್ ನಂ: 31 ಕೇಶ್ವಾಪೂರ, ಶಬರಿ ನಗರ ಹುಬ್ಬಳ್ಳಿ- 47 ಪ್ರಕರಣಗಳು, ವಲಯ 3 ರ ವಾರ್ಡ್ ನಂ: 12 ಮರಾಠಾ ಕಾಲೋನಿ ಧಾರವಾಡ – 41 ಪ್ರಕರಣಗಳು, ವಲಯ 4 ರ ವಾರ್ಡ್ ನಂ: 24 ಅಧ್ಯಾಪಕ ನಗರ ಹುಬ್ಬಳ್ಳಿ -41 ಪ್ರಕರಣಗಳು,

ವಲಯ 12 ರ ವಾರ್ಡ್ ನಂ 20: ವ್ಹಾಯ್.ಎಸ್.ಕಾಲೋನಿ, ಲಕ್ಷ್ಮೀ ನಗರ ಧಾರವಾಡ – 41 ಪ್ರಕರಣಗಳು, ವಲಯ 10 ರ ವಾರ್ಡ್ ನಂ : 41 ಹೆಗ್ಗೇರಿ ಕಾಲೋನಿ, ಬಸವ ನಗರ ಹುಬ್ಬಳ್ಳಿ – 40 ಪ್ರಕರಣಗಳು ದಾಖಲಾಗಿವೆ.

ಒಟ್ಟು ಅವಳಿನಗರದ ಸುಮಾರು 9 ವಲಯ ವ್ಯಾಪ್ತಿಯ 20 ವಾರ್ಡ್‍ಗಳ 42 ಪ್ರದೇಶಗಳಲ್ಲಿ 1365 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *