ಯಾದಗಿರಿ prajakiran.com : ಕಳೆದ 55 ದಿನಗಳಿಂದ ಯಾದಗಿರಿ ಜಿಲ್ಲೆ ಸಂಪೂರ್ಣ ಗ್ರೀನ್ ಜೋನ್ ನಲ್ಲಿ ಇತ್ತು. ಆದರೆ ಕೇವಲ ಎರಡೇ ಎರಡು ದಿನದಲ್ಲಿ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳುವಂತೆಮಾಡಿದೆ.
ಭಾನುವಾರ ಬೆಳಗ್ಗೆ ಯಾದಗಿರಿ ಜಿಲ್ಲೆಯ ಆರು ಜನರಿಗೆ ಕರೋನಾ ಬಂದಿತ್ತು. ಸಂಜೆ ಮತ್ತೇ 18 ಜನರಿಗೆ ಬಂದಿದ್ದು, ಒಂದೇ ದಿನ ಒಟ್ಟು 24 ಜನ ಸೋಂಕಿತರಾಗಿದ್ದಾರೆ. ಆ ಮೂಲಕ ಎರಡೇ ದಿನದಲ್ಲಿ ಶತಕ ಬಾರಿಸಿದ ಯಾದಗಿರಿ ಜಿಲ್ಲೆ
ನಿನ್ನೇ 87 ಸೋಂಕಿತರಿದ್ದರು. ಇವತ್ತು 24 ಜನರಿಗೆ ಸೋಂಕು ತಗಲುವ ಮೂಲಕ 111 ಕ್ಕೆ ಬಂದು ನಿಂತಿದೆ. ಅದರಲ್ಲೂ ಮಹಾರಾಷ್ಟ್ರ ಹಾಗೂ ಹೊರ ರಾಜ್ಯದಿಂದ ಬಂದವರಿಂದಲೇ ಜಿಲ್ಲೆಯ ಜನರಿಗೆ ಮಹಾಮಾರಿ ವಕ್ಕರಿಸಿದೆ.
ಇದು ಸ್ವಲ್ಪ ಸಮಾಧಾನದ ಸಂಗತಿಯಾಗಿದ್ದು, ಎಲ್ಲರೂ ಕ್ವಾರಂಟೆನ್ ನಲ್ಲಿರುವವರಿಗೆ ಹರಡಿದೆ. ಹೀಗಾಗಿ ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಆತಂಕ ಪಡುವಅಗತ್ಯವಿಲ್ಲ ಎಂದು ಅಭಯ ನೀಡಿದೆ.