ಅಂತಾರಾಷ್ಟ್ರೀಯ

ಗೋಮಯ ದೀಪ ಬೆಳಗಿಸಿ ಮಾಲಿನ್ಯ ಮುಕ್ತ, ಆತ್ಮ ನಿರ್ಭರತೆಯ ದೀಪಾವಳಿ ಆಚರಿಸಿ

  • ಬೆಂಗಳೂರು Prajakiran.com : ದೀಪಾವಳಿ ಹಬ್ಬವು ಅಂತರಂಗದ ಕತ್ತಲನ್ನು ತೊಲಗಿಸಿ ಜ್ಞಾನದ ಬೆಳಕನ್ನು ಹೊತ್ತಿಸುವುದರ ಪ್ರತೀಕ. ಇಂತಹ ಪವಿತ್ರ ಹಬ್ಬವನ್ನು ಒಂದು ಸಾರ್ಥಕ ರೀತಿಯಲ್ಲಿ ಆಚರಿಸಬೇಕು ಎಂಬ ಘನ ಉದ್ದೇಶವನ್ನು ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನೆ ಪ್ರಚಾರ ಪ್ರಸಾರ ಅಭಿಯಾನ ಹೊಂದಿದೆ.

ಅಧ್ಯಕ್ಷರಾದ ಶ್ರೀಮತಿ ಅಮಿತಾ ರಾಣಿ ಪಾಂಡೆಯವರು ರಾಜ್ಯಪಾಲರಾದ ವಜುಬಾಯಿ ವಾಲಾ ರವರಿಗೆ ಗೋಮಯದಿಂದ ಮಾಡಿದ ದೀಪವನ್ನು ನೀಡಿದರು.

ಈ ಮೂಲಕ ಪರಿಸರಸ್ನೇಹಿ ದೀಪಾವಳಿಯನ್ನು ಆಚರಿಸಲು ಕರ್ನಾಟಕದ ಜನತೆಗೆ ನಿಮ್ಮ ಅಮೂಲ್ಯ ಮಾತುಗಳ ಮೂಲಕ ಕರೆ ನೀಡಬೇಕೆಂದು ಮನವಿ ಮಾಡಿಕೊಂಡರು.

ಈ ಮಾತುಗಳಿಗೆ ಪೂರಕವಾಗಿ ರಾಜ್ಯಪಾಲರು ಕರ್ನಾಟಕದ ಜನತೆ ಈ ಗೋಮಯ ದೀಪಗಳನ್ನು ಬೆಳಗಿಸುವುದರ ಮೂಲಕ ಮಾಲಿನ್ಯ ಮುಕ್ತ ಮತ್ತು ಆತ್ಮ ನಿರ್ಭರತೆಯ ದೀಪಾವಳಿಯನ್ನು ಆಚರಿಸಿ ಎಂದು ನಿವೇದಿಸುತ್ತೇನೆ ಎಂದಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ಜೈನ್ರವರು ಗೋಶಾಲೆಗಳಲ್ಲಿ ಉತ್ಪಾದನೆಯಾಗುವ ಸಗಣಿಯನ್ನು ಈ ದೀಪಗಳ ರಚನೆಗೆ ಮೂಲ ಸಾಮಾಗ್ರಿಯಾಗಿ ಬಳಸುವುದರಿಂದ ಗೋಶಾಲೆಗೆ ಆದಾಯ ಮಾರ್ಗವೂ ಆಗುತ್ತದೆ ಎಂದರು.

ಹಾಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ದಿನೇಶ್ರವರು ಮಾತನಾಡಿ, ಒಂದು ಲಕ್ಷದ ಇಪ್ಪತ್ತೈದು ಸಾವಿರ ಗೋವಿನ ದೀಪಗಳನ್ನು ಹಂಚುವ ಉದ್ದೇಶವನ್ನು ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನೆ ಪ್ರಚಾರ ಪ್ರಸಾರ ಅಭಿಯಾನ ಹೊಂದಿದೆ ಎಂದು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *