ರಾಜ್ಯ

ಸಾರ್ವಜನಿಕ ಗಣೇಶೋತ್ಸವ ರದ್ದು : ಮುಖ್ಯಮಂತ್ರಿಗೆ ಬಹಿರಂಗ ಪತ್ರ

ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕಲಾವಿದರ ಸ್ಥಿತಿಗೆ ಮರುಕ

ಧಾರವಾಡ prajakiran.com : ಜಗತ್ತನ್ನೇ ಕಂಗಾಲಾಗಿಸಿದ ಕರೋನಾದಿಂದಾಗಿ ಲಾಕ್ ಡೌನ ಅವಧಿಯಲ್ಲಿ ಹಲವಾರು ಉದ್ಯಮಗಳು ನೆಲ ಕಚ್ಚಿವೆ.

ಲಾಕ್ ಡೌನ ಸಡಿಲಗೊಂಡ ಬಳಿಕ  ಬಂದ ಸಾಲು ಸಾಲು ಹಬ್ಬಗಳಿಂದ ವಿವಿಧ ಉದ್ಯೋಗ, ವ್ಯಾಪಾರ ಚಟುವಟಿಕೆಗಳು ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದ ಜನರಿಗೆ ಶ್ರಾವಣ ಮಾಸಅಷ್ಟೇನು ಚೇತರಿಕೆ ನೀಡಿಲ್ಲ.

ಅದರ ಬೆನ್ನಲ್ಲೇ ಬಂದ ಗಣೇಶ ಚತುರ್ಥಿಗೆ ರಾಜ್ಯ ಸರಕಾರ ಸಾರ್ವಜನಿಕ ಗಣೇಶೋತ್ಸವ ರದ್ದುಪಡಿಸಿದ ಆದೇಶ ಬರಸಿಡಿಲಿನಂತೆ ಬಂದೆರಗಿದೆ.

ಈ ಹಿನ್ನಲೆಯಲ್ಲಿ ನೋಂದ ಕಲಾವಿದರು ಆತ್ಮಹತ್ಯೆಯ ದಾರಿ ತುಳಿಯುವ ಮಾತುಗಳನ್ನು ಆಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧಾರವಾಡ ಜಿಲ್ಲೆಯೊಂದರಲ್ಲಿಯೇ ಕಲೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಸಾವಿರಾರು ಕಲಾವಿದರ ಬದುಕು ದುರ್ಬರಗೊಂಡಿದೆ.

ಅದೇ ರೀತಿ ನಾಡಿನ ಸಹಸ್ರಾರು ಕಲಾವಿದರ ಪರಿಶ್ರಮ ವ್ಯರ್ಥವಾಗುವ ಕಾಲ ಸನ್ನಿಹಿತ ಕಂಡು ಆತಂಕಗೊಂಡಿದ್ದಾರೆ. ವರ್ಷವಿಡಿ ಕುಟುಂಬ ಸಮೇತ ಹಗಲು ರಾತ್ನಿ ಎನ್ನದೆ ದುಡಿದು ಗಣೇಶ ಪ್ರತಿಮೆಗಳನ್ನು ತಯಾರಿಸುವ ಕಲಾವಿದರು ಕರೋನಾದ ಕಾರ್ಮೋಡ ಮಂಕಾಗಿಸಿದೆ.

ಆ ಆತಂಕದ ಹಿನ್ನಲೆಯಲ್ಲಿಯೇ ರಾಜ್ಯ ಸರಕಾರ ಸಾರ್ವಜನಿಕ ಗಣೇಶೋತ್ಸವ ರದ್ದುಗೊಳಿಸಿರುವ ಕ್ರಮ ಖಂಡಿಸಿ ನಾಡಿನ ದೊರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರಿಗೆ ಈ ಬಹಿರಂ ಪತ್ರ ಬರೆಯಲಾಗಿದೆ.

ಕಳೆದ ಹಲವು ದಶಕಗಳ ನಿರಂತರ  ಹೋರಾಟ, ಪರಿಶ್ರಮದ ಮೂಲಕ ಬೇರುಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಇಂದು ಮುಖ್ಯಮಂತ್ರಿ ಗದ್ದುಗೆ ಏರಿದ ನಿಮಗೆ ನಮ್ಮಂತಹ ಬಸವಳಿದ ಜನರ ಬದುಕಿನಅರಿವಿದೆ ಎಂದೆ ಭಾವಿಸುತ್ತೇವೆ.

ಜೊತೆಗೆ ಇದು ಅಸಂಖ್ಯಾತ ಜನರ ಅನ್ನ ಕಸಿದಿದೆ ಎನ್ನದೆ ಬೇರೆ ವಿಧಿಯಿಲ್ಲ. ಏಕೆಂದರೆ ಸಾರ್ವಜನಿಕ ಗಣೇಶೋತ್ಸವಕ್ಕೆ ಕೇವಲ ನಾಲ್ಕೈದು ಜನರು ಸೇರಿ ಮಾಡುವ ಆಚರಣೆಯಲ್ಲ. ಇದಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನಲೆಯಿದೆ.

ಅದರದೇ ಆದ ಧಾರ್ಮಿಕ ಪ್ರಾಮುಖ್ಯತೆ, ಪ್ರಾಧಾನ್ಯತೆ, ಭಕ್ತಿ, ಭಾವ, ಶ್ರದ್ದೆಯ ಹೊಳಪಿದೆ. ಸಾರ್ವಜನಿಕವಾಗಿ ಮಹಾಗಣಪತಿ ವಿಗ್ರಹವನ್ನು ಕೇವಲ ಪ್ರತಿಷ್ಠಾಪಿಸಿ, ಪಟಾಕಿ ಹೊಡೆದು ಮನೆಗೆ ಹೋಗದೆ, ಯುವಕರನ್ನು ಸಂಘಟಿಸುವ ಧಾರ್ಮಿಕ ಮಹತ್ವ ಸಾರುವ, ಸಂಪ್ರದಾಯ ಆಚರಣೆ ಪರಿಚಯಿಸುವ ಕೆಲಸಕ್ಕೆ ಹಿನ್ನಡೆಯಾಗಿದೆ.

ಜೊತೆಗೆ ವಿಘ್ನ ವಿನಾಯಕ, ಸಂಕಷ್ಟ ನಿವಾರಣೆ ಗಣೇಶನನ್ನೇ ನಂಬಿದ ಭಕ್ತರ ಭಾವನೆಗಳಿಗೆ ತೀವ್ರ ನೋವಾಗಿದೆ. ಮತ್ತೊಂದೆಡೆ ಈ ಹಬ್ಬವನ್ನೇ ನಂಬಿದ ವಿವಿಧ ವೃತ್ತಿಯ ಕುಶಲ ಕರ್ಮಿಗಳು, ಕಲಾವಿದರು, ವ್ಯಾಪಾರಸ್ಥರು ತುಂಬಾ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

 ಇದಕ್ಕೆ ಉದಾಹರಣೆಗೆ- ಹಲವಾರು ತಿಂಗಳುಗಳಿಂದ ಶ್ರಮವಹಿಸಿ ಬಂಡವಾಳ ಹಾಕಿ ಹಗಲಿರುಳು ದುಡಿದು ಆಕರ್ಷಕ ಸಾರ್ವಜನಿಕವಾಗಿ ಕೂಡಿಸುವ ಗಣೇಶ ಮೂರ್ತಿಗಳನ್ನು ತಯಾರಿಸಿದ ಕಲಾವಿದರ ಮೂರ್ತಿಗಳು ಮಾರಾಟವಾಗುತ್ತಿಲ್ಲ.

ಬದಲಾಗಿ ಕೊಟ್ಟ ಮುಂಗಡ ರದ್ದುಪಡಿಸಿ, ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗಲು ಗಣೇಶ ಮಂಡಳಿಗಳು ನಿರಾಕರಿಸುತ್ತಿವೆ. ಇದರಿಂದಾಗಿ ನಮ್ಮ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಕಲಾವಿದರಿಗೆ ದಿಕ್ಕು ತೋಚದಂತಾಗಿದೆ.

ಅವರಿಗೆ ಇದರಿಂದ ಲಾಭ ದೊರೆಯುವದಿರಲಿ, ಬದುಕುವುದಕ್ಕಾಯೇ ಹೆಣಗಾಡಬೇಕಾಗಿದೆ. ವರ್ಷವೀಡಿ ಶ್ರಮ ನೀರಲ್ಲಿ ಹೋಮವಾಗುವ ಜೊತೆಗೆ ಮುಂದಿನ ವರ್ಷದ ವರೆಗೆ ಕಾಯಬೇಕು.

ಅಲ್ಲಿಯವರೆಗೆ ಮಾಡಿದ ಸಾಲ ತೀರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಒಂದಡೆಯಾದರೆ, ಇನ್ನೊಂದಡೆ ತಮ್ಮನ್ನೇ ನಂಬಿದ ಸಂಸಾರ ಮುನ್ನಡೆಸುವುದು ಹೇಗೆಂಬುದು. ಇವರಷ್ಟೇ ಅಲ್ಲದೆ,

ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲು ಆಕರ್ಷಕ ಮಂಟಪ ನಿರ್ಮಿಸುತ್ತಿದ್ದ ಶಾಮಿಯಾನ, ವಿದ್ಯುತ್ ಅಲಂಕಾರದ ವೃತ್ತಿಯವರು, ಜೊತೆಗೆ ಅಲಂಕಾರಿಕ ವಸ್ತುಗಳ ಮಾರಾಟಗಾರರು, ಹೂ ಹಣ್ಣು ಕಾಯಿಪಲ್ಯ, ದಿನಸಿ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಬೇಡಿಕೆ ಬರದೇ ವ್ಯಾಪಾರದಲ್ಲಿ ಕುಸಿತವಾಗುವ ಲಕ್ಷಣಗಳಿವೆ.

ಇದರೊಂದಿಗೆ ಸಾರ್ವಜನಿಕ ಗಣೇಶೋತ್ಸವಕ್ಕಾಗಿಯೇ ಸಜ್ಜುಗೊಂಡ ವಿವಿಧ ರೀತಿಯ ಕಲಾವಿದರು, ಜಾನಪದ ಕಲಾ ತಂಡಗಳು ಕಳೆದ ಹಲವುದಿನಗಳಿಂದಅಯೋಮಯವಾಗಿದೆ.

ಕರೋನಾ ಸಂಕಷ್ಟ ನಿವಾರಣೆಗೆ ಸ್ವತಃ ಪೂಜೆ, ಪ್ರಾರ್ಥನೆ, ಧಾರ್ಮಿಕ ಆಚರಣೆಗಳ ಮೇಲೆ ಪ್ರಬಲವಾದ ನಂಬಿಕೆ ಹೊಂದಿರುವ ನೀವೇ ಈಗ ಸಾರ್ವಜನಿಕ ಗಣೇಶ ಪ್ರತಿಷ್ಠಾನಕ್ಕೆ ಅವಕಾಶವಿಲ್ಲ ಎಂದರೆ ಹೇಗೆ ಎಂಬುದು ಅರ್ಥವಾಗುತ್ತಿಲ್ಲ.

ಇದನ್ನೇ ನಂಬಿ ಬದುಕಿತ್ತಿರುವವರ ಬದುಕಿನ ಪಾಡೇನು. ಈ ನಿಟ್ಟಿನಲ್ಲಿ ನಮಗೆ ನಿಮ್ಮ ಮೇಲೆ ಅಚಲವಾದ ವಿಶ್ವಾಸವಿದೆ. ನಾಡಿನ ಒಳಿತಿಗಾಗಿ ಜನರ ಸಂಕಷ್ಟ ನಿವಾರಣೆಗೆ ಗಣೇಶ ವಿಗ್ರಹ ಪ್ರತಿಷ್ಠಾಪಿಸಲು

  ಇಂಥ ಸಂದಿಗ್ಧ ಸಮಯದಲ್ಲಿ ನಮ್ಮ ಕೈಹಿಡಿಯಬೇಕು, ಆ ಮೂಲಕ ಹಬ್ಬ ಹರಿದಿನಗಳನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲು ಅವಕಾಶ ಕಲ್ಪಿಸಬೇಕು ಎಂದು ಎಲ್ಲಾ ನೋಂದ ಬಡಜೀವಗಳ ಪರವಾಗಿ ಕಳಕಳಿಯ ಮನವಿ ಮಾಡುತ್ತಿದ್ದೇವೆ.   

ಈಗಾಗಲೇ ಕಲಾವಿದರಿಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಹಿರಿಯ ಯೋಗ ಗುರು ತ.ಬ. ಚವ್ಹಾಣ, ಹಿರಿಯ ಪರಿಸರವಾದಿ ಬಸವರಾಜ ಕೊಣ್ಣೂರ, ನಿವೃತ್ತಅಧಿಕಾರಿ ಹಿರೇಮಠ, ಜನಜಾಗೃತಿ ಸಂಘದಅಧ್ಯಕ್ಷ ಬಸವರಾಜ ಕೊರವರ, ಪ್ರಜಾಕಿರಣ.ಕಾಮ್ ಪ್ರಧಾನ ಸಂಪಾದಕ ನಾಗರಾಜ ಕಿರಣಗಿ, ಬಿಜೆಪಿ ಮುಖಂಡ ಮಂಜುನಾಥ ನಡಟ್ಟಿ, ವರ್ತಕ ಉದಯಯಂಡಿಗೇರಿ, ವಿಶ್ವಹಿಂದುಪರಿಷತ್, ಬಜರಂಗದಳ ಹಾಗೂಧಾರವಾಡ ಜಿಲ್ಲೆಯ ಹಲವು ಯುವಕ ಮಿತ್ರರು ನೆರವಿನ ಭರವಸೆ ನೀಡಿ ಕಲಾವಿದರೊಂದಿಗೆ ಸಮಾಜವಿದೆ ಎಂಬಅಭಯ ನೀಡಿದ್ದಾರೆ.

ನೀವು ಕೂಡ ಮಾತೃಹೃದಯದವರಾಗಿದ್ದು, ಅವರ ನೋವಿಗೆ ಸ್ಪಂದಿಸುವ ಭರವಸೆಯಿದೆ. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕೋವಿಡ್ ನಿಯಮಾವಳಿ ಪ್ರಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬೇಕು ಎಂದು ಇನ್ನೊಮ್ಮೇ ಈ ಬಹಿರಂಗ ಪತ್ರದ ಮೂಲಕ ಕೋರುತ್ತೇವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *