ಅಪರಾಧ

ಗದಗನಲ್ಲಿ ಮುಂದುವರೆದ ಗಾಂಜಾ ಘಾಟು : ಅಕ್ರಮವಾಗಿ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಗದಗ prajakiran.com : ತಮ್ಮ ಹೊಲದಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಒಣಗಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಗದಗನಲ್ಲಿ ನಡೆದಿದೆ.

ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯ ಡೋಣಿ ಗ್ರಾಮದ ಆರೋಪಿ ಪ್ರವೀಣಗೌಡ್ರ ತಂದೆ ಭರಮಗೌಡ್ರ ಜಯನಗೌಡ್ರ ಮನೆಯಲ್ಲಿ ಈ ಗಾಂಜಾ ಪತ್ತೆಯಾಗಿದೆ.

ಈ ಕುರಿತು ಖಚಿತ ಮಾಹಿತಿ ಪಡೆದ ಎಸ್.ಎಂ. ಬೆಂಕಿ ನೇತೃತ್ವದ ಮುಂಡರಗಿ ಠಾಣೆಯ ತಂಡ ದಾಳಿ ಮಾಡಿ ಆರೋಪಿ ಪ್ರವೀಣಗೌಡ್ರ ತಂದೆ ಭರಮಗೌಡ್ರ ಜಯನಗೌಡ್ರ  ಬಂಧಿಸಿದ್ದಾರೆ. ಬಂಧಿತನ ಬಳಿ ಅಂದಾಜು ಕಿಮ್ಮತ್ತ ರೂ. 1,50,000 ಮೌಲ್ಯದ 1200 ಗ್ರಾಂ ಗಾಂಜಾ ದಸ್ತಗಿರಿ ಮಾಡಿದ್ದಾರೆ.

ಅಲ್ಲದೆ, ಈ ಕುರಿತು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಲಾಗಿದೆ.

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಸುಧೀರ ಎಂ ಬೆಂಕಿ ಹಾಗೂ ಸಿಬ್ಬಂದಿಯ ಕಾರ್ಯ ವೈಖರಿ ಬಗ್ಗೆ ಗದಗ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಾದಕ ವಸ್ತು ಗಾಂಜಾ ಮಾರಾಟ ಉತ್ಪಾದನೆ ಕುರಿತು ಸಾರ್ವಜನಿಕರು ಗದಗ ಜಿಲ್ಲಾ ಪೊಲೀಸ್ ದೂರವಾಣಿ ಸಂ. 0872-236260 ನೇದ್ದಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡಬಹುದು.

ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಎಸ್.ಪಿ ತಿಳಿಸಿದ್ದಾರೆ

ಹೊಲದಲ್ಲಿ ಗಾಂಜಾ ಗುಂಗು :

ರೋಣ ಠಾಣಾ ವ್ಯಾಪ್ತಿಯ ಸವಡಿ ಗ್ರಾಮದ ತನ್ನ ಹೊಲದಲ್ಲಿ ಆರೋಪಿಯು ಅಕ್ರಮವಾಗಿ ಬೆಳೆದ 4 ಕೆಜಿ 100 ಗ್ರಾಂ ಅಂ.ಕಿ ರೂ. 80,000/- ಬೆಲೆಯ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ, 532 ಗ್ರಾಂ ಅಂ.ಕಿ. ರೂ 5000/- ಬೆಲೆಯ ಒಣ ಗಾಂಜಾ ಹಾಗೂ ಗಾಂಜಾ ಮಾರಿದ ರೋಖ ಹಣ ರೂ. 200/- ನನ್ನು ವಶಪಡಿಸಿಕೊಂಡು NDPS Act ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದೆ ಎಂದು ಪೊಲೀಸರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *