ರಾಜ್ಯ

ಹಪ್ತಾವಸೂಲಿಯಿಂದ ಮೂರು ಕೊಲೆಗಳವರೆಗೆ ಫ್ರೂಟ್ ಇರ್ಫಾನ್ ಹೆಸರು ತಳಕು…!

ಸರಗಳ್ಳತನ, ಖೋಟಾ ನೋಟುಗಳ ವ್ಯವಹಾರ…!

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕುಖ್ಯಾತಿ ಗಳಿಸಿದ್ದ ಫ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಇರ್ಫಾನ್ ಹಂಚಿನಾಳ ಆರಂಭದ ದಿನಗಳನ್ನು ಮೆಲಕು ಹಾಕಿದರೆ ಇವನೇನಾ ಫ್ರೂಟ್ ಎಂಬ ಅನುಮಾನ ಮೂಡಿಸುವುದು ಸಹಜ.

ಧಾರವಾಡದಲ್ಲಿ ಸಣ್ಣಪುಟ್ಟ ಸರ ಗಳ್ಳತನದಿಂದ ಆರಂಭವಾದ ಆತನ ಕರಾಳ ಜಗತ್ತಿನ ಹೆಜ್ಜೆ ಗುರುತು ಖೋಟಾ ನೋಟುಗಳ ವ್ಯವಹಾರದಿಂದ ಮತ್ತೊಂದು ಮಜಲು ಪಡೆದಿತ್ತು.

ಆತನೇ ಆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗತಿಯಾಗುವ ಮೂಲಕ ಹಣ್ಣು ವ್ಯಾಪಾರ ಆರಂಭಿಸಿದ. ಅಲ್ಲಿ ಕೂಡ ಸಣ್ಣ ಪುಟ್ಟ ಜಗಳ ಬಗೆಹರಿಸುವುದು, ಹಣ್ಣಿನ ಗಾಡಿ ಬಿಡುವುದು, ಹಪ್ತಾ ವಸೂಲಿ, ಸೆಟ್ಲಮೆಂಟ್ ಮಾಡುವುದು, ಹೀಗೆ ಶುರುವಾದ ಆತನ ರೌಡಿಸಂ ಮೀಟರ್ ಬಡ್ಡಿಗೆ ತಿರುಗಿತು.

ಅದಾದ ನಂತರವೇ ಇಮ್ತಿಯಾಜ್ ತಂಬೋಲಿ ಕೊಲೆ ಪ್ರಕರಣ, ಜಿದ್ದಿ ಮಲ್ಲಿಕ್ ಕೊಲೆ ಪ್ರಕರಣ ಹಾಗೂ ಹುಸೇನ್ ಬಿಜಾಪುರಿ ಕೊಲೆ ಪ್ರಕರಣಗಳಲ್ಲಿ ಇತನ ಹೆಸರುಗಳು ಕೇಳಿಬಂದವು.

ಪೊಲೀಸರಿಗೆ ವ್ಯವಹಾರ ಕುದುರಿಸುತ್ತಲೇ ತನ್ನ ಜಗತ್ತು ವಿಸ್ತಿರಿಸಿಕೊಂಡ ಈತ ದೊಡ್ಡ ಸಾಮಾಜ್ರ್ಯ ಕಟ್ಟಲು ಹೋದ. ತನ್ನದೇ ಆದ ಕೋಟೆ ಕಟ್ಟಿ ಮೆರೆದಾಡಿದ.

ಗಾಡಿ ಗೋಡಾಗಳನ್ನು ಇಟ್ಟುಕೊಂಡು ಹುಡುಗರ ಪಡೆ ಕಟ್ಟಿಅದನ್ನು ಮುಂದುವರೆಸಿದ.

ಕೆಲ ಪೊಲೀಸರ ಜೊತೆಗೆ ಶಾಮೀಲಾಗಿ ಹಣದಿಂದಲೇ ಎಲ್ಲವನ್ನು ಆಟವಾಡಿಸುತ್ತಾ ಬಂದ ಇತನ ಮೇಲೆ ಹತ್ತು ಹಲವು ಜೀವ ಬೆದರಿಕೆ ಪ್ರಕರಣ, ಮೀಟರ್ ಬಡ್ಡಿ ಕಿರುಕುಳ ದೂರುಗಳು ಇದ್ದವು.

ಈ ಹಿಂದೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಡಿ.ಎಲ್ ನಾಗೇಶ ಇತನಿಗೆ ಚೆನ್ನಾಗಿ ಡ್ರಿಲಿಂಗ್ ಮಾಡಿದ್ದರು. ಅಲ್ಲದೆ, ನಿನ್ನ ಬಳಿ ಎಷ್ಟು ದುಡ್ಡಿದೆ. ಪೊಲೀಸ್ ಠಾಣೆಯನ್ನೇ ಬುಕ್ ಮಾಡುವಷ್ಟು ತಾಕತ್ ಇದೆಯೇ ಎಂದು ಮೈ ಚಳಿ ಬಿಡಿಸಿದ್ದರು.

ಈ ಹಿಂದೆ ಪೊಲೀಸರಿಗೆ ಎಷ್ಟು ಬೇಕಾಗಿದ್ದನೋ ಅಷ್ಟೇ ತಲೆ ನೋವು ಕೂಡ ಆಗಿದ್ದ. ಯಾರೇ ಏನೇ ದೂರು ಕೊಟ್ಟರು ಅವುಗಳನ್ನು ಪೊಲೀಸರ ಸಹಾಯದಿಂದಲೇ ಮ್ಯಾನೇಜ್ ಮಾಡುವಷ್ಟರ ಮಟ್ಟಿಗೆ ಕುಖ್ಯಾತಿ ಪಡೆದಿದ್ದ.

ಫ್ರೂಟ್ ಇರ್ಫಾನ್ ಹೆಸರು ಕೇಳಿದರೆ ಎಷ್ಟೋ ಜನ ನಮಗ್ಯಾಕೆ ಆತನ ಉಸಾಬರಿ ಎನ್ನುವಷ್ಟರ ಮಟ್ಟಿಗೆ ಹವಾ ಹೊಂದಿದ್ದ. ಅಕ್ರಮ ಭೂ ಒತ್ತುವರಿ, ಲ್ಯಾಂಡ್ ಡಿಲೀಂಗ್, ರಿಯಲ್ ಎಸ್ಟೇಟ್, ಮೀಟರ್ ಬಡ್ಡಿ ಮೂಲಕ ಈತ ಕೋಟ್ಯಾಂತರ ರೂಪಾಯಿ ಆಸ್ತಿ ಪಾಸ್ತಿ ಮಾಡಿದ್ದ.

ಹಲವು ರೌಡಿಶೀಟರ್ ಗಳ ಜೊತೆಗೆ, ಮರಿ ಪುಢಾರಿ, ಸಂಘ-ಸಂಸ್ಥೆಗಳ ಮುಖಂಡರ, ರಾಜಕಾರಣಿಗಳ ಜೊತೆಗೆ ಕೂಡ ಒಡನಾಟ ಹೊಂದಿದ್ದ ಎಂದು ಪೊಲೀಸ ಮೂಲಗಳು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.   

ಫ್ರೂಟ್ ಇರ್ಫಾನ್ ಮೇಲೆ  ಧಾರವಾಡದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಪ್ರಕರಣ, ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಮೀಟರ್ ಬಡ್ಡಿ ಕಿರುಕುಳ ಪ್ರಕರಣ, ಪೊಲೀಸ್ ಆಯುಕ್ತರಿಗೆ ಹಲವು ಬಿಲ್ಡರ್, ರಾಜಕಾರಣಿಗಳಿಗೆ ಜೀವ ಬೆದರಿಕೆ ಹಾಕಿದ ಕುರಿತು ದೂರುಗಳಿವೆ ಎಂದು ಅವರು ಪ್ರಜಾಕಿರಣ.ಕಾಮ್ ಗೆ ವಿವರಿಸಿದ್ದಾರೆ.   

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *