ಸಿನಿಮಾ

ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ, ಹೆಚ್ಚಿನ ವಿಚಾರಣೆಗೆ ವಶಕ್ಕೆ

ಬೆಂಗಳೂರು prajakiran.com :

ಡ್ರಗ್ಸ್ ಜಾಲದ ನಂಟು ಆರೋಪದ ಮೇಲೆ ನಟಿ ರಾಗಿಣಿ ದ್ವಿವೇದಿ ಬಳಿಕ ಇದೀಗ ನಟಿ ಸಂಜನಾ ಗ್ರಲಾನಿ ಸರದಿಯಾಗಿದೆ.

ಬೆಂಗಳೂರಿನ ಇಂದಿರಾ ನಗರದಲ್ಲಿರುವ ನಟಿ ಸಂಜನಾ ಗಲ್ರಾನಿ ಅಪಾರ್ಟ್ ಮೆಂಟ್ ಮೇಲೆ ಮಂಗಳವಾರ ಬೆಳ್ಳಂ ಬೆಳಗ್ಗೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದರು.

ಬೆಳ್ಳಂಬೆಳಗ್ಗೆ 6.30ಕ್ಕೆ ಮನೆಯ ಕದ ಬಡಿದ ಸಿಸಿಬಿ ಅವರಿಗೆ ನೋಟಿಸ್ ನೀಡದೆ ಎಕಾ ಏಕಿ ದಾಳಿ ನಡೆಸಿ ಸರ್ಚ್ ವಾರೆಂಟ್ ಜೊತೆಗೆ ಶಾಕ್ ನೀಡಿದರು.

sanjana galrani

ಈ ವೇಳೆ ಮತ್ತೇ ಕಿರಿಕ್ ಮಾಡಿದ ನಟಿ ಸಂಜನಾ ಅಮ್ಮನಿಗೆ ಹುಷಾರಿಲ್ಲ. ಇಷ್ಟೊಂದು ಜನ ಬಂದರೆ ಹೇಗೆಎಂದು ತಗಾದೆ ತೆಗೆದಿದ್ದಾಳೆ.

ಆದರೂ ಸಿಸಿಬಿ ಅಧಿಕಾರಿಗಳ ತಂಡ ಇದಕ್ಕೆ ಸೊಪ್ಪು ಹಾಕದೆ, ಹಲವು ಗಂಟೆಗಳ ಕಾಲ ನಿರಂತರ ತಪಾಸಣೆ ನಡೆಸಿ, ಮಹತ್ವದ ಸಾಕ್ಷ್ಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಸಂಜನಾಳ ರಾಖಿ ಬ್ರದರ್ ರಾಹುಲ್ ಹಾಗೂ ಪೃಥ್ವಿ ಶೆಟ್ಟಿ ಅವರ ಹೇಳಿಕೆ ಆಧಾರದ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇವರಿಬ್ಬರು ಸಂಜನಾ ವಿರುದ್ದ ಮಹತ್ವದ ಸಾಕ್ಷ್ಯಗಳನ್ನು ಒದಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಹಾಗೂ ಹೊರ ರಾಜ್ಯ ಹಾಗೂ ಹೊರ ರಾಷ್ಟ್ರದಲ್ಲಿ ನಡೆದ ಡ್ರಗ್ಸ್ ಪೆಡ್ಲರ್ ಗಳ ಹಲವು ಪಾರ್ಟಿಗಳಲ್ಲಿ ಭಾಗವಹಿಸಿದ್ದ ಆರೋಪ ಸಂಜನಾ ಮೇಲಿದೆ.

ಅವರ ಜೊತೆಗೆ ನಂಟು, ಸಂಪರ್ಕಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಸಿಸಿಬಿ ಅಧಿಕಾರಿಗಳು ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *