ಅಂತಾರಾಷ್ಟ್ರೀಯ

ಧಾರವಾಡ ಎಸ್ಪಿ ವಿಶೇಷ ಕಾಳಜಿಯಿಂದ ಜಿಲ್ಲೆಗೆ ಬಂತು 22 ಆಕ್ಸಿಜನ್ ಕಾನ್ಸನ್‍ಟ್ರೇಟರ್‍

ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದ ಎಸ್.ಪಿ. ಕೃಷ್ಣಕಾಂತ

ಧಾರವಾಡ (prajakiran. com) ಮೇ.27.: ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರು ತಮ್ಮ ಸ್ನೇಹಿತರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮುನ್ನಡೆಸುತ್ತಿರುವ ‘ಮೆಡಿಕಲ್ ಆಕ್ಸಿಜನ್ ಫಾರ್ ಆಲ್’(Medical Oxygen for All) ತಂಡದಿಂದ ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳನ್ನು ಧಾರವಾಡ ಆರೋಗ್ಯ ಇಲಾಖೆಗೆ ವಿತರಿಸಿದ್ದಾರೆ.

ಅವರು ಗುರುವಾರ ಬೆಳಿಗ್ಗೆ ಕಚೇರಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ ಅವರಿಗೆ ಕಾನ್ಸನ್‍ಟ್ರೇಟರ್‍ಗಳನ್ನು ಹಸ್ತಾಂತರಿಸಿದರು.

ನಂತರ ಎಸ್.ಪಿ. ಕೃಷ್ಣಕಾಂತ ಅವರು ಮಾತನಾಡಿ, ಜಿಲ್ಲೆಯ ಗ್ರಾಮೀಣಭಾಗದಲ್ಲಿ ವಿವಿಧ ಕಡೆ ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಅಲ್ಲಿ ದಾಖಲಿರುವ ಸೋಂಕಿತರಿಗೆ ಉಸಿರಾಟ ತೊಂದರೆ ಉಂಟಾದರೆ ತಕ್ಷಣ ಅವರ ಸಹಾಯಕ್ಕೆ ನೆರವಾಗಲು ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳನ್ನು ನೀಡಲಾಗಿದೆ.

ಪೋಲಿಸ್ ಇಲಾಖೆಯಿಂದ ಎರಡು ಕಾನ್ಸನ್‍ಟ್ರೇಟರ್‍ಗಳನ್ನು ಈಗಾಗಲೇ ನವಲಗುಂದ ತಾಲೂಕಾ ಆಸ್ಪತ್ರೆಗೆ ನೀಡಲಾಗಿದೆ.

ನನ್ನ ಸ್ನೇಹಿತರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ‘ಮೆಡಿಕಲ್ ಆಕ್ಸಿಜನ್ ಫಾರ್ ಆಲ್’(Medical Oxygen for All) ತಂಡ ಮಾಡಿದ್ದಾರೆ. ನಾನು ಸೇರಿದಂತೆ ಸ್ನೇಹಿತರೆಲ್ಲ ಸೇರಿ ಅಗತ್ಯವಿರುವವರಿಗೆ ಆಕ್ಸಿಜನ್ ನೆರವಾಗಲು ಈ ತಂಡ ಕಟ್ಟಿದ್ದೇವೆ. .

ನಮ್ಮ ತಂಡದಿಂದ 8 ಲೀಟರ್ ಆಕ್ಸಿಜನ್ ಸಾಮಥ್ರ್ಯದ ಒಟ್ಟು 22 ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳನ್ನು ಧಾರವಾಡ ಜಿಲ್ಲೆಗೆ ತರಿಸಿದ್ದೇನೆ.

ಅವುಗಳನ್ನು ತಾಲೂಕಾ ಆಸ್ಪತ್ರೆ, ಪೊಲೀಸ್ ಕೋವಿಡ್ ಕೇರ್ ಸೆಂಟರ ಮತ್ತು ವಿಶೇಷವಾಗಿ ಗ್ರಾಮೀಣ ಭಾಗದ ಕೊವೀಡ್ ಕೇರ್ ಸೆಂಟರಗಳಿಗೆ ಬಳಸಲು ನೀಡಲಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ ಮಾತನಾಡಿ, ವಿಶೇಷ ಆಸಕ್ತಿ ಹಾಗೂ ಸಾಮಾಜಿಕ ಕಳಕಳಿಯಿಂದ ಸುಮಾರು 22 ಆಕ್ಸಿಜನ್ ಕಾನ್ಸನ್‍ಟ್ರೇಟರ್‍ಗಳನ್ನು ತಮ್ಮ ವಯಕ್ತಿಕ ಸಹಾಯದಿಂದ ನಮ್ಮ ಜಿಲ್ಲೆಗೆ ನೀಡಿರುವ ಎಸ್.ಪಿ. ಕೃಷ್ಣಕಾಂತ ಅವರಿಗೆ ಧನ್ಯವಾದಗಳು ಎಂದರು.

ಜಿಲ್ಲಾಡಳಿತದಿಂದ ಎಲ್ಲ ತಾಲೂಕುಗಳಲ್ಲಿ ಮತ್ತು ಅಗತ್ಯವಿರುವ ಹೋಬಳಿ ಅಥವಾ ಗ್ರಾಮಗಳಲ್ಲಿ ಕೋವಿಡ್ ಕೆರ್ ಸೆಂಟರಗಳನ್ನು ಆರಂಭಿಸಲಾಗಿದೆ.

ಕೋವಿಡ್ ಕೆರ್ ಸೆಂಟರ್‍ಗಳಲ್ಲಿ ನಾವು ಆಕ್ಸಿಜನ್ ವ್ಯವಸ್ಥೆ ಮಾಡುವುದರಿಂದ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.

ಎಸ್.ಪಿ. ಅವರು ನೀಡಿರುವ ಕಾನ್ಸನ್‍ಟ್ರೇಟರ್‍ಗಳನ್ನು ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಅಗತ್ಯವಿರುವ ಆಸ್ಪತ್ರೆಗಳಿಗೆ ವಿತರಿಸಲಾಗುವುದು ಎಂದು ಅವರು ಹೇಳಿದರು.

ಡಿ.ವೈ.ಎಸ್.ಪಿ. ಮಲ್ಲಿಕಾರ್ಜುನ ಬಿ ಸಂಕದ, ಪಿ.ಎಸ್.ಐ. ಮಹೇಂದ್ರಕುಮಾರ ನಾಯಕ ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *