ರಾಜ್ಯ

ಧಾರವಾಡ ತಹಶೀಲ್ದಾರ ಕಚೇರಿ ಎದುರು ಅಡುಗೆ ತಯಾರಿಸಿ ಊಟ ಮಾಡಿ ಆಕ್ರೋಶ

ಧಾರವಾಡ ತಾಲೂಕಿನ ಮನೆ ಹಾನಿ ತಾರತಮ್ಯ ಸರಿಪಡಿಸಲು ಒತ್ತಾಯ

ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ದಲಿತ ಸಂಘರ್ಷ ಸಮಿತಿ, ಜಯ ಕರ್ನಾಟಕ, ರೈತ ಸಂಘ ಹಾಗೂ ಹಸಿರು ಸೇನೆ ಸಾಥ್

ಕಚೇರಿ ಮುಂಭಾಗದಲ್ಲಿ ಅಡುಗೆ ಮಾಡಬೇಡಿ ಎಂದ ಪೊಲೀಸರ ಜೊತೆಗೆ ಕೆಲ ಕಾಲ ವಾಗ್ವಾದ

ಒಂದು ದಿನದ ಸಾಂಕೇತಿಕ ಧರಣಿ ಮೂಲಕ ಕಂದಾಯ ಸಚಿವ ಆರ್. ಅಶೋಕ್ ಗೆ ಮನವಿ

ಈ ಕುರಿತು ಲೋಕಾಯುಕ್ತರಿಗೆ ಪ್ರತ್ಯೇಕ ದೂರು

ಧಾರವಾಡ ಪ್ರಜಾಕಿರಣ. ಕಾಮ್ : ತಾಲೂಕಿನ ಮನೆ ಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯವನ್ನು ಸರಿಪಡಿಸಲು ಮತೋಮ್ಮೆ
ದಿನಾಂಕ ವಿಸ್ತರಣೆ ಹಾಗೂ
ರಾಜೀವ ಗಾಂಧಿ ವಸತಿ ಯೋಜನೆ ಪೋರ್ಟಲ್ ನಲ್ಲಿ ಕೈ ಬಿಟ್ಟು ಹೋದ ಫಲಾನುಭವಿಗಳ ಹೆಸರು ಸೇರಿಸಲು ಹಾಗೂ ಕೆಟಗೆರಿ ಬದಲಾವಣೆ ಮಾಡಲು ಅವಕಾಶ ನೀಡಲು ಕೋರಿ
ಧಾರವಾಡ ತಹಸೀಲ್ದಾರ್ ಮೂಲಕ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಒಂದು ದಿನದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಧಾರವಾಡ ತಹಸೀಲ್ದಾರ್ ಕಚೇರಿ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ, ಜಯ ಕರ್ನಾಟಕ, ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಭಾಗವಹಿಸಿ ಸಾಥ್ ನೀಡಿದರು‌.

ಮನೆ ಹಾನಿ ಪರಿಹಾರ ತಾರತಮ್ಯ ಖಂಡಿಸಿ ಜನಜಾಗೃತಿ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಂದು ದಿನದ
ಸಾಂಕೇತಿಕ ಪ್ರತಿಭಟನೆ ವೇಳೆ ಸಂತ್ರಸ್ತರು ಕಚೇರಿ ಮುಂಭಾಗದಲ್ಲಿ ಅಡುಗೆ ತಯಾರಿಸಲು ಒಲೆ ಹಚ್ಚಲು ಮುಂದಾದ ಹಿನ್ನಲೆಯಲ್ಲಿ ಮಾಡಬೇಡಿ ಎಂದ
ಪೊಲೀಸರ ಜೊತೆಗೆ ಕೆಲ ಕಾಲ ವಾಗ್ವಾದ ನಡೆಯಿತು.

ಬಳಿಕ ಕಚೇರಿಯ ಎದುರು ಅಡುಗೆ ತಯಾರಿಸಿ ಊಟ ಮಾಡಿ ಸಾತ್ವಿಕ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಧಾರವಾಡ ತಾಲೂಕಿನ ಕನಕೂರ, ಕವಲಗೇರಿ, ಹೆಬ್ಬಳ್ಳಿ, ಲೋಕೂರ, ನರೇಂದ್ರ, ತಲವಾಯಿ, ಲಕಮಾಪುರ, ಚಂದನಮಟ್ಟಿ, ಕುರಬಗಟ್ಟಿ, ಜಿರಗಿವಾಡ, ತಿಮ್ಮಾಪುರ,ಮರೇವಾಡ ಸೇರಿದಂತೆ
ವಿವಿಧ ಗ್ರಾಮದಲ್ಲಿ ಅಕಾಲಿಕ ಮಳೆಗೆ ಪ್ರತಿಯೊಂದು ಹಳ್ಳಿಗಳಲ್ಲಿ ಹಾನಿಗೀಡಾದ ಮನೆಗಳನ್ನು ಪುನರ್ ಪರಿಶೀಲನೆ ನಡೆಸಿದ ಬಳಿಕವೂ ಕೈ ಬಿಡಲಾಗಿದೆ.

ಅನೇಕ ಮನೆಗಳನ್ನು ಸೂಕ್ತ ಪರಿಶೀಲನೆ ನಡೆಸದೆ ಸ್ಥಳೀಯ ಶಾಸಕರ ರಾಜಕೀಯ ಪ್ರಭಾವಕ್ಕೆ ಮಣಿದು
ಅನುಮೋದನೆ ನೀಡಲಾಗಿದೆ‌.

ಅಲ್ಲದೆ, ಕೆಲವು ಮನೆ ಬೀಳದಿದ್ದರೂ ಅವರಿಗೆ ಅನುಮೋದನೆ ನೀಡಲಾಗಿದೆ‌. ಇದರಿಂದಾಗಿ ನಿಜವಾಗಿಯೂ ಮನೆ ಬಿದ್ದ ನೂರಾರು ಜನ ಪರಿಹಾರದಿಂದ ವಂಚಿತರಾಗಿದ್ದಾರೆ‌.

ಆದ್ದರಿಂದ ತಪ್ಪು
ವರದಿ ನೀಡಿದ ತಲಾಟಿ, ನೋಡೆಲ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮನೆ ಕಳೆದುಕೊಂಡ ಎಲ್ಲಾ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಕುರಿತು ಲೋಕಾಯುಕ್ತರಿಗೆ ಪ್ರತ್ಯೇಕ ದೂರು ಸಲ್ಲಿಸಲಾಯಿತು.

ಆ ಮೂಲಕ ನೋಂದ ಸಂತ್ರಸ್ತರ ಕೂಗು ಸರಕಾರ ಗಂಭೀರವಾಗಿ ಪರಿಗಣಿಸಿಬೇಕು.

ಈಗಾಗಲೇ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ಎದುರು ಸೂರು ಕಳೆದುಕೊಂಡ ನೂರಾರು ಸಂತ್ರಸ್ಥರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಗಮನ ಸೆಳೆದರೂ
ಮಳೆಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ.

ಹೀಗಾಗಿ ಹೆಬ್ಬಳ್ಳಿ ತಲಾಟಿ ಆನೆಕಿವಿಯನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮ ಒಂದರಲ್ಲೇ ಕಳೆದ ಅಕ್ಟೋಬರ್ ತಿಂಗಳಲ್ಲಿ ಸುರಿದ ಅಪಾರ ಮಳೆಯಿಂದ 224 ಮನೆಗಳು ಹಾನಿಗೀಡಾಗಿವೆ.

ಆದರೆ ರಾಜೀವ ಗಾಂಧಿ ವಸತಿ ಯೋಜನೆ ಅಡಿ 50ಕ್ಕೂ ಹೆಚ್ವು ಜನರಿಗೆ
ಭಾರೀ ಅನ್ಯಾಯ ಎಸಗಿದ್ದಾರೆ.

ಒಂದೇ ಗ್ರಾಮದಲ್ಲಿ ಇಷ್ಟೋಂದು ಜನರಿಗೆ ಅನ್ಯಾಯವಾಗಿರುವುದು ನೋಡಿದರೆ, ಇಡೀ ಧಾರವಾಡ ತಾಲೂಕಿನಲ್ಲಿರುವ ಹಲವಾರು ಹಳ್ಳಿಗಳ ಸಾವಿರಾರು ಜನ ಸಂತ್ರಸ್ತರಿಗೆ ಸೂರು ನೀಡುವಲ್ಲಿ ಧಾರವಾಡ ಜಿಲ್ಲಾಡಳಿತ ಹಾಗೂ ತಾಲೂಕಿನ ಆಡಳಿತ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ‌.

ಅನ್ಯಾಯ ಸರಿ ಪಡಿಸಲು ರಾಜೀವ ಗಾಂಧಿ ವಸತಿ ಯೋಜನೆ ಪೋರ್ಟಲ್ ಮೂಲಕ ಅವಕಾಶ ನೀಡುವುದು ಹಾಗೂ ಅವಕಾಶ ವಂಚಿತರ ಹೆಸರನ್ನು ಪಟ್ಟಿಗೆ ಸೇರಿಸುವ ಮೂಲಕ ನ್ಯಾಯ ನೀಡಬೇಕು ಎಂದರು‌.

ಬಿ ಕೆಟಗೆರಿ ಇದ್ದ ಮನೆಯನ್ನು ಸಿ ಕೆಟಗೆರಿಗೆ ತಂದು, ಸಿ ಕೆಟಗೆರಿ ಮನೆಯನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.

ಬಡಜನರೊಂದಿಗೆ ಬಿಜೆಪಿ ಶಾಸಕರು ಯಾವುದೇ ರಾಜಕೀಯ ಮಾಡದೆ ಶೀಘ್ರವಾಗಿ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡಬೇಕು.

ಇಲ್ಲದಿದ್ದರೆ ಮನೆಗೆ ಹಚ್ಚುವರಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಸಿದ್ದಾರೆ.

ಈ ಪ್ರತಿಭಟನೆ ಯಲ್ಲಿ ಜನಜಾಗೃತಿ ಸಂಘದ ನಾಗರಾಜ ಕಿರಣಗಿ, ರಾಘವೇಂದ್ರ ಶೆಟ್ಟಿ, ಆನಂದ ಪಾಟೀಲ್, ಮಲ್ಲೇಶ ಅಂಬಿಗೇರ,
ಲಕ್ಷಣ ದೊಡ್ಡಮನಿ, ಸುಧೀರ ಮುಧೋಳ, ಮುತ್ತಣ್ಣ, ಪರಶುರಾಮ ದೊಡ್ಮನಿ, ಶಿವು ಬಡಿಗೇರ, ಹೆಬ್ಬಳ್ಳಿ ಗ್ರಾಪಂ ಸದಸ್ಯ ಬಸವರಾಜ ಹೆಬ್ಬಾಳ, ಮಹೇಶ ಜೋಶಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *