ರಾಜ್ಯ

ಬಿಜೆಪಿ ವರಿಷ್ಟರ ಅಂಗಳ ತಲುಪಿದ ಧಾರವಾಡದ ವಸ್ತು ಚಿತ್ರಣ ….!?

ಯೋಗೀಶಗೌಡ ಸಹೋದರ ಗುರುನಾಥ ಗೌಡ ಕೂಡ ಸಂಸದ ಪ್ರಹ್ಲಾದ ಜೋಶಿ ಜೊತೆಗೆ ಚರ್ಚೆ …..!?

ಶಾಸಕ ಅಮೃತ ದೇಸಾಯಿಯವರ ವಿರುದ್ದ ಅಸಮಾಧಾನ ಹೊರ ಹಾಕಿದರಾ ಗುರುನಾಥ ಗೌಡ ಗೌಡರ…..!?

ತವನಪ್ಪ ಅಷ್ಟಗಿ, ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ, ವೀರಯ್ಯ ಚಿಕ್ಕಮಠ, ಬಸವರಾಜ ಕೊರವರ ಹಾದಿ ತುಳಿದರಾ ಗುರುನಾಥ ಗೌಡ  ಗೌಡರ

ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸಿದ ಧಾರವಾಡ ವಿಧಾನ ಸಭಾ ಕ್ಷೇತ್ರ-71 ರ ಅಭ್ಯರ್ಥಿ ಆಯ್ಕೆ….!?

ಬೆಂಗಳೂರು ಪ್ರಜಾಕಿರಣ.ಕಾಮ್ :
ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಬಿಜೆಪಿ ಟಿಕೇಟ್ ಆಕಾಂಕ್ಷಿಗಳು ಧಾರವಾಡದ ವಸ್ತು ಚಿತ್ರಣವನ್ನು ಬಿಜೆಪಿ ವರಿಷ್ಟರ ಅಂಗಳಕ್ಕೆ ತಲುಪಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ‌.

ನಿನ್ನೇಯೇ ಬೆಂಗಳೂರು ಸೇರಿದ್ದ ಧಾರವಾಡದ ಬಿಜೆಪಿ ನಾಯಕರು ನಿನ್ನೆ ಹಾಗೂ ಇಂದು ಪಕ್ಷದ ಹಲವು ಪ್ರಮುಖರನ್ನು, ನಾಯಕರನ್ನು ಭೇಟಿ ಮಾಡಿ ಧಾರವಾಡ ಗ್ರಾಮೀಣ ಜನತೆಯು ತೀವ್ರ ಕುತೂಹಲದಿಂದ ಎದುರು ನೋಡುತ್ತಿರುವ ಟಿಕೇಟ್ ಹಂಚಿಕೆ ವಿಷಯದ ಬಗ್ಗೆ ವಸ್ತು ನಿಷ್ಟ ವರದಿಯನ್ನು ತಲುಪಿಸಿದ್ದಾರೆ‌.

ಅಲ್ಲದೆ, ಈ ಬಾರಿ ಖಂಡಿತ ಜನರ ನಿರೀಕ್ಷೆ ಹುಸಿಯಾಗುವುದಿಲ್ಲ ಎಂಬ ಭರವಸೆಯಲ್ಲಿ ಅನೇಕ ಟಿಕೇಟ್ ಆಕಾಂಕ್ಷಿಗಳು ಇದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ,
ಮಾಜಿ ಶಾಸಕಿ ಸೀಮಾ ಮಸೂತಿ, ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಜಂಟಿಯಾಗಿ ಅಖಾಡಕ್ಕೆ  ಇಳಿಯುವ ಮೂಲಕ ತಮ್ಮ ಒಮ್ಮತದ ಅಭಿಪ್ರಾಯವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ,
ಕೇಂದ್ರದ ಪ್ರಭಾವಿ ಸಚಿವರು ಆಗಿರುವ ತವರು ಜಿಲ್ಲೆಯ ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕರ ಜೊತೆಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಈ ವೇಳೆ ಹಾಲಿ ಶಾಸಕರನ್ನು ಹೊರಗಿಟ್ಟು ಪಕ್ಷದ ನಾಯಕರ ಔಪಚಾರಿಕವಾಗಿ ಮಾತನಾಡಿಸಿದ ವಿಷಯ ಕೂಡ ಚರ್ಚೆಗೆ ಬಂದಿದೆ ಎಂದು ಹೇಳಲಾಗಿದ್ದು, ವರಿಷ್ಠರು ಆದಷ್ಟು ಬೇಗ ಶುಭ ಸುದ್ದಿ ನೀಡುವ ಅಭಯ ನೀಡಿದ್ದಾರೆ ಎಂದು ಮೂಲಗಳು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿವೆ.

ಈ ನಡುವೆ ಅವರ ಜೊತೆಗೆ ಬೆಂಗಳೂರು ಹೋಗದೆ ಅಂತರ ಕಾಯ್ದುಕೊಂಡ ಬಡವರ ಮಗ ಭರವಸೆಯ ಬೆಳಕು ಬಸವರಾಜ್ ಕೊರವರ್ ಕ್ಷೇತ್ರದಲ್ಲಿ ತಾಲೀಮು ನಡೆಸುತ್ತಿದ್ದು, ಜನರ ಮನ ಗೆಲ್ಲುವಲ್ಲಿ ನಿರತವಾಗಿದ್ದಾರೆ. ಅದು ಅವರಿಗೆ ವರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

ಈ ನಡುವೆ ಯೋಗೀಶಗೌಡ ಸಹೋದರ ಗುರುನಾಥ ಗೌಡ ಕೂಡ ಸಂಸದ ಪ್ರಹ್ಲಾದ ಜೋಶಿ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅವರು ಕೂಡ ಶಾಸಕ ಅಮೃತ ದೇಸಾಯಿಯವರ ವಿರುದ್ದ ಅಸಮಾಧಾನ ಹೊರ ಹಾಕಿದರಾ ಎನ್ನುವ ಪ್ರಶ್ನೆ ಇದೀಗ ಎಲ್ಲರಿಗೂ ಕಾಡುತ್ತಿದೆ…..!?

ತವನಪ್ಪ ಅಷ್ಟಗಿ, ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ, ವೀರಯ್ಯ ಚಿಕ್ಕಮಠ ಹಾಗೂ ವಿಶೇಷವಾಗಿ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರ ಹಾದಿ ತುಳಿದರಾ ಗುರುನಾಥ ಗೌಡ  ಗೌಡರ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಹೀಗಾಗಿ ದಿನದಿಂದ ದಿನಕ್ಕೆ ಧಾರವಾಡ ವಿಧಾನ ಸಭಾ ಕ್ಷೇತ್ರ-71 ರ ಅಭ್ಯರ್ಥಿ ಆಯ್ಕೆ ತೀವ್ರ ಕುತೂಹಲ ಕೆರಳಿಸಿದೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *