ರಾಜ್ಯ

ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ  

ತನಿಖೆ ಕೇವಲ ವರದಿ ಕೊಡಲು ಅಷ್ಟೇ ಸೀಮಿತವಾಗಿರುವುದು ನಾಚಿಕೆಗೇಡಿನ ಸಂಗತಿ

ಧಾರವಾಡ prajakiran.com : ಯಾವುದೇ ವ್ಯಕ್ತಿ ದೂರು ನೀಡಿದ 24 ಗಂಟೆಗಳ ಒಳಗೆ ಪ್ರಕರಣ ದಾಖಲಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ರಾಜ್ಯದ ಪೊಲೀಸ್ ಇಲಾಖೆ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ತಿಳಿಸಿದರು.

ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಕರಣದಲ್ಲಿ ಸರಕಾರ ಹಾಗೂ ಪೊಲೀಸರು ನೈತಿಕತೆಯನ್ನು ಕಳೆದುಕೊಂಡಿದ್ದಾರೆ.

ಪ್ರಕರಣ ಹೊರಬಂದು ಹಲವು ದಿನಗಳು ಕಳೆದರೂ ಯಾವುದೇ ದೂರು ದಾಖಲಾಗದಿರುವುದು ನೋವಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ರಷ್ಯಾದಲ್ಲಿ ಅಪ್ ಲೋಡ್ ಆಗಿದೆ. ಅದಕ್ಕಾಗಿ 17 ಕೋಟಿ ಖರ್ಚು ಮಾಡಲಾಗಿದೆ ಎಂದು ಮಾಜಿ ಸಚಿವರ ಸಹೋದರ ಹೇಳಿರುವುದು ದಾಖಲೆ ಬಿಡುಗಡೆ ಮಾಡಲಿ ಎಂದು ತಿರುಗೇಟು ನೀಡಿದರು.

ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ಅವರ ಹೇಳಿಕೆ ಬಾಲಿಷತನದ್ದು.ಅವರು 25 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದು ವಿವಿಧ ಹುದ್ದೆ ಅನುಭವಿಸಿ, ಈಗ ಪಕ್ಷದ ಮೇಲೆ ಆರೋಪ ಹೊರಿಸುವುದು ಅವರಿಗೆ ಶೋಭೆ ಕೊಡಲ್ಲ ಎಂದು ಕುಟುಕಿದರು.

ಒಂದು ಕಡೆ ಇವರೇ ಸಿಡಿ ನಕಲಿ ಎಂದು ಹೇಳ್ತಾರೆ. ಮತ್ತೋಂದು ಕಡೆ ಕಾಂಗ್ರೆಸ್ ಕೈವಾಡ ಅಂತಾರೆ. ಹಾಗಿದ್ರೆ ತನಿಖೆ ಆಗಲಿ. ಸತ್ಯಾಂಶ ಹೊರಬರಲಿ. ತಪ್ಪಿತಸ್ಥರು ಯಾವುದೇ ಪಕ್ಷದವರಿದ್ದರೂ ಶಿಕ್ಷೆ ಆಗಲಿ ಎಂದು ಆಗ್ರಹಿಸಿದರು.

ಬೆಳಗ್ಗೆ ಆದರೆ ಮಾಧ್ಯಮಗಳಲ್ಲಿ ಅಸಹ್ಯ ದೃಶ್ಯಗಳು ಪ್ರಸಾರವಾಗುತ್ತಿವೆ. ಮಕ್ಕಳು, ಮಹಿಳೆಯರ ಪರಿಸ್ಥಿತಿ ಏನಾಗಬಾರದು ಎಂದು ಗುಡುಗಿದರು.

ಈ ಪ್ರಕರಣದ ಕುರಿತು ನಾಲ್ಕು ತಿಂಗಳ ಮುಂಚೆಯೇ ಮಾಹಿತಿ ಇದ್ದರೂ ಯಾಕೆ ರಮೇಶ ಜಾರಕಿಹೊಳಿ ಅವರು ಮೌನ ವಹಿಸಿದ್ದರು ಎಂದು ಪ್ರಶ್ನಿಸಿದ ನೀರಲಕೇರಿ ಅವರು ಎಸ್ ಐ ಟಿಗೆ ಕೇವಲ ವರದಿ ನೀಡಲು ಆದೇಶದ ಹಿಂದಿನ ರಹಸ್ಯವೇನು ಎಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಕೇಂದ್ರ ಸಚಿವರು ಹಾಗೂ ಬಿಜೆಪಿ ಶಾಸಕರು ಅಪ್ಪ ಮಕ್ಕಳ ಸಿಡಿ ಸೇರಿ ಒಟ್ಟು 23 ಸಿಡಿಗಳಿವೆ ಎಂದು ಹೇಳಿದ್ದಾರೆ. ಇನ್ನೂ ಆರು ಸಚಿವರು ತಮ್ಮ ವಿರುದ್ದ ಸುದ್ದಿ ಪ್ರಸಾರ ಆಗಬಾರದು ಎಂದು ತಡೆ ಆಜ್ಞೆ ತಂದಿದ್ದಾರೆ.

ಇದು ನೋಡಿದರೆ ಆತಂಕದ ವಾತವರಣ ನಿರ್ಮಾಣವಾಗಿದೆ. ಒಂದು ಬಾರಿ ಎಲ್ಲ ಸಿಡಿಗಳು ಸಮಾಜದ ಮುಂದೆ ಬರಲಿ. ಎಲ್ಲವೂ ಬಿಡುಗಡೆ ಆಗಲಿ.

ಸರಕಾರದ ದಿನಕ್ಕೊಂದು ಹೇಳಿಕೆ, ಕೋಟ್ಯಾಂತರ ರೂಪಾಯಿ ಹಣದ ಆಮಿಷ, 2+3+4 ಬಗ್ಗೆ ನಿಖರತೆ ಇದ್ದರೆ ಎಲ್ಲವೂ ಹೊರಬರಲಿ ಎಂದು ಪಿ.ಎಚ್.ನೀರಲಕೇರಿ ಒತ್ತಾಯಿಸಿದರು.

ಮಹಿಳಾ ಆಯೋಗ, ಮಹಿಳಾ ಸಂಘಗಳು, ಮಾನವ ಹಕ್ಕುಗಳ ಆಯೋಗ ಎನ್ ಮಾಡ್ತಿವೆ. ಮಾಜಿ ಸಚಿವರ ಶಬ್ದಗಳ ಬಳಕೆ ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ನ್ಯಾಯಾಂಗ ವಾದರೂ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲಿ ಎಂದು ಆಗ್ರಹಿಸಿದರು.

ರಾಜ್ಯ ಸರಕಾರ ಕಠೋರವಾದ ನಿರ್ಧಾರ ತೆಗೆದುಕೊಂಡು ಪ್ರಕರಣ ದಾಖಲಿಸಬೇಕು. ಅದು ಬಿಟ್ಡು ಕಾಂಗ್ರೆಸ್ ಮೇಲೆ ಆರೋಪ ಹೊರಿಸುವುದು ಒಳ್ಳೆಯದಲ್ಲ.

ಯಡಿಯೂರಪ್ಪ ಮೇಲೆ ರಮೇಶ ಜಾರಕಿಹೊಳಿ ಸ್ವತಃ ಭ್ರಷ್ಟ ಅಂತ ಹೇಳಿದ್ದಾರೆ. ನೈತಿಕತೆ ಇದ್ದರೆ ಅದರ ಸಾಚಾತನ ಬಯಲಿಗೆ ಬರಲಿ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಸವಾಲು ಹಾಕಿದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *