ರಾಜ್ಯ

ಧಾರವಾಡ ಜಿಲ್ಲೆಯ 186 ಕರೋನಾ ಪ್ರಕರಣ ಪತ್ತೆಯಾದ ಸ್ಥಳಗಳ ವಿವರ

*ಒಟ್ಟು 1914 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 662 ಜನ ಗುಣಮುಖ ಬಿಡುಗಡೆ*

*1194 ಸಕ್ರಿಯ ಪ್ರಕರಣಗಳು*

*ಇದುವರೆಗೆ 58 ಮರಣ*

ಧಾರವಾಡ : ಜಿಲ್ಲೆಯಲ್ಲಿ ಶನಿವಾರ 186 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .

ಆ  ಮೂಲಕ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 1914  ಕ್ಕೆ ಏರಿದೆ. ಇದುವರೆಗೆ 662 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. 1194 ಪ್ರಕರಣಗಳು ಸಕ್ರಿಯವಾಗಿವೆ.

ಜಿಲ್ಲೆಯಲ್ಲಿ ಈವರೆಗೆ 58  ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿಂದು ಪತ್ತೆಯಾಗಿರುವ  186  ಪ್ರಕರಣಗಳಲ್ಲಿ,  88 ಜನರು( ಐಎಲ್ಐ) ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. 84 ಜನರು ಸೋಂಕಿತರ ಸಂಪರ್ಕದಿಂದ ಬಳಲುತ್ತಿದ್ದರು.

6 ಜನರು ಅಂತರ್‌ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. 4 ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 4 ಜನರು ( SARI) ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:

*ಧಾರವಾಡ ತಾಲೂಕು*

ಹೊಸಯಲ್ಲಾಪುರ , ಮೃತ್ಯುಂಜಯ ನಗರ,ಕ.ವಿ.ವಿ.ಉದ್ಯೋಗಸ್ಥ  ಮಹಿಳಾ ಹಾಸ್ಟೆಲ್, ಉಳ್ಳಾಗಡ್ಡಿ ಓಣಿ, ಗಾಂಧಿ ನಗರ, ಶೆಟ್ಟರ್ ಕಾಲನಿ, ಸತ್ತೂರ ಎಸ್ ಡಿ ಎಂ ಆವರಣ, ಮಣಿಕಿಲ್ಲಾ, ಯಾಲಕ್ಕಿ ಶೆಟ್ಟರ್ ಕಾಲನಿ,

ಸತ್ತೂರ ಕೆಹೆಚ್ ಬಿ ಕಾಲನಿ, ಹೆಬ್ಬಳ್ಳಿ ಅಗಸಿ, ಹಿರೇಮಲ್ಲಿಗವಾಡ, ಕಲ್ಲಾಪುರ, ಲಕ್ಷ್ಮಿನಗರ, ಯರಿಕೊಪ್ಪ, ಜನ್ನತ್ ನಗರ, ಸಾಧನಕೇರಿ, ಕೆಲಗೇರಿ, ಸೋಮಾಪುರ, ಮದಿಹಾಳ, ಕಾಮನಕಟ್ಟಿ, ತಡಸಿನಕೊಪ್ಪ‌.

*ಹುಬ್ಬಳ್ಳಿ ತಾಲೂಕು* 

ತಬೀಬ್ ಲ್ಯಾಂಡ್, ಅಯೋಧ್ಯಾ ನಗರ, ಪಂಚಾಕ್ಷರಿ ನಗರ,ಹೊಸ ವಿನೋಬ ನಗರ,ಗಾಂಧೀವಾಡ, ಅಂಬೇಡ್ಕರ್ ಕಾಲನಿ,ಗಬ್ಬೂರ ಗಲ್ಲಿ,ಘೋಡಕೆ ಪ್ಲಾಟ್,ಕೌಲಪೇಟ, ಬೀರಬಂದ್ ಓಣಿ, ಜಿಪಿಎಸ್ ಹುಬ್ಬಳ್ಳಿ, ಶಿರಡಿನಗರ, ಗುರುನಾಥ ನಗರ,ರಾಮ್ ಮನೋಹರ ಲೋಹಿಯಾ ನಗರ, ಚಾಲುಕ್ಯ ನಗರ,

ಹಳೆಹುಬ್ಬಳ್ಳಿ ಸಹದೇವ ನಗರ, ಕೇಶ್ವಾಪುರ, ಮಿಲ್ಲತ್ ನಗರ, ಹಳೆಹುಬ್ಬಳ್ಳಿ ಸಿದ್ಧಾರೂಢ ಮಠ ರಸ್ತೆ, ಮಾಧವಪುರ, ಗಣೇಶಪೇಟೆ, ನವನಗರ, ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲನಿ, ಬೆನಕಟ್ಟಿ, ಎಸ್.ಎಂ.ಕೃಷ್ಣ ನಗರ, ಸಾಯಿನಗರ, ವಿದ್ಯಾನಗರ,ಬನಶಂಕರಿ ಕಾಲನಿ, ಕಿಮ್ಸ್ ಆವರಣ, ಸುಳ್ಳ ಗ್ರಾಮ,

ಅಸರ್  ಓಣಿ, ವಿಶಾಲನಗರ, ಗಿರಣಿಚಾಳ,  ಹಳೆಹುಬ್ಬಳ್ಳಿ ಶಿವಪುತ್ರ ನಗರ, ಕಸಬಾಪೇಟ ಪೊಲೀಸ್ ಠಾಣೆ, ಗುರುಸಿದ್ಧೇಶ್ವರ ನಗರ, ಬೈಲಪ್ಪನವರ ನಗರ, ಅರವಿಂದ ನಗರ, ಉಣಕಲ್, ನೀಲಿಜಿನ್ ರಸ್ತೆ, ಅಕ್ಷಯಪಾರ್ಕ್,

ಚನ್ನಪೇಟ, ಮಂಗಳವಾರಪೇಟ, ಶ್ರೀನಿವಾಸ ನಗರ, ಇಂದ್ರಪ್ರಸ್ಥ ನಗರ, ಆನಂದನಗರ, ಮಿಷನ್ ಕಂಪೌಂಡ್, ಗೋಪನಕೊಪ್ಪ, ಶರೇವಾಡ ಗ್ರಾಮ, ಉಪನಗರ ಪೊಲೀಸ್ ಠಾಣೆ, ಶಕ್ತಿ ಕಾಲನಿ, ಬಸವೇಶ್ವರ ನಗರ,

ಶೆಟ್ಟರ್ ಕಾಲನಿ, ಬ್ಯಾಂಕರ್ಸ್ ಕಾಲನಿ, ರಿಷಿಕಾ ಅಪಾರ್ಟ್‌ಮೆಂಟ್, ಅಕ್ಷಯ ಕಾಲನಿ, ಹನುಮಂತ ನಗರ, ಮಹಿಳಾ ಪೊಲೀಸ್ ಠಾಣೆ, ಮಂಟೂರ ರಸ್ತೆ.

*ಕುಂದಗೋಳ ತಾಲೂಕು* ಕಮಡೊಳ್ಳಿ,ಬೆಟದೂರ ಗ್ರಾಮಗಳು

*ಕಲಘಟಗಿ ತಾಲೂಕು* : ಹುಲಿಕಟ್ಟಿ,ಹುಲಕೊಪ್ಪ ಗ್ರಾಮಗಳು.

*ನವಲಗುಂದ ತಾಲೂಕು* : ಮೊರಬ,ಪಡೇಸೂರ ಗ್ರಾಮಗಳು.

 *ಅಳ್ನಾವರ ತಾಲೂಕು* ಹೊನ್ನಾಪುರ ಗ್ರಾಮ. 

ಹಾಗೂ  ಹಾವೇರಿ ಜಿಲ್ಲೆಯ ಕಿತ್ತೂರ,ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಾದಿಗಟ್ಟಿಯಲ್ಲಿ ಶನಿವಾರ ಪ್ರಕರಣಗಳು ವರದಿಯಾಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *