ರಾಜ್ಯ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ಬಾರಿಯೂ ಪ್ರಭಾರಿಕುಲಪತಿ

ಧಾರವಾಡ prajakiran.com : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರಕಾರ ನಾಲ್ಕನೇ ಬಾರಿಯೂ ಪ್ರಭಾರಿ ಕುಲಪತಿಯ ನೇಮಕವಾಗಿದೆ.

ಈ ಹಿಂದಿನ ಕುಲಪತಿ ಪ್ರಮೋದ ಗಾಯಿಯವರ ಅವಧಿ ಪೂರ್ಣಗೊಂಡ ನಂತರ ಶಿರಾಳಶೆಟ್ಟಿಯವರನ್ನು ನೇಮಿಸಲಾಗಿತ್ತು.

ಅವರ ನಂತರ ಪ್ರೊ ಟಿ.ಎಂ. ಭಾಸ್ಕರ್ ಅವರನ್ನು ನೇಮಿಸಲಾಗಿತ್ತು. ಅವರ ಬಳಿಕ ಶಿವಪ್ಪಅವರನ್ನು ನೇಮಿಸಲಾಗಿತ್ತು.  

ಇದೀಗ ನೂತನ ಪ್ರಭಾರಿ (ನಾಲ್ಕನೇ ) ಕುಲಪತಿಗಳಾಗಿ ಪ್ರೊ. ವಿಶ್ವನಾಥ ಎಂ., ಅವರನ್ನು ರಾಜ್ಯಪಾಲರು ನೇಮಕ ಮಾಡಲಾಗಿದೆ.

ಆ. ೨೯ ರಂದು ಪ್ರಭಾರಿ ಕುಲಪತಿಯವರಾದ ಪ್ರೊ. ಶಿವಪ್ಪ ಅವರು ವಿಶ್ವನಾಥಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.

ಪ್ರೊ. ವಿಶ್ವನಾಥ ಎಂ., ಅವರು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ವಿಶ್ವವಿದ್ಯಾಲಯದ ಕಾನೂನು ನಿಖಾಯದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಈ ವೇಳೆ ಆಡಳಿತ ಕುಲಸಚಿವ ಡಾ. ಕೆ.ಟಿ. ಹನುಮಂತಪ್ಪ, ಮೌಲ್ಯಮಾಪನದ ಕುಲಸಚಿವ ಪ್ರೊ. ರವೀಂದ್ರನಾಥ ಎನ್. ಕದಂ, ಪ್ರಭಾರಿ ಹಣಕಾಸು ಅಧಿಕಾರಿ ಪ್ರೊ. ಆರ್.ಆರ್. ಬಿರಾದಾರ  ಸೇರಿದಂತೆ ಅನೇಕರು ಶುಭ ಹಾರೈಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *