ರಾಜ್ಯ

ಧಾರವಾಡ ಗ್ರಾಮೀಣದಲ್ಲಿ ವಿಕೆ ಬಾಸ್-ಅಮೃತ ಧಣಿಗೆ ಟಕ್ಕರ್ ಕೊಡಲು ಬಡವರ ಮಗ ಬಸಣ್ಣ ಎಂಟ್ರಿ…..!?

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ವಿಧಾನ ಸಭಾ ಕ್ಷೇತ್ರ -71 ರ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಅದರಲ್ಲೂ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಹಾಲಿ ಶಾಸಕ ಅಮೃತ ದೇಸಾಯಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಯಾರಾಗುತ್ತಾರೆ ಎಂಬುದು ಎಲ್ಲರನ್ನು ಕಾಡುತ್ತಿದೆ.

ನಿಧಾನವಾಗಿ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸಿದೆ. ಒಬ್ಬರು ಕ್ಷೇತ್ರದಿಂದ ಹೊರಗಡೆ ಇದ್ದರೆ, ಇನ್ನೊಬ್ಬರು ಜನರಿಂದ, ಅದರಲ್ಲೂ ವಿಶೇಷವಾಗಿ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಂದ ಅಂತರ ಕಾಯ್ದುಕೊಳ್ಳಲು ದಿನವೀಡಿ ಹೆಣಗಾಡುತ್ತಿರುತ್ತಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿನಯ ಕುಲಕರ್ಣಿ ಇಲ್ಲವೇ ಅವ ಪತ್ನಿ ಶಿವಲೀಲಾ ಕುಲಕರ್ಣಿ ಅಥವಾ ಇಸ್ಮಾಯಿಲ್ ತಮಟಗಾರ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ.

ಇದೆಲ್ಲಾ‌ ಮೀರಿ  ಬಿಜೆಪಿಯಿಂದ ಟಿಕೇಟ್ ಸಿಗದೆ ಹೊರಬರುವ ನಾಯಕರೊಬ್ವರಿಗೆ ಟಿಕೇಟ್ ನೀಡಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇನ್ನು ಬಿಜೆಪಿಯ ಹಾಲಿ ಶಾಸಕ ಅಮೃತ ದೇಸಾಯಿಯವರ ಬದಲಿಗೆ ತಮಗೆ ಟಿಕೇಟ್ ನೀಡಬೇಕು ಎಂದು ಬಯಲು ಸೀಮೆಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ತವನಪ್ಲ ಅಷ್ಟಗಿ, ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ವರಿಷ್ಟರ ಕದ ತಟ್ಟಿದ್ದಾರೆ.

ಇದಲ್ಲದೆ, ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನರ ಒಳಿಗಾಗಿ ಹತ್ತು ಹಲವು ಹೋರಾಟದ ಮೂಲಕ ಜನರ ಮನಸೊರೆಗೊಂಡ ಬಡವರ ಮಗ ಪೊಲೀಸ್ ಹಕ್ಕುಗಳ ಹೋರಾಟಗಾರ, ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಹೊಸ ತಿರುವು ನೀಡಿ ಸಿಬಿಐ ತನಿಖೆ ಮೂಲಕ ನೈಜ ಆರೋಪಿಗಳ ಮುಖವಾಡ ಕಳಚಿದ ಬಸವರಾಜ ಕೊರವರ ಅವರಿಗೆ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಬಿಜೆಪಿಯ ಕಾರ್ಯಕರ್ತರೇ ಅನೇಕ ಸಮೀಕ್ಷೆಯ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇದು ಬಿಜೆಪಿ ವರಿಷ್ಟರಿಗೆ ತಲೆನೋವಾಗಿದ್ದು ಟಿಕೇಟ್ ಹಂಚಿಕೆಯಲ್ಲಿ ಸ್ವಲ್ಪಮಟ್ಟಿಗೆ ಏನಾದರೂ ಏರುಪೇರಾದರೂ ಸೋಲಾಗಬಹುದು ಎಂದು ಅಳೆದು ತೂಗಿ ಟಿಕೇಟ್ ನೀಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ವಲಯದಲ್ಲಿ ಕೇಳಿಬರುವ ಮಾತು

ಅಲ್ಲದೆ, ಇತ್ತೀಚೆಗೆ ಬಸವರಾಜ ಕೊರವರ ಗೆಳೆಯರ ಬಳಗದ ಚಿಂತನ ಮಂಥನ ಸಭೆಯಲ್ಲಿ ಬಡವರ ಮಕ್ಕಳು ವಿಧಾನ ಸಭೆಗೆ ಹೋಗಬೇಕು, ಹೋಗಲೇಬೆಕು ಎಂದು ಒಕ್ಕೂರಿಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹೀಗಾಗಿ ಈ ಬಾರಿ ನಡೆಯುವ ವಿಧಾನ ಸಭಾ ಕ್ಷೇತ್ರ-71 ರ ಚುನಾವಣೆಯಲ್ಲಿ ಬಸವರಾಜ ಕೊರವರ ಸ್ಪರ್ಧಿಸುವುದು ಬಹುತೇಕ ನಿಶ್ಚಿತವಾಗಿದೆ ಎಂದು ಹೇಳಲಾಗುತ್ತಿದೆ‌.

ಆ ಮೂಲಕ ಗ್ರಾಮೀಣ ಭಾಗದಲ್ಲಿ ಮೂರನೇ ಪರ್ಯಾಯ ನಾಯಕನಾಗಿ ಬಸವರಾಜ ಕೊರವರ ಹೊರಹೊಮ್ಮಿದ್ದು,ವಿಕೆ ಬಾಸ್-ಅಮೃತ ಧಣಿಗೆ ಟಕ್ಕರ್ ಕೊಡಲು ಬಡವರ ಮಗ ಬಸಣ್ಣ ಎಂಟ್ರಿ ಕೊಡುವರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *