ರಾಜ್ಯ

ಧಾರವಾಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳ ನೇಮಕ

ಕೋವಿಡ್-19 ರ 3ನೇ ಅಲೆ ಮುಂಜಾಗೃತೆ

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ

ಧಾರವಾಡ prajakiran. com ಜ.07: ರಾಜ್ಯದಲ್ಲಿ ಕೋವಿಡ್ 3ನೇ ಅಲೆ ದಿನದಿಂದ ದಿನಕ್ಕೆ ತೀವೃವಾಗುತ್ತಿದ್ದು, ಜಿಲ್ಲೆಯಲ್ಲಿ ವಿವಿಧ ರೀತಿಯ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಹೊಂದಿರುವ ಐಸಿಯು, ಎಚ್‍ಡಿಯು, ವೆಂಟಿಲೇಟರ್ ಮತ್ತು ಜನರಲ್ ಬೆಡ್‍ಗಳಲ್ಲಿ ಶೇ.50 ರಷ್ಟು ಕೋವಿಡ್ ಚಿಕಿತ್ಸೆ ಮತ್ತು ಆರೈಕೆಗಾಗಿ ಮೀಸಲಿಡಲು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ.

ಈ ಕುರಿತು ಪರಿಶೀಲಿಸಲು ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ., ಡಿಮಾನ್ಸ್ ಸಿಎಓ ಷಣ್ಮುಖಪ್ಪ ಮತ್ತು ಜಿಲ್ಲಾ ಆರ್.ಸಿ.ಎಚ್.ಓ ಡಾ.ಎಸ್.ಎಮ್.ಹೊನಕೇರಿ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಅಧಿಕೃತಗೊಳಿಸಿರುವ ಅಧಿಕಾರಿಯು ಸರ್ಕಾರದ ವತಿಯಿಂದ ಶಿಫಾರಸ್ಸು ಮಾಡುವ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಶೇ.50 ರಷ್ಟು ವೈದ್ಯಕೀಯ ಸೌಲಭ್ಯಗಳನ್ನು ಮೀಸಲಿಡುವುದು ಕಡ್ಡಾಯವಾಗಿದೆ.

ಈ ಕುರಿತು ಸರ್ಕಾರದ ಆದೇಶವನ್ನು ಎಲ್ಲ ಆಸ್ಪತ್ರೆಗಳಿಗೆ ಈಗಾಗಲೇ ಜಾರಿ ಮಾಡಲಾಗಿದೆ. ಮತ್ತು ಜಿಲ್ಲಾಡಳಿತಕ್ಕೆ ಸಹಕರಿಸುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈ ಜೋಡಿಸಲು ಎಲ್ಲ ಆಸ್ಪತ್ರೆಗಳ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಈ ಕುರಿತು ಪರಿಣಾಮಕಾರಿ ಅನುμÁ್ಠನಕ್ಕಾಗಿ ಪ್ರತಿ ನೊಂದಾಯಿತ ಆಸ್ಪತ್ರೆಗೆ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಇಂದು ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳು ತಮಗೆ ವಹಿಸಿರುವ ಆಸ್ಪತ್ರೆಗೆ ಭೇಟಿ ನೀಡಿ, ಸರ್ಕಾರದ ಆದೇಶದ ಪಾಲನೆ ಕುರಿತು ಜಿಲ್ಲಾಡಳಿತಕ್ಕೆ ವರದಿ ನೀಡಲು ಅವರು ಸೂಚಿಸಿದ್ದಾರೆ.

*ನೋಡಲ್ ಅಧಿಕಾರಿಗಳ ವಿವರ*: ಹುಬ್ಬಳ್ಳಿಯ ಸಂಜೀವಿನಿ ಸ್ಪೆμÁಲಿಟಿ ಆಸ್ಪತ್ರೆಗೆ ಧಾರವಾಡ ಡಿಟಿಐ ಪ್ರಾಂಶುಪಾಲರಾದ ಕವಿತಾ, ಹುಬ್ಬಳ್ಳಿಯ ನಾಲ್ವಾಡ ಆಸ್ಪತ್ರೆಗೆ ಜಿಲ್ಲಾ ಪಂಚಾಯತ್ ವಯಸ್ಕರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಹುಬ್ಬಳ್ಳಿಯ ವಿವೇಕಾನಂದ ಜನರಲ್ ಆಸ್ಪತ್ರೆಗೆ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಸಹಾಯಕ ನಿರ್ದೇಶಕಿ ಅಶ್ವಿನಿ, ಹುಬ್ಬಳ್ಳಿ ಸೂಪರ್ ಸ್ಪೆμÁಲಿಟಿ ಆಸ್ಪತ್ರೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಿದಂಬರ ಕೆ., ಹುಬ್ಬಳ್ಳಿಯ ಎಸ್‍ಡಿಎಂ ನಾರಾಯಣ ಹೃದಯಾಲಯಕ್ಕೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ವೆಂಕಟರಾಮ, ಹುಬ್ಬಳ್ಳಿಯ ಅಶೋಕ ಆಸ್ಪತ್ರೆಗೆ ಡಿಐಸಿ ಸಹಾಯಕ ನಿರ್ದೇಶಕ ಶಿವಪುತ್ರಪ್ಪ, ಹುಬ್ಬಳ್ಳಿ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಗೆ ಕೌಶಲ್ಯ ವಿಭಾಗ ಉಪನಿರ್ದೇಶಕ ಚಂದ್ರಪ್ಪ, ಹುಬ್ಬಳ್ಳಿಯ ಶ್ರೀ ಬಾಲಾಜಿ ಇನ್ಸ್‍ಟ್ಯೂಟ್ ಆಫ್ ನ್ಯೂರೋ ಸೈನ್ಸಸ್ ಮತ್ತು ಟ್ರಾಮಾಗೆ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಶಿಂಪಗೇರ್, ಹುಬ್ಬಳ್ಳಿಯ ಶಿವಕೃಪಾ ಆಸ್ಪತ್ರೆ ಮತ್ತು ತೀವ್ರ ನಿಗಾ ಘಟಕಕ್ಕೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಾಶಿನಾಥ ಬದ್ರಣ್ಣನವರ್, ಹುಬ್ಬಳ್ಳಿಯ HCGNMR ಕ್ಯೂರಿ ಆಂಕೊಲಾಜಿ ಕೇಂದ್ರಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಹುಬ್ಬಳ್ಳಿಯ ಸೆಕ್ಯೂರ್ ಆಸ್ಪತ್ರೆಗೆ ಹಿರಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಚಂದ್ರಶೇಖರ ಸೇನ್, ಹುಬ್ಬಳ್ಳಿಯ ವಿಹಾನ್ ಹಾರ್ಟ್ ಕೇರ್ ಪ್ರೈ. ಲಿಮಿಟೆಡ್ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಕೊಂಡೆ, ಹುಬ್ಬಳ್ಳಿಯ ಶಕುಂತಲಾ ಸ್ಮಾರಕ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಖಾದಿ ಮತ್ತು ಗ್ರಾಮೋದ್ಯೋಗ ಸಹಾಯಕ ನಿರ್ದೇಶಕ ಅಶೋಕ್ ಪ್ಯಾಟಿ, ಹುಬ್ಬಳ್ಳಿಯ ಪೆÇರ್ಟಿಸ್ ಸುಚಿರಾಯು ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕುಕನೂರ, ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಡಿಒ ವೆಂಕಟೇಶ, ಹುಬ್ಬಳ್ಳಿಯ ಕಿಮ್ಸ್‍ಗೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅಶ್ವಿನಿ ಚಡಚಣ, ಧಾರವಾಡ ವಿಠಲ್ ಮಕ್ಕಳ ಆರೋಗ್ಯ ಮತ್ತು ವಿಶೇಷ ಕೇಂದ್ರಕ್ಕೆ ಹುಬ್ಬಳ್ಳಿಯ ಕಾರ್ಖಾನೆಗಳು ಮತ್ತು ಬಾಯ್ಲರ್‍ಗಳ ಉಪನಿರ್ದೇಶಕಿ ಭಾರತಿ ಮಗ್ದುಮ್, ಧಾರವಾಡ ಸತ್ತೂರಿನ ಎಸ್‍ಡಿಎಂ ವೈದ್ಯಕೀಯ ಆಸ್ಪತ್ರೆಗೆ ಹುಬ್ಬಳ್ಳಿಯ ಕಿಮ್ಸ್ ಸಿಎಓ ರಾಜಶ್ರೀ ಜೈನಾಪುರ, ಧಾರವಾಡ ಡಾ.ಎಸ್.ಆರ್. ರಾಮನಗೌಡರ ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆ ಮತ್ತು ರೀಸರ್ಚ್ ಸಂಸ್ಥೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಮೀನಾಕ್ಷಿ, ಧಾರವಾಡದ ಡಾ.ಎಸ್.ಆರ್. ಜಂಬಗಿಯವರ ಶ್ರಾವ್ಯ ಆಸ್ಪತ್ರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ್, ಧಾರವಾಡದ ಹರ್ಷ ಆಸ್ಪತ್ರೆಗೆ ದೇವರಾಜ ಅರಸು ನಿಗಮದ ವ್ಯವಸ್ಥಾಪಕರು ಮಳಲಿ, ಧಾರವಾಡ ಶ್ರೇಯಾ ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆಗೆ ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಶೋಭಾ, ಧಾರವಾಡ ಕೆಲಗೇರಿ ರಸ್ತೆಯ ಜರ್ಮನ್ ಆಸ್ಪತ್ರೆಗೆ ಮುಖ್ಯ ಪಶುವೈದ್ಯಾಧಿಕಾರಿ ಮನೋಹರ ದ್ಯಾಬೇರಿ, ಧಾರವಾಡ ಸ್ಪಂದನ ಆಸ್ಪತ್ರೆ ಧಾರವಾಡ ಡಿಆರ್‍ಡಿಎ ಯೋಜನಾ ನಿರ್ದೇಶಕ ಬಿ.ಎಸ್.ಮುಗನೂರಮಠ, ಹುಬ್ಬಳ್ಳಿಯ ಸುಶ್ರುತಾ ಆಸ್ಪತ್ರೆಗೆ ಕೃಷಿ ಇಲಾಖೆ ಉಪನಿರ್ದೇಶಕ ಮಂಜುನಾಥ ಅಂತರಳ್ಳಿ, ಹುಬ್ಬಳ್ಳಿಯ ಲೈಫ್‍ಲೈನ್ ಆಸ್ಪತ್ರೆಗೆ ಪಿಎಂಜಿಎಸ್ ಕಾರ್ಯನಿರ್ವಾಹಕ ಅಭಿಯಂತರರು ವಿಮಲ್ ಕೆ. ಅವರನ್ನು ನೇಮಿಸಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *