ಅಂತಾರಾಷ್ಟ್ರೀಯ

ಹುಬ್ಬಳ್ಳಿ-ಧಾರವಾಡ ಬೈಪಾಸ್ 6 ಪಥದ ಎಕ್ಸ್‌ಪ್ರೆಸ್‌, 4 ಪಥದ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಟೆಂಡರ್: ಪ್ರಲ್ಹಾದ ಜೋಶಿ

ಹುಬ್ಬಳ್ಳಿ prajakiran.com : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವದೆಹಲಿ ಇವರು ಹುಬ್ಬಳ್ಳಿ-ಧಾರವಾಡ ಬೈಪಾಸ್ 31 ಕಿಮಿ ರಸ್ತೆಯನ್ನುಎಂದುಥ ಎಕ್ಸ್‍ಪ್ರೆಸ್ ಹೈವೆ ಆಗಿ ಮಾರ್ಪಡಿಸಲು ಹಾಗೂ ನಾಲ್ಕು ಪಥದ ಸರ್ವಿಸ್ ರಸ್ತೆ ನಿರ್ಮಿಸಲು ಇ.ಪಿ.ಸಿ.  ಮಾದರಿಯಲ್ಲಿ ಟೆಂಡರ್ ಕರೆಯಲಾಗಿದೆ.

ಆರು ಪಥದ ಎಕ್ಸ್‍ಪ್ರೆಸ್ ರಸ್ತೆ ಹಾಗೂ ಸಮರ್ಪಕವಾಗಿ ಎರಡೂ ಬದಿಯಲ್ಲಿ ದ್ವಿಪಥದ ಸರ್ವಿಸ್ ರಸ್ತೆಯನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ಇಂದು ಟೆಂಡರ್ ಕರೆಯಲಾಗಿದ್ದು, ಫೆಬ್ರವರಿ 22 ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಕಾಮಗಾರಿ ಮುಗಿಸಲು 2.5 ವರ್ಷ ನಿಗದಿಗೊಳಿಸಲಾಗಿದೆ ಹಾಗೂ ನಿರ್ಮಾಣದ ನಂತರ 5 ವರ್ಷದ ನಿರ್ವಹಣೆಯನ್ನೂ ಗುತ್ತಿಗೆದಾರರೆ ನಿರ್ವಹಿಸುವ ಕರಾರೊಂದಿಗೆ ಟೆಂಡರ್‍ನಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯವಾಗಿ ಈಗಿರುವ ಬೈಪಾಸ್‍ನ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಈ ಟೋಲ್ ಕೆಲಗೇರಿ ಮತ್ತು ನರೆಂದ್ರ ಮದ್ಯೆ ಮಾಡಲಾಗಿದ್ದು ಇದರಿಂದ ಹುಬ್ಬಳ್ಳಿ –ಧಾರವಾಡ ಮಧ್ಯ ಸಂಚರಿಸುವ ಪ್ರಯಾಣಿಕರು ಟೋಲ್ ನಿಂದ ವಿನಾಯಿತಿ ನೀಡಲಾಗಿದೆ.

ಈ ಬೈಪಾಸ್ ನಿರ್ಮಾಣದಿಂದ ನಗರ ಮದ್ಯದೊಳಗಿನ ಸಂಚರಿಸುವ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದೂ ಜೋಶಿ ತಿಳಿಸಿದ್ದಾರೆ.

ಪುಣೆ-ಬೆಂಗಳೂರು ಹೆದ್ದಾರಿ ವಿಸ್ತರಣೆ ಆಯಿತು. ಆದರೆ ಹು-ಧಾ ಬೈಪಾಸ್ ವಿಸ್ತರಣೆ ಆಗಿಲ್ಲ. 6 ಪಥದ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಚಾಲಕರು ಬೈಪಾಸ್ ನಲ್ಲಿಯೂ ಅದೇ ವೇಗದಲ್ಲಿ ಬರುವುದರಿಂದ ಇಂತಹ ಅಪಘಾತಗಳು ಸಂಭವಿಸುತ್ತವೆ ಎಂಬುದು ತಜ್ಞರ ಅಭಿಪ್ರಾಯದೊಂದಿಗೆ ಬೈಪಾಸ್ ಕೂಡಾ ಕನಿಷ್ಠ 6 ಪಥಗಳಿಗೆ ವಿಸ್ತರಣೆ ಆಗಬೇಕೆಂಬುದು ಸಚಿವ ಜೋಶಿ ಆಗ್ರಹವಾಗಿತ್ತು.

ಈ ಯೋಜನೆ ಒಟ್ಟು 1200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳಿಯ ಗಬ್ಬೂರು ಎನ್.ಹೆಚ್. 4 ರಸ್ತೆಯ 402.6 ಕಿಮಿ ಯಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿ 433.2 ಕಿಮಿ ವರೆಗಿನ ಒಟ್ಟು 31 ಕಿಮಿ 6 ಪಥದ ಎಕ್ಸ್‍ಪ್ರೆಸ್ ವೇ ಹಾಗೂ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ 800 ಕೋಟಿ ರೂ. ಹಾಗೂ ಭೂ ಸ್ವಾದೀನ ಡಿಪಿಆರ್ ತಯಾರಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ 400 ಕೋಟಿ ರೂ ಕೇಂದ್ರ ಸರಕಾರ ನೀಡಿದೆ ಎಂದು ಜೋಶಿ ಹೇಳಿದ್ದಾರೆ.

ಈ ಬೈಪಾಸ್ ರಸ್ತೆಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರನ್ನು ಸಚಿವ ಜೋಶಿ ಅವಳಿ ನಗರದ ನಾಗರಿಕರ ಪರವಾಗಿ ಅಭಿನಂದಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *