ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಗುರುವಾರ ಸಂಜೆ ಮತ್ತೆ ಹೊಸದಾಗಿ 4 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.
ಡಿಡಬ್ಲ್ಯೂಡಿ 172-ಪಿ-7824ನ ಸೋಂಕಿತ 56 ವರ್ಷದ ಪುರುಷ ತೀವ್ರ ಜ್ವರ, ನೆಗಡಿ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರು.
ಡಿಡಬ್ಲ್ಯೂಡಿ 173-ಪಿ-7825ನ ಸೋಂಕಿತ 5 ವರ್ಷದ ಬಾಲಕನಿಗೆ ಕೂಡ ತೀವ್ರ ಜ್ವರ, ನೆಗಡಿ ಹಾಗೂ ಕೆಮ್ಮಿನಿಂದಬಳಲುತ್ತಿದ್ದ ಇತನಿಗೆ ಕೂಡ ಕರೋನಾ ವೈರಸ್ ವಕ್ಕರಿಸಿದೆ.
ಡಿಡಬ್ಲ್ಯೂಡಿ 174-ಪಿ-7826 ಸೋಂಕಿತ 28 ವರ್ಷದ ಪುರುಷ ಗುಜರಾತ್ ರಾಜ್ಯದಿಂದ ಧಾರವಾಡ ಆಗಮಿಸಿದ್ದ ಇತನಿಗೆ ಕರೋನಾ ಸೋಂಕು ಹರಡಿದೆ.
ಡಿಡಬ್ಲ್ಯೂಡಿ 175-ಪಿ-7827 ಸೋಂಕಿತ 30 ವರ್ಷದ ಪುರುಷ ತೀವ್ರ ಜ್ವರ, ನೆಗಡಿ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರು. ಇವರಿಗೆ ಕರೋನಾ ಸೋಂಕು ಹರಡಿದೆ.
ಈವರೆಗೆ ಧಾರವಾಡ ಜಿಲ್ಲೆಯ ಮೂವರು ಕರೋನಾ ಸೋಂಕಿತರು ಸಾವನ್ನಪ್ಪಿದ್ದು, ಇನ್ನೂ ಮೂವರು ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 175 ಕ್ಕೆ ಏರಿಕೆಯಾಗಿದೆ.
ಈ ಪೈಕಿ ಈಗಾಗಲೇ 52 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.