ರಾಜ್ಯ

ರಾಜ್ಯದಲ್ಲಿ ಗುರುವಾರ 12 ಸಾವು, 210 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಬರೋಬ್ಬರಿ 12 ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 210 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7944ಕ್ಕೆ ಏರಿಕೆಯಾಗಿದೆ.

210 ಸೋಂಕಿತರಲ್ಲಿ, 58 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದಾರೆ.  21 ಜನಅಂತರ್ ರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.



ಇಂದು ರಾಜ್ಯದಲ್ಲಿ179 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 4983 ಜನ ಗುಣಮುಖರಾಗಿದ್ದು, 2843 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 73 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಗುರುವಾರವೂ 12 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 114ಕ್ಕೆ ಬಂದು ನಿಂತಿದೆ.

ಗುರುವಾರ ಪತ್ತೆಯಾದ 210 ಪ್ರಕರಣಗಳಲ್ಲಿ ಬಳ್ಳಾರಿ 48, ಕಲಬುರಗಿ 48,ದಕ್ಷಿಣ ಕನ್ನಡ 23, ರಾಮನಗರ 21, ಬೆಂಗಳೂರುನಗರ 17 ಸೋಂಕಿತರು ಕಂಡು ಬಂದಿದ್ದಾರೆ.



ಇನ್ನೂಳಿದಂತೆ  ಯಾದಗಿರಿ 8, ಮಂಡ್ಯ7, ಬೀದರ 6, ಗದಗ 5, ರಾಯಚೂರು 4, ಹಾಸನ 4, ಧಾರವಾಡ 4, ದಾವಣಗೆರೆ 3, ಚಿಕ್ಕಮಗಳೂರು 3, ವಿಜಯಪುರ ಹಾಗೂ ಉತ್ತರ ಕನ್ನಡದಲ್ಲಿ ತಲಾ 2, ಬಾಗಲಕೋಟೆ, ಶಿವಮೊಗ್ಗ, ಕೊಪ್ಪಳದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಗುರುವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೇ 8 ಜನ ಸಾವನ್ನಪ್ಪಿದ್ದರೆ,  ವಿಜಯಪುರ, ಕಲಬುರಗಿ,  ಹಾಗೂ ಕೊಪ್ಪಳದಲ್ಲಿ ತಲಾ ಒಬ್ಬರು  ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಪಿ-3912 ನೇ ಸೋಂಕಿತ 57 ವರ್ಷದ ಪುರುಷ, ಪಿ-5340 ಸೊಂಕಿತ 58 ವರ್ಷದ ಪುರುಷ, ಪಿ-6004 ಸೋಂಕಿತ 39 ವರ್ಷದ ಪುರುಷ, ಪಿ- 6027 ಸೋಂಕಿತ 40 ವರ್ಷದ ಮಹಿಳೆ, ಪಿ- 6570ನ ಸೋಂಕಿತ 68 ವರ್ಷದ ವೃದ್ದ, ಪಿ-7183 ಸೋಂಕಿತ 74 ವರ್ಷದ ವೃದ್ದೆ, ಪಿ-7185ನ ಸೋಂಕಿತ 65 ವರ್ಷದ ವೃದ್ದೆ, ಪಿ-7250 ನ ಸೋಂಕಿತ 32 ವರ್ಷದಯುವಕ ಸಾವನ್ನಪ್ಪಿದ್ದಾರೆ.

ಅದೇ ರೀತಿ ಕೊಪ್ಪಳದ ಪಿ-7105 ಸೋಂಕಿತ 50 ವರ್ಷದ ಮಹಿಳೆ,   ಬೀದರನ ಪಿ-7776 ಸೋಂಕಿತ 55 ವರ್ಷದಪುರುಷ, ವಿಜಯಪುರದ ಪಿ-7835ನ ಸೋಂಕಿತ 66 ವರ್ಷದ ವೃದ್ದೆ, ಕಲಬುರಗಿಯಲ್ಲಿ ಪಿ-7907 ನ ಸೋಂಕಿತ 50 ವರ್ಷದ ಪುರುಷ      ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *