ರಾಜ್ಯ

ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 5 ಪ್ರಥಮ, 9 ದ್ವಿತೀಯ, 4 ತೃತೀಯ ಸ್ಥಾನ ಗಳಿಸಿದ ಧಾರವಾಡ ಜಿಲ್ಲೆಯ ನೌಕರರು

ಧಾರವಾಡ prajakiran. com ಜೂ.03 ;  ಪ್ರತಿ ವರ್ಷದಂತೆ ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸುವ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲೆಯ ಸರ್ಕಾರಿ ನೌಕರರು ವಿವಿಧ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ 18 ಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ  ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ರಿಯಾಶೀಲ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್.ಷಡಾಕ್ಷರಿ ಅವರ ನೇತೃತ್ವದಲ್ಲಿ ಎಲ್ಲ ಜಿಲ್ಲೆಯ ಸರ್ಕಾರಿ ನೌಕರರಿಗಾಗಿ ಬೆಂಗಳೂರಿನಲ್ಲಿ ಮೇ.30, 31 ಮತ್ತು ಜೂನ್ 1 ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಧಾರವಾಡ ಜಿಲ್ಲಾ ನೌಕರರು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ವಿಜೇತರ ವಿವರ (ವೈಯಕ್ತಿಕ ಸ್ಪರ್ಧೆಗಳು): ಔಷಧ ನಿಯಂತ್ರಣ ಇಲಾಖೆಯ ಭಾಗ್ಯಶ್ರೀ ಎಸ್. ಬಳಗಲಿ ಅವರು ಮಣಿಪುರಿ ನೃತ್ಯದಲ್ಲಿ ಪ್ರಥಮ ಸ್ಥಾನ, ಕಲಘಟಗಿ ತಾಲೂಕ ಪಂಚಾಯತಿಯ ರವೀಂದ್ರ ಆರ್. ಅಲ್ಲಾಪೂರ (ಗ್ರೀಕೂರೂಮನ್) 67 ಕೆ.ಜಿ. ಕುಸ್ತಿಯಲ್ಲಿ ಪ್ರಥಮ ಸ್ಥಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ನಾಗರಾಜ ಗಿಣಿವಾಲದ ಅವರು ಪಾಶ್ಚಿಮಾತ್ಯ ತಂತಿವಾದ್ಯದಲ್ಲಿ ಪ್ರಥಮಸ್ಥಾನ, ಅಬಕಾರಿ ಇಲಾಖೆಯ ಜಿ.ವಿ. ಆಲದಕಟ್ಟಿ ಅವರು ಪವರ್ ಲಿಪ್ಟಿಂಗ್ 120 ಕೆ.ಜಿ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ ಸ್ಥಾನ, ಕಂದಾಯ ಇಲಾಖೆಯ ಅಂಕಿತಾ ವ್ಹಿ. ಅವರು ಭರತನಾಟ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಧಾರವಾಡ ತಹಶೀಲ್ದಾರ ಕಚೇರಿಯ ಸಚೀನ ಮಾಳಗಿ 100 ಮೀಟರ್ ಪ್ರೀಸ್ಟೈಲ್ ಈಜು ತೃತೀಯ ಸ್ಥಾನ, ಸಾರ್ವಜನಿಕ ಶಿಕ್ಷಣ ಇಲಾಖೆಯ ನೌಕರರಾದ ಸರಸ್ವತಿ ಸುಣಗಾರ ಪವರ್ ಲಿಪ್ಟಿಂಗ್ 52 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ (ಗ್ರೀಕೂರೂಮನ್) 50 ಕೆ.ಜಿ. ಕುಸ್ತಿ ದ್ವಿತೀಯ ಸ್ಥಾನ, ರಾಜು ಮಾಲವಾಡ (ಗ್ರೀಕೂರೂಮನ್) 77 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ದ್ವಿತೀಯ ಸ್ಥಾನ, ನಾಗರಾಜ ಡಿ. ಬಾಗನವರ (ಗ್ರೀಕೂರೂಮನ್) 63 ಕೆ.ಜಿ. ಕುಸ್ತಿ ದ್ವಿತೀಯ ಸ್ಥಾನ, ರವಿ ಬೆಂತೂರ ಪವರ್ ಲಿಪ್ಟಿಂಗ್ 82.5 ಕೆ.ಜಿ ದ್ವಿತೀಯ ಸ್ಥಾನ ಹಾಗೂ ಬೆಸ್ಟ್ ಪಿಜಿಕ್ 75-80 ಕೆ.ಜಿ ವಿಭಾಗ ತೃತೀಯ ಸ್ಥಾನ, ಶಶಿಧರ ವಿ. ದಮ್ಮಳಿ ಟೇಬಲ್ ಟೈನಿಸ್ ತೃತೀಯ ಸ್ಥಾನ, ನೀರಾವರಿ ಇಲಾಖೆಯ ಬುಕ್ಸೆಲರ್ ತೌಸಿಪ್ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, ಕೃಷಿ ಇಲಾಖೆಯ ರೋಹಣ ಆರ್. ಕೆಸರಕರ್ ಪವರ್ ಲಿಪ್ಟಿಂಗ್ 59 ಕೆ.ಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ, ಎನ್.ಸಿ.ಸಿ. ವಿಭಾಗದ ಕುಮಾರ್ ಎಚ್. ಕೊರಗರ್ (ಗ್ರೀಕೂರೂಮನ್) 61 ಕೆ.ಜಿ ಕುಸ್ತಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜೇತರ ವಿವರ (ಗುಂಪು ಸ್ಪರ್ಧೆಗಳು): 10 ನಿಮಿಷ ಕಾಲಾವಧಿಯ ಜಾನಪದ ಗೀತೆಯ ಸಮೂಹ ಗೀತಗಾಯನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾಶ ಕಂಬಳಿ, ಅಶೋಕ ಎನ್. ವಾಯ್, ಎನ್. ಆರ್. ಕಟ್ಟಮನಿ, ಪಿ.ಕೆ ಪಿಂಜಾರ, ವಿ.ಪಿ. ಬಡಿಗೇರ್, ಜಯಲಕ್ಷ್ಮೀ ಎಚ್., ವಿಜಯಲಕ್ಷ್ಮೀ ಕಮ್ಮಾರ, ನಿರ್ಮಲಾ ಕುಲಕರ್ಣಿ, ವಾಣಿಶ್ರೀ ಕುಲಕರ್ಣಿ, ಶಶಿಕಲಾ ನಾಯ್ಕರ್ ಅವರು ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

45 ನಿಮಿಷದ ಕಿರುನಾಟಕ ಸ್ಪರ್ಧೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಫ್.ಬಿ ಕಣವಿ, ಎನ್.ಎಸ್. ಕಮ್ಮಾರ್, ಸಿ.ಎಮ್. ಕೆಂಗಾರ್, ರಾಜಸಿಂಗ್ ಹಲವಾಯಿ, ಎಮ್.ಆರ್.ಪಾಲಿ, ಬಿ.ಎನ್. ಗೊರವರ, ಜಿ.ಎನ್.ಪೂಜಾರ್, ಎಮ್.ಆರ್.ಸತ್ತಿಗೇರಿ, ಜೆ.ಎಮ್. ಗಾಮನಕಟ್ಟೆ, ಎಮ್.ಬಿ.ಹುಬ್ಬಳ್ಳಿ, ಭಾರತಿ ಮನ್ನಿಕೇರಿ, ಎಮ್. ಬಿ. ವಟ್ಟಟ್ಟಿ ಅವರು ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದು ಧಾರವಾಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಧಾರವಾಡ ಜಿಲ್ಲೆ ವತಿಯಿಂದ ಭಾಗವಹಿಸಿ ಅಮೋಘ ಸಾಧನೆಯನ್ನು ಮಾಡಿ ಪದಕಗಳನ್ನು ಪಡೆದು ಧಾರವಾಡ ಜಿಲ್ಲೆಯ ಕಿರ್ತಿಯನ್ನು ಹೆಚ್ಚಿಸಿದ ಎಲ್ಲಾ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧಾಳುಗಳಿಗೆ ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಸುಬ್ಬಾಪೂರಮಠ, ಗೌರವಾಧ್ಯಕ್ಷ ಆರ್.ಬಿ. ಲಿಂಗದಾಳ, ರಾಜ್ಯಪರಿಷತ್ ಸದಸ್ಯ ದೇವಿದಾಸ್ ಶಾಂತಿಕರ್, ಖಜಾಂಚಿ ರಾಜಶೇಖರ ಬಾಣದ, ನೌಕರರ ಭವನದ ಕಾರ್ಯದರ್ಶಿ ಗಿರೀಶ ಚೌಡಕಿ, ಕಾರ್ಯದರ್ಶಿ ಮಂಜುನಾಥ ಯಡಳ್ಳಿ, ಕ್ರೀಡಾ ಕಾರ್ಯದರ್ಶಿ ಮಲ್ಲಿಕಾರ್ಜನ ಸೊಲಗಿ, ಸಾಂಸ್ಕøತಿಕ ಕಾರ್ಯದರ್ಶಿ ವಿ.ಬಿ.ಕುರಬೆಟ್ಟ, ಡಾ.ಬಸವರಾಜ ಕುರಿ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರ ಪರವಾಗಿ ಅಭಿನಂದಿಸಲಾಗಿದೆ ಎಂದು ಧಾರವಾಡ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *