ರಾಜ್ಯಾದಂತ ಡೆಲ್ಟಾ ಪ್ಲಸ್ ರ್ಯಾಂಡಮ್ ಟೆಸ್ಟ್
ಬೆಂಗಳೂರು prajakiran.com : ಕೊರೋನಾ ಎರಡನೇ ಅಲೆಯಿಂದ ಈಗಾಗಲೇ ತತ್ತರಿಸಿರುವ ಕರ್ನಾಟಕಕ್ಕೆ ಮಾರಕ ಡೆಲ್ಟಾ ಪ್ಲಸ್ ರೂಪಾಂತರಿ ಕೊರೋನಾ ಕಾಲಿಟ್ಟಿದೆ.
ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಡೆಲ್ಟಾ ಪ್ಲಸ್ ಎಂಟ್ರಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ.
ಪ್ರತಿ ಜಿಲ್ಲೆಗಳಲ್ಲೂ ಶೇ.5 ರಷ್ಟು ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಅನುಮಾನ ಇರುವ ಕಡೆ ಇನ್ನೂ ಹೆಚ್ಚು ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ ಎಂದಿದ್ದಾರೆ.