ನವದೆಹಲಿ prajakiran.com : ದೆಹೆಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಕೊರೋನಾ ಲಕ್ಷಣಗಳು ಕಾಣಿಸಿದ್ದ ಹಿನ್ನೆಲೆ ಅನಿಲ್ ಬೈಜಾಲ್ ಅವರು ಕೊರೋನಾ ಪರೀಕ್ಷೆ ಮಾಡಿಸಿದ್ದು, ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದು, ನನಗೆ ಕೊರೋನಾ ದೃಢಪಟ್ಟಿದೆ.
ಸೌಮ್ಯ ಲಕ್ಷಣಗಳು ಹೊಂದಿದ್ದೇನೆ. ತಕ್ಷಣವೇ ಐಸೋಲೇಟ್ ಆಗಿದ್ದೇನೆ. ನನ್ನ ಸಂಪರ್ಕದಲ್ಲಿದ್ದ ಎಲ್ಲರ ಪರೀಕ್ಷೆ ಮಾಡಿಸಲಾಗಿದೆ.
ಮನೆಯಿಂದಲೇ ಕಾರ್ಯನಿರ್ವಹಿಸುತ್ತೇನೆ . ಯಾವುದೇ ರೀತಿಯ ಆತಂಕ ಬೇಡ ಎಂದು ಅನಿಲ್ ಬೈಜಾಲ್ ತಿಳಿಸಿದ್ದಾರೆ.