ಲಕ್ನೋ (ಉತ್ತರ ಪ್ರದೇಶ) Prajakiran.com : ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೊರೋನಾ ಸೋಂಕಿನಿಂದ ಗುಣಮುಖವಾಗಿದ್ದು, ಹಾರೈಸಿದ ಎಲ್ಲರಿಗು ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಟ್ವಿಟ್ ಮಾಡಿರುವ ಅವರು, ನಿಮ್ಮೆಲ್ಲರ ಹಾರೈಕೆ ಮತ್ತು ವೈದ್ಯರ ಆರೈಕೆಯಿಂದ ಕೊರೋನಾ ಸೋಂಕಿನಿಂದ ಗುಣಮುಖನಾಗಿದ್ದೇನೆ.
ವರದಿ ನೆಗೆಟಿವ್ ಬಂದಿದೆ. ನೀವೆಲ್ಲರು ನೀಡಿದ ಶುಭ ಹಾರೈಕೆ ಮತ್ತು ಸಹಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.
ಕೊರೋನಾ ಪಾಸಿಟಿವ್ ಬಂದ ನಂತರ, ಯೋಗಿ ಆದಿತ್ಯನಾಥ್ ಏ.13 ರಿಂದ ತಮ್ಮನ್ನು ತಾವು ಐಸೋಲೇಟ್ ಮಾಡಿಕೊಂಡಿದ್ದರು.