ಅಂತಾರಾಷ್ಟ್ರೀಯ

ಧಾರವಾಡದ ಇನ್ಸಪೆಕ್ಟರ್ ಕಾಡದೇವರಮಠಗೆ ಕ್ಲಾಸ್ ತೆಗೆದುಕೊಂಡ ಕೇಂದ್ರ ಸಚಿವ ಜೋಶಿ

*ಕಾಂಗ್ರೆಸ್ ಅಣತಿಯಂತೆನಡೆದುಕೊಂಡರೆ ಹುಷಾರ್*

*ತಪ್ಪು ಮಾಡಿದರೆ ಕಾನೂನು ಪ್ರಕಾರ ನಡೆದುಕೊಳ್ಳಿ*

ಹುಬ್ಬಳ್ಳಿ ಪ್ರಜಾಕಿರಣ.ಕಾಮ್ : ಧಾರವಾಡ ಲೋಕಸಭಾ ಸದಸ್ಯರಯ ಆಗಿರುವ ಕೇಂದ್ರದ ಪ್ರಭಾವಿ ಸಚಿವರು ಆಗಿರುವ ಪ್ರಹ್ಲಾದ ಜೋಶಿ ಅವರು ಧಾರವಾಡ ಶಹರ ಠಾಣೆ ಪೊಲೀಸ್ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಸರಿಯಾಗಿ ಬಿಸಿ ತಾಕಿಸಿ, ಕಾನೂನು ಪಾಠ ಮಾಡಿದರು.

ಅವರು ದೀಪಾವಳಿ ಪ್ರಯುಕ್ತ ಸಚಿವರ ನಿವಾಸಕ್ಕೆ ಶೋಭ ಕೋರಲು ಬಂದ ಸಂದರ್ಭದಲ್ಲಿ ಭಾನುವಾರ ಈ ಘಟನೆ ನಡೆದಿದೆ.

ಅದು ಗೊಲ್ಲರ ಕಾಲೋನಿ ಸ್ಥಳೀಯರ ಸಮ್ಮುಖದಲ್ಲಿ ಜಾಡಿಸಿದ್ದಾರೆ.
ಅವರು ತಪ್ಪು ಮಾಡಿದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಿ. ಅದು ಬಿಟ್ಟು ಠಾಣೆಗೆ ಕರೆದು ಹಲ್ಲೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನಿಸಿದರು.

ಅಲ್ಲದೆ, ಕಾಂಗ್ರೆಸ್ ನಾಯಕರ ಅಣತಿಯಂತೆ ನಡೆದುಕೊಂಡರೆ ಹುಷಾರ್ ಎಂದು ಎಚ್ಚರಿಸಿದರು.

ಧಾರವಾಡದ ಗೊಲ್ಲರ ಕಾಲೋನಿಯ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಬೆಂಬಲಿಗರನ್ನು ಶ್ರೀಕೃಷ್ಣ ಜನ್ಮಾಷ್ಠಮಿ, ಗಣೇಶ ಉತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮ ವೇಳೆ ಧಾರವಾಡ ಶಹರ ಪೊಲೀಸ್ ಠಾಣೆ ಪೊಲೀಸರು ಕಿರಿಕಿರಿ ಮಾಡಿ ಅನಗತ್ಯವಾಗಿ ತೊಂದರೆ ನೀಡಿದ್ದರು‌.

ಟಾರ್ಗೆಟ್ ಮಾಡಿ ಮೂರು ನಾಲ್ಕು ಬಾರಿ ಠಾಣೆಗೆ ಕರೆದು ಅವಾಜ್ ಹಾಕಿದ್ದ ಹಾಗೂ ದೈಹಿಕವಾಗಿ ಹಲ್ಲೆ ನಡೆಸಿದ್ದ ಗಂಭೀರ ಆರೋಪವನ್ನು ಅವರು ಇಂದು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದರು.

ತಕ್ಷಣ ಗರಂ ಆದ ಅವರು ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ನಾನು ಕಾನೂನು ಪ್ರಕಾರ ಪೊಲೀಸ್ ಆಯುಕ್ತರ ಕಚೇರಿ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಇದರಿಂದಾಗಿ ದಿಕ್ಕೆ ತೋಚದಂತೆ ಅದ ಇನ್ಸಪೆಕ್ಟರ್ ಕಾಡದೇವರ ಮಠ ಕೆಲಕಾಲ ಅಸಹಾಯಕರಾಗಿ ನಿಂತು ಕೊಂಡು ಆಬಳಿಕ ಹಲವು ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದ್ದು ಕಂಡಯ ಬಂತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *