ಬೆಳ್ಳಂಬೆಳಿಗ್ಗೆ ಗ್ರಾಮಕ್ಕೆ ಬಂದ ಮೊಸಳೆ
ಕಾರವಾರ prajakiran.com: ಆಹಾರ ಅರಸುತ್ತ ನದಿ ಭಾಗದಿಂದ ಮೊಸಳೆಯೊಂದು ದಾಂಡೇಲಿ ಸಮೀಪದ ಕೊಗಿಲಬನ ಗ್ರಾಮಕ್ಕೆ ನುಗ್ಗಿದ ಘಟನೆ ಗುರುವಾರ ಬೆಳ್ಳಂಬೆಳಿಗ್ಗೆ ನಡೆದಿದೆ.
ಗ್ರಾಮಕ್ಕೆ ನುಗ್ಗಿದ ಬೃಹತ್ ಆಕಾರದ ಮೊಸಳೆ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ. ಕಾಳಿ ನದಿಯು ಕೋಗಿಲಬನ ಗ್ರಾಮದ ಪಕ್ಕದಲ್ಲೇ ಇದೆ.
ಅಲ್ಲಿ ಸಾವಿರಾರು ಮೊಸಳೆಗಳಿವೆ. ಆದ್ರೆ ಇದುವರೆಗೆ ಮೊಸಳೆಗಳು ನದಿ ಬಿಟ್ಟು ಜನವಸತಿ ಪ್ರದೇಶಕ್ಕೆ ಬಂದ ಉದಾಹರಣೆಗಳಿಲ್ಲ.
ಇದೇ ಮೊದಲ ಬಾರಿಗೆ ಜನವಸತಿ ಪ್ರದೇಶಕ್ಕೆ ಮೊಸಳೆ ಬಂದಿದ್ದು ಜನರಲ್ಲಿ ಭೀತಿ ಹೆಚ್ಚಾಗಿದೆ.
ಮೊಸಳೆ ಹಾದು ಹೋಗುವ ರಸ್ತೆಯ ಬದಿಯಲ್ಲಿ ಇರುವ ಮನೆಗಳ ಜನ ಬಾಗಿಲು ಮುಚ್ಚಿಕೊಂಡು ಕುಳಿತಿದ್ದರು.