ಅಂತಾರಾಷ್ಟ್ರೀಯ

ಗುಜರಾತ್, ಮಹಾರಾಷ್ಟ್ರದಲ್ಲಿ ಕಂಪಿಸಿದ ಭೂಮಿ…..!

ನವದೆಹಲಿ prajakiran.com : ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಲಘು ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಬೆಳಗ್ಗೆ 4:52 ಕ್ಕೆ ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ್ದು 3.1 ತೀವ್ರತೆ ಕಾಣಿಸಿದೆ. ಗಂಟೆಯ ಅಂತರದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, 1.3 ತೀವ್ರತೆ ದಾಖಲಾಗಿದೆ.

ಕಚ್‌ನ ರಾಪರ್ ಪ್ರದೇಶದಿಂದ 15 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. 

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿಯೂ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 3.6 ರಷ್ಟು ತೀವ್ರತೆ ಕಾಣಿಸಿದೆ. ಯಾವುದೇ ಪ್ರಾಣ, ಆಸ್ತಿ ಹಾನಿ ಕುರಿತು ವರದಿಯಾಗಿಲ್ಲ.

ಆದರೆ, ಎರಡು ರಾಜ್ಯದ ಜನತೆ ಗಾಬರಿಗೊಂಡಿದ್ದು, ಯಾವಾಗ ಹಾಗೂ ಎಲ್ಲಿ ಏನೂ ಆಗುತ್ತದೆಯೋ ಎಂಬ ಆತಂಕದಿಂದ ಜೀವನ ಸಾಗಿಸುತ್ತಿದ್ದಾರೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *