ರಾಜ್ಯ

ರಾಜ್ಯದ ಹಲವು ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಲ್ಲಿ ನರಕ ದರ್ಶನ….!?

ಬೆಂಗಳೂರು prajakiran.com : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಹೆಚ್ಚುತ್ತಿರುವ ಬೆನ್ನ ಹಿಂದೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಯೋಜಿತ ಕೋವಿಡ್ ಆಸ್ಪತ್ರೆಯ ಕರಾಳ ಮುಖಗಳು ಬಯಲಿಗೆ ಬರುತ್ತಿವೆ.

ಅವ್ಯವಸ್ಥೆಯ ಆಗರವಾಗುತ್ತಿರುವ ಆಸ್ಪತ್ರೆಗಳ ಕುರಿತು ಕರೋನಾ ಸೋಂಕಿತರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೀದರನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಔಷಧ ಸ್ವೀಕರಿಸುತ್ತಿರುವುದಲ್ಲದೆ,  ಸ್ನಾನ,  ಶೌಚಕ್ಕೂ ಕೂಡ ಸರತಿ ಸಾಲಿನಲ್ಲಿ ನಿಂತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.

ಸೋಂಕಿತರಿಗೆ ವಾರ್ಡ್ ನಲ್ಲಿ ಗುಳಿಗೆ ವಿತರಿಸುತ್ತಿಲ್ಲ. ಇದರಿಂದ ಮತ್ತಷ್ಟು ಹರಡುವ ಸಾಧ್ಯತೆಗಳಿವೆ. 50 ಮಂದಿಗೆ ಕೇವಲ 2 ಬಾತ್ ರೂಂ ಇವೆ. ಕುಡಿಯುವ ನೀರು ವ್ಯವಸ್ಥೆ ಇಲ್ಲ. ಬೆಡ್ ಸರಿಯಾಗಿ ಇಲ್ಲ. ವಾರ್ಡ್ ನಲ್ಲಿ ಊಟದ ವ್ಯವಸ್ಥೆ ಸರಿಯಲ್ಲ ಎಂದು ದೂರಿದ್ದಾರೆ.

ಈ ಸಂಬಂಧ ಕರೋನಾ ಸೋಂಕಿತರ ಕುಟುಂಬ ಸದಸ್ಯರು ಬೀದರ ಜಿಲ್ಲಾಧಿಕಾರಿ ಕಚೇರಿ ಎದುರು  ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನ ಹೊರ ಹಾಕಿದರು.

ಅದೇ ರೀತಿ  ಬೆಂಗಳೂರಿನ ಆನೇಕಲ್ ಆಸ್ಪತ್ರೆಯಲ್ಲಿ ಕಸದ ರಾಶಿಯಿಂದ ತುಂಬಿ ತುಳುಕುತ್ತಿದೆ.  ಇಲ್ಲಿ ರೋಗಿಗಳ ಪಾಡು ಹೇಳತೀರದು.

ಕಲಬುರಗಿಯಲ್ಲಿಂತೂ ಮಧ್ಯಾಹ್ನ ಆದರೂ ಉಪಹಾರ ನೀಡಿಲ್ಲ. ಬಾಗಲಕೋಟೆಯಲ್ಲೂ ಅದೇ ಪರಿಸ್ಥಿತಿಇದೆ. ಅವ್ಯವಸ್ಥೆಯ ಆಗರವಾಗಿದೆ.

ಕೋವಿಡ್ ನಿಯೋಜಿತ ಆಸ್ಪತ್ರೆಗಳು. ಎರಡು ಮೂರು ದಿನಗಳಾದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಡಿ ಹೆಚ್ ಒ ಹಾಗೂ ಆಸ್ಪತ್ರೆ ಉಸ್ತುವಾರಿ ಗಳನ್ನು ಕರೋನಾ ಸೋಂಕಿತರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

500 ಜನರಿದ್ದರೂ ಇನ್ನೂರು ಜನರಿಗೆ ಮಾತ್ರ ಉಪಹಾರ ಕೊಡ್ತಿಲ್ಲ. ಒಂದಿನ ಎರಡು ದಿನ ಚಲೋ ದಿನಾ ಹೀಗೆ ಆದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ಜಿಲ್ಲೆಯ ಸೋಂಕಿತರಿಗೆ ಕೆಟ್ಟ ಆಹಾರ ನೀಡಿದ್ದಾರೆ. ನಿನ್ನೇ ರಾತ್ರಿ ಊಟ ನೀಡಿರುವುದುಅಲ್ಲಿನ ಸೋಂಕಿತರ ಆಕ್ರೋಶಕ್ಕೆ ಕಾರಣವಾಗಿದೆ.

ಅದೇ ರೀತಿ ಯಾದಗಿರಿ ಜಿಲ್ಲೆಯ ಭೀಮರಾಯನಗುಡಿ ಐಸೋಲೇಶನ್ ಸೆಂಟರ್ ದನದ ಕೊಟ್ಟಿಗೆ ಯಾಗಿದೆ. ಕಸದ ರಾಶಿ ಬಿದ್ದಿದೆ. ಶೌಚಾಲಯ ಗಳಿಗೆ ನೀರಿಲ್ಲ.

ಕೆಟ್ಟ ವಾಸನೆ ಬರುತ್ತಿದೆ. ಇದರಿಂದ ಮತ್ತೊಂದು ರೋಗ ಬರುವ ಸಾಧ್ಯತೆಗಳಿವೆ. ಈ ಕುರಿತು ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೈಸೂರು ಕೋವಿಡ್ ನಿಯೋಜಿತ ಆಸ್ಪತ್ರೆಯಲ್ಲೂ ಪರಿಸ್ಥಿತಿ ಹೊರತಾಗಿಲ್ಲ. ಈ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರು ಗಮನ ಹರಿಸಿ ಅಗತ್ಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿದೆ.

ಆದರೆ ಸರಕಾರ, ಜನಪ್ರತಿನಿಧೀಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಯಾ ಜಿಲ್ಲಾಡಳಿತಗಳು ಮಾತ್ರ ಸಕರಾತ್ಮಕವಾಗಿ ಸ್ಪಂದಿಸದಿರುವುದು ನೋವಿನ ಸಂಗತಿಯಾಗಿದೆ. ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಎಂಬುದು ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *