ರಾಜ್ಯ

ಧಾರವಾಡ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಕೋನರಡ್ಡಿ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಅಣ್ಣಿಗೇರಿ, ಕುಂದಗೋಳ, ಕಲಘಟಗಿ, ಅಳ್ನಾವರ ಹಾಗೂ ಧಾರವಾಡ ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ೨೦೧೯-೨೦ ರ ಮುಂಗಾರಿನಲ್ಲಿ ವಿಮಾ ತುಂಬಿದ ಹತ್ತಿ, ಹೆಸರು, ಮೆಣಸಿನಕಾಯಿ, ಈರುಳ್ಳಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆ ಬೆಳೆದ ರೈತರು ಕಳೆದ ವರ್ಷ ಅತಿವೃಷಿಯಿಂದ ಬೆಳೆ ಹಾನಿಯಾಗಿ ಈ ಸಲ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾ ಕಂಪನಿಯವರು ರೈತರಿಂದ ಬೆಳೆವಿಮೆ ತುಂಬಿಸಿಕೊಳ್ಳಲು ದಿನಾಂಕವನ್ನು ನಿಗದಿ ಮಾಡಿ ಹಣ ತುಂಬಿಸಿಕೊಳ್ಳುತ್ತಾರೆ. ಆದರೆ […]

ರಾಜ್ಯ

ನಟಿ ಸುಧಾರಾಣಿ ಸೋದರನ ಪುತ್ರಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯ….!

ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಮುಂದುವರೆದಿದ್ದು, ಕೋವಿಡ್ ತಪಾಸಣೆ ಇಲ್ಲದೆ ಯಾವುದೇ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಯಾರಾದರೂ ಕೇಳಿದರೆ ಬೆಡ್ ಇಲ್ಲ. ವೆಂಟಿಲೇಟರ್ ಇಲ್ಲ ಎಂದು ಸಾಗ ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿ ಕನ್ನಡದ ಹಿರಿಯ ನಟಿ ಸುಧಾರಾಣಿ ಅವರ ಸೋದರನ ಪುತ್ರಿಗೂ ಬಂದಿದೆ. ನಿನ್ನೇ ರಾತ್ರಿ ಅವರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿಂದೆ ಅವರು ತೋರಿಸಿದ್ದಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಸುಧಾರಾಣಿಯನ್ನು ಆಸ್ಪತ್ರೆ […]

ರಾಜ್ಯ

ಕೋವಿಡ್  ಕರ್ತವ್ಯಕ್ಕೆ ನಿಯೋಜನೆಗೊಂಡ ಶಿಕ್ಷಕಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವು…!

ಧಾರವಾಡ prajakiran.com : ರಾಜ್ಯ ಸರಕಾರ ಕೋವಿಡ್ 19 ಕರ್ತವ್ಯಕ್ಕೆ ಸರಕಾರಿ ಶಾಲಾ ಶಿಕ್ಷಕರನ್ನು ನಿಯೋಜಿಸುತ್ತಿದೆ. ಆದರೆ ಶಿಕ್ಷಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ಸಂಭವಿಸಿದೆ. ಇದು ರಾಜ್ಯಾದ್ಯಂತ ಶಿಕ್ಷಕ ಸಮುದಾಯಕ್ಕೆ,  ಸರಕಾರಿ ನೌಕರರಿಗೆ ಸಂಕಷ್ಟ ಹಾಗೂ ಆತಂಕಕ್ಕೆ ಸಿಲುಕಿಸಿದೆ.  ಬೆಂಗಳೂರು  ಉತ್ತರ ವಲಯ 3ರ ಸರಕಾರಿ ಉರ್ದು  ಮಾದರಿ ಶಾಲೆ ಡಿ. ಜೆ.ಹಳ್ಳಿಯ ಸಹ ಶಿಕ್ಷಕಿ ಯಾದಂತಹ ಶ್ರೀಮತಿ ದಿಲನಾಜ್  ಬೇಗಂ ಅವರು ಕರೋನಾ ಪಾಸಿಟಿವ್ ಬಂದು […]

ರಾಜ್ಯ

ರಾಜ್ಯದ ಹಲವು ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಲ್ಲಿ ನರಕ ದರ್ಶನ….!?

ಬೆಂಗಳೂರು prajakiran.com : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಹೆಚ್ಚುತ್ತಿರುವ ಬೆನ್ನ ಹಿಂದೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಯೋಜಿತ ಕೋವಿಡ್ ಆಸ್ಪತ್ರೆಯ ಕರಾಳ ಮುಖಗಳು ಬಯಲಿಗೆ ಬರುತ್ತಿವೆ. ಅವ್ಯವಸ್ಥೆಯ ಆಗರವಾಗುತ್ತಿರುವ ಆಸ್ಪತ್ರೆಗಳ ಕುರಿತು ಕರೋನಾ ಸೋಂಕಿತರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೀದರನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಔಷಧ ಸ್ವೀಕರಿಸುತ್ತಿರುವುದಲ್ಲದೆ,  ಸ್ನಾನ,  ಶೌಚಕ್ಕೂ ಕೂಡ ಸರತಿ ಸಾಲಿನಲ್ಲಿ ನಿಂತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ. ಸೋಂಕಿತರಿಗೆ ವಾರ್ಡ್ […]

ರಾಜ್ಯ

ರಾಜ್ಯಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರ ಹೋರಾಟ

ಧಾರವಾಡ prajakiran.com : ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದು, ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟ ಹೋರಾಟಕ್ಕೆ  ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕರೆನೀಡಿದೆ.  ಕಾರ್ಯಕರ್ತೆಯರಿಗೆ ಸರ್ಕಾರದ ನಿರ್ಲಕ್ಷ್ಯ ಮತ್ತು ಜನವಿರೋಧಿ ಧೋರಣೆಯ ವಿರುದ್ಧ ರಾಜಿರಹಿತ ಹೋರಾಟಕ್ಕೆ ಸಜ್ಜುಗೊಳ್ಳಬೇಕೆಂದು  ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮನವಿ ಮಾಡಿದ್ದು, ಇಲಾಖೆಯ ಒತ್ತಡಗಳಿಗೆ ಮಣಿಯದೇ ಮುಂದಿನ ರಾಜಿರಹಿತ ಹೋರಾಟಕ್ಕೆ ಮುನ್ನಡೆಸಲು ನಿರ್ಧರಿಸಿದೆ.   ಜು. ೧೩ರಂದು  ರಾಜ್ಯದ ಎಲ್ಲಾ ಜಿಲ್ಲೆ, […]