ರಾಜ್ಯ

ಕೋವಿಡ್-19 ವ್ಯಕ್ತಿ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದರೆ ಅನುಸರಿಸ ಬೇಕಾದ ಮಾರ್ಗಗಳು

ಧಾರವಾಡ prajakiran.com : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್ ಸೋಂಕಿತ  ಲಕ್ಷಣ ರಹಿತರು ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿರುವವರಿಗೆ ಮಾತ್ರ ಮನೆಯಲ್ಲಿಪ್ರತ್ಯೇಕವಾಗಿರುವರು ( ಹೋಂ ಐಸೋಲೇಷನ್) ಅನುಸರಿಸಬೇಕಾದ ನಿಯಮಗಳ ಬಗ್ಗೆ ಸಲಹೆಗಳನ್ನು ನೀಡಿದೆ.

ಮನೆಯಲ್ಲಿ ಬೆಳಕು,ಗಾಳಿ ಬರುವ  ಕೊಠಡಿಯಲ್ಲಿ ಪ್ರತ್ಯೇಕವಾಗಿರುವ ಶೌಚಾಲಯ ಹೊಂದಿರಬೇಕು. ಮನೆಯಲ್ಲಿ ಡಿಜಿಟಲ್ ಥರ್ಮಾ ಮೀಟರ, ಪಲ್ಸ್ ಆ್ಯಕ್ಸಿಮೀಟರ್, ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು ಹೊಂದಿರಬೇಕು.

ಮನೆಯಲ್ಲಿರುವ ಒಬ್ಬ ಸದಸ್ಯ,  ಕೊವಿಡ್ ಪಾಸಿಟಿವ್ ಕಂಡು ಬಂದ ವ್ಯಕ್ತಿಯನ್ನು ಆರೈಕೆ ದಿನದ 24 ಗಂಟೆಗಳ ಸೇವೆ ಮಾಡಲು ನೇಮಿಸಿರಬೇಕು.

ಆ ವ್ಯಕ್ತಿ ಕಡ್ಡಾಯವಾಗಿ ಕ್ವಾರಂಟೈನ್ ವಾಚ್ ಆ್ಯಪ್ ಹೊಂದಿರಬೇಕು. ಪ್ರತ್ಯೇಕವಾಗಿರುವ ವ್ಯಕ್ತಿ, ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಬೇಕು.

ಮುಖ್ಯವಾಗಿ, ವೈದ್ಯಕೀಯ ಮಾಸ್ಕ್, ( ಎನ್ 95 ಮಾಸ್ಕ್ ) ಅನ್ನು ಯಾವಾಗಲೂ ಧರಿಸಿರಬೇಕು ಹಾಗೂ ಕಡ್ಡಾಯವಾಗಿ ಪ್ರತಿ 8 ಗಂಟೆಗೆ ಒಮ್ಮೆ ಬದಲಾಯಿಸಬೇಕು.

ಪ್ರತ್ಯೇಕವಾಗಿರುವ ವ್ಯಕ್ತಿ ಮನೆಯಲ್ಲಿ ಗುರುತಿಸಿ,ನಿಗದಿ ಪಡಿಸಿದ ಕೊಠಡಿಯಲ್ಲಿಯೇ ಇರಬೇಕು. ಹಾಗೂ ಇತರರೊಂದಿಗೆ 2 ಮೀಟರ್ ಅಂದರೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು‌. 

ಯಾವುದೇ ಕಾರಣಕ್ಕೂ ಕೊಠಡಿಯಿಂದ ಹೊರಗಡೆ ಹೋಗಬಾರದು. ವ್ಯಕ್ತಿಯು ಅಗತ್ಯ ವಿಶ್ರಾಂತಿ ಪಡೆಯುವುದು ಹಾಗೂ ಹೆಚ್ಚು ದ್ರವ ಆಹಾರವನ್ನು ಸೇವಿಸುವುದು. ಹೆಚ್ಚು ನೀರು ಕುಡಿಯಬೇಕು.

ಕೆಮ್ಮುವಾಗ, ಸೀನುವಾಗ,ಕರ ವಸ್ತ್ರವನ್ನು ಉಪಯೋಗಿಸುವುದು, ಟಿಶ್ಯು ಪೇಪರ್ ಉಪಯೋಗಿಸಿ,ಕೆಮ್ಮು ಬಂದಾಗ ಕೈಯನ್ನು ಅಡ್ಡ ಇಟ್ಟುಕೊಂಡು  ನಂತರ ಸ್ವಚ್ಛಗೊಳಿಸಿ,ಆಗಾಗ ಸಾಬೂನಿನ 40 ಸೆಕೆಂಡ್ ಕೈ ತೊಳೆದುಕೊಳ್ಳಬೇಕು. 

ವ್ಯಯಕ್ತಿಕವಾಗಿ ಬಳಸುವಂತಹ ಪಾತ್ರೆಗಳು,ತಟ್ಟೆಗಳು,ಬಟ್ಟೆ,ಟವೆಲ್ ಹಾಗೂ ಇತ್ಯಾದಿಗಳನ್ನು ಕುಟುಂಬದ ಇತರೆ ಸದ್ಯಸರುಗಳು ಹಂಚಿಕೊಳ್ಳದೆ ದೂರ ಇಡಬೇಕು.

ಮತ್ತು ಕೊಠಡಿಯಲ್ಲಿ ಪದೇ ಪದೇ ವಸ್ತುಗಳನ್ನು ಮುಟ್ಟಬಾರದು,ಆಗಾಗ ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಬೇಕು.

ಸ್ಥಾನ ಗೃಹ ಹಾಗೂ ಶೌಚಾಲಯಗಳನ್ನು ದಿನಕ್ಕೆ ಒಂದು ಬಾರಿಯಾದರೂ ಸ್ವಚ್ಛಗೊಳಿಸುವುದು ಹಾಗೂ ಸ್ಯಾನಿಟೈಸರ್ ನಿಂದ ಸ್ವಚ್ಛ ಮಾಡಬೇಕು‌.

ವೈದ್ಯರ ಸಲಹೆಗಳ ಹಾಗೂ ಔಷಧೋಪಚಾರವನ್ನು ಕಡ್ಡಾಯವಾಗಿ ಪಾಲಿಸಿ, ವೈದ್ಯರು ತಿಳಿಸಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದು,

ಪಲ್ಸ್ ಆ್ಯಕ್ಸಿ ಮೀಟರ್ ,ಡಿಜಿಟಲ್ ಥರ್ಮಾ ಮೀಟರ್ ಸಹಾಯದಿಂದ ಆಗಾಗ ನಿಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು.

ಆರೋಗ್ಯ ಸ್ಥಿತಿಯಲ್ಲಿ ಏನಾದರೂ ಗಂಭೀರ ಲಕ್ಷಣ ಕಂಡು ಬಂದರೆ ಜ್ವರ, ಗಂಟಲು ಕೆರೆತ,ನೆಗಡಿ ಸಮಸ್ಯೆಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು.

ಆರೋಗ್ಯಕರ ಪೌಷ್ಟಿಕ ಆಹಾರ ಸೇವನೆ ಸೇವನೆ ಮಾಡುವುದು, ಮತ್ತು ಧೂಮಪಾನ,ತಂಬಾಕು ಸೇವನೆ ಕಡ್ಡಾಯವಾಗಿ ನಿರ್ಬಂಧಿಸಬೇಕು,ಯಾವುದೇ ಕಾರಣಕ್ಕೂ ಈ ಚಟಗಳಿಂದ ದೂರವಿರಬೇಕು.

ಅಗತ್ಯವಿದಲ್ಲಿ ಆಪ್ತ ಸಮಾಲೋಚನೆ ಮಾಡಿಸಿಕೊಳ್ಳುವುದು,ಪ್ರತ್ಯೇಕವಾಗಿರುವ ಪ್ರತಿಯೊಬ್ಬ ವ್ಯಕ್ತಿ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಂಡಿರಬೇಕು.

ಲೊಕೇಷನ್ ಮತ್ತು ವೈಫೈ, ಇಂಟರ್ನೆಟ್ ಬ್ಲೂ ಟೂತ್ ಆನ್ ಮಾಡಿಕೊಂಡಿರಬೇಕು,ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *