ಜಿಲ್ಲೆ

ಧಾರವಾಡ ಜಿಲ್ಲೆಯ ಹೋಂ ಐಸೋಲೇಶನ್ ಅಯೋಮಯ…!

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಹಳ್ಳಿಯಲ್ಲಿ ಹೋಂ ಐಸೋಲೇಶನ್ ಚಿಕಿತ್ಸೆಗೆ ಮುಂದಾಗಿರುವವರ ಪರಿಸ್ಥಿತಿ  ಅಯೋಮಯವಾಗಿದೆ. ಅವರ ನೋವಿಗೆ ಸ್ಪಂದಿಸುವ ಕೆಲಸದಲ್ಲಿ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿಲ್ಲ. ಬದಲಿಗೆ ಸಂಪೂರ್ಣ ವಿಫಲವಾಗಿದೆ. ನಗರದ ಜನತೆ ಅದರಲ್ಲೂ ಅಕ್ಷರಸ್ಥರು,  ಉಳ್ಳವರು ಹೇಗು ನಿಭಾಯಿಸಿಕೊಳ್ಳುತ್ತಾರೆ. ಆದರೆ ರೈತರ ಸ್ಥಿತಿ ಚಿಂತಾಜನಕವಾಗಿದೆ. ಹಳ್ಳಿಗಳಲ್ಲಿಯ ಆಶಾಕಾರ್ಯಕರ್ತರು ಪ್ರತಿ ನಿತ್ಯ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಣೆ ಮಾಡುತ್ತಾರೆ. ಆದರೆ ಅವರ ಬಳಿ ಗುಳಿಗೆ ಕೊರತೆ ಇದೆ. ಸಮಯಕ್ಕೆ ಸರಿಯಾಗಿ ಮಾತ್ರೆಗಳು ಸರಬರಾಜು ಆಗುತ್ತಿಲ್ಲ ಎಂಬದೂರುಗಳಿವೆ. ಇದರಿಂದಾಗಿ […]

ರಾಜ್ಯ

ಕೋವಿಡ್-19 ವ್ಯಕ್ತಿ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದರೆ ಅನುಸರಿಸ ಬೇಕಾದ ಮಾರ್ಗಗಳು

ಧಾರವಾಡ prajakiran.com : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್ ಸೋಂಕಿತ  ಲಕ್ಷಣ ರಹಿತರು ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿರುವವರಿಗೆ ಮಾತ್ರ ಮನೆಯಲ್ಲಿಪ್ರತ್ಯೇಕವಾಗಿರುವರು ( ಹೋಂ ಐಸೋಲೇಷನ್) ಅನುಸರಿಸಬೇಕಾದ ನಿಯಮಗಳ ಬಗ್ಗೆ ಸಲಹೆಗಳನ್ನು ನೀಡಿದೆ. ಮನೆಯಲ್ಲಿ ಬೆಳಕು,ಗಾಳಿ ಬರುವ  ಕೊಠಡಿಯಲ್ಲಿ ಪ್ರತ್ಯೇಕವಾಗಿರುವ ಶೌಚಾಲಯ ಹೊಂದಿರಬೇಕು. ಮನೆಯಲ್ಲಿ ಡಿಜಿಟಲ್ ಥರ್ಮಾ ಮೀಟರ, ಪಲ್ಸ್ ಆ್ಯಕ್ಸಿಮೀಟರ್, ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು ಹೊಂದಿರಬೇಕು. ಮನೆಯಲ್ಲಿರುವ ಒಬ್ಬ ಸದಸ್ಯ,  ಕೊವಿಡ್ ಪಾಸಿಟಿವ್ ಕಂಡು ಬಂದ ವ್ಯಕ್ತಿಯನ್ನು ಆರೈಕೆ ದಿನದ 24 ಗಂಟೆಗಳ ಸೇವೆ […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಮೊದಲ ದಿನವೇ 12 ಜನರಿಗೆ ಮನೆಯಲ್ಲಿಯೇ ಚಿಕಿತ್ಸೆ

ಧಾರವಾಡ prajakiran.com : ಕೋವಿಡ್ ಸೋಂಕು ಇದ್ದರೂ ಕೂಡ ರೋಗ ಲಕ್ಷಣ ಇಲ್ಲದವರು ಮತ್ತು ಸೌಮ್ಯ ಲಕ್ಷಣವುಳ್ಳ ಜನರಿಗೆ ತಮ್ಮ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇದ್ದು ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ಪಡೆಯುವ  ಅವಕಾಶ ಕಲ್ಪಿಸಿದ ಮೊದಲ ದಿನವೇ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ 12 ಜನ ಸ್ವಯಂ ಪ್ರೇರಣೆಯಿಂದ ಈ ಮಾದರಿಯ ಚಿಕಿತ್ಸೆ ಆಯ್ದುಕೊಂಡಿದ್ದಾರೆ. ದೇಶದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ , ಕೋವಿಡ್ ಸೋಂಕು ಇದ್ದರೂ ರೋಗ ಲಕ್ಷಣ ರಹಿತರು  ಮನೆಗಳಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಸರ್ಕಾರ ನಿಯಮಗಳನ್ನು […]

ರಾಜ್ಯ

ಸೋಂಕು ಲಕ್ಷಣ ರಹಿತರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಅವಕಾಶ

ಧಾರವಾಡ prajakiran.com : ಕೋವಿಡ್ ಸೋಂಕು ದೃಢಪಟ್ಟಿದ್ದರು ಕೂಡಾ ಸೋಂಕಿನ ಲಕ್ಷಣ ಇಲ್ಲದವರು ಮತ್ತು ಸೌಮ್ಯ ಲಕ್ಷಣಗಳಿರುವವರಿಗೆ ಆರೋಗ್ಯ ತಂಡದಿಂದ ನಡೆಸಲಾಗುವ ಪ್ರಾಥಮಿಕ ಪರಿಶೀಲನೆ ಹಾಗೂ ಟ್ರಯೇಜ್ ಶಿಫಾರಸ್ಸು ಆಧರಿಸಿ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಅವಕಾಶ ನೀಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತಾಲಯ ತಿಳಿಸಿದೆ. ಈ ಕುರಿತು ಮಾರ್ಗಸೂಚಿ ಪ್ರಕಟಿಸಿರುವ ಆಯುಕ್ತಾಲಯವು ಪ್ರತ್ಯೇಕವಾಗಿರಲು ಮನೆಯು ಸೂಕ್ತವಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಪ್ರತ್ಯೇಕತೆಯ ಅವಧಿಯಲ್ಲಿ ವ್ಯಕ್ತಿಯನ್ನು ದೈನಂದಿನ ಅನುಸರಣೆ ಮಾಡಲು ಟೆಲಿ ಕನ್ಸಲ್ಟೇಶನ್ ಸಂಪರ್ಕ ಸ್ಥಾಪಿಸಲಾಗುವುದು. […]