ಜಿಲ್ಲೆ

ಧಾರವಾಡ ಜಿಲ್ಲೆಯ ಹೋಂ ಐಸೋಲೇಶನ್ ಅಯೋಮಯ…!

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಹಳ್ಳಿಯಲ್ಲಿ ಹೋಂ ಐಸೋಲೇಶನ್ ಚಿಕಿತ್ಸೆಗೆ ಮುಂದಾಗಿರುವವರ ಪರಿಸ್ಥಿತಿ  ಅಯೋಮಯವಾಗಿದೆ.

ಅವರ ನೋವಿಗೆ ಸ್ಪಂದಿಸುವ ಕೆಲಸದಲ್ಲಿ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿಲ್ಲ. ಬದಲಿಗೆ ಸಂಪೂರ್ಣ ವಿಫಲವಾಗಿದೆ.

ನಗರದ ಜನತೆ ಅದರಲ್ಲೂ ಅಕ್ಷರಸ್ಥರು,  ಉಳ್ಳವರು ಹೇಗು ನಿಭಾಯಿಸಿಕೊಳ್ಳುತ್ತಾರೆ. ಆದರೆ ರೈತರ ಸ್ಥಿತಿ ಚಿಂತಾಜನಕವಾಗಿದೆ.

ಹಳ್ಳಿಗಳಲ್ಲಿಯ ಆಶಾಕಾರ್ಯಕರ್ತರು ಪ್ರತಿ ನಿತ್ಯ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಣೆ ಮಾಡುತ್ತಾರೆ. ಆದರೆ ಅವರ ಬಳಿ ಗುಳಿಗೆ ಕೊರತೆ ಇದೆ.

ಸಮಯಕ್ಕೆ ಸರಿಯಾಗಿ ಮಾತ್ರೆಗಳು ಸರಬರಾಜು ಆಗುತ್ತಿಲ್ಲ ಎಂಬದೂರುಗಳಿವೆ. ಇದರಿಂದಾಗಿ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಪಾಸಿಟಿವ್ ಬಂದರೆ ಪರದಾಟ ನಡೆಸುವಂತಾಗಿದೆ.

ಅದರಲ್ಲೂ ಕೆಲವರು ಹೊರಗಡೆ ಅಡ್ಡಾಡುವವರ ಸಂಖ್ಯೆ ಹೆಚ್ಚಾಗಿದೆ. ಹಳ್ಳಿಯ ಪರಿಸ್ಥಿತಿಯಂತೂ ಕೇಳುವವರಿಲ್ಲದಂತಾಗಿದೆ. ಕುಡುಕರ ಸಹವಾಸ ಬೇಡವೆಂಬಂತಾಗಿದೆ.

ಇದೇ ವೇಳೆ ಪಾಸಿಟಿವ್ ಬಂದವರಿಗೆ ಆರೋಗ್ಯ ಇಲಾಖೆ ನೀಡಿರುವ ಗುಳಿಗೆ ಪುಡಿ ಪುಡಿಯಾಗಿದೆ. ಅದು ನುಂಗಲು ಬರುವಂತಿಲ್ಲ ವಿಟಾಮಿನ್  ಡಿ ಕ್ಯಾಲ್ಸಿಯಂ  ಮಾತ್ರೆ ಕೇವಲ ಒಂದು ತಿಂಗಳ ಮುಕ್ತಾಯ ಅವಧಿ ಇದೆ.

ಅದನ್ನೇ ನುಂಗುವಂತಾಗಿದೆ ಎಂದು ಕರೋನಾ ಸೋಂಕಿತರು ತಮ್ಮ ನೋವನ್ನು ಪ್ರಜಾಕಿರಣ.ಕಾಮ್ ಎದುರು ತೋಡಿಕೊಂಡಿದ್ದಾರೆ.

ಈಗಲಾದರೂ ಧಾರವಾಡ ಜಿಲ್ಲಾಡಳಿತ ಪಾಸಿಟಿವ್ ಆಗಿ ಸ್ಪಂದಿಸುತ್ತಾ ಎಂಬುದು ಕಾದುನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *