ರಾಜ್ಯ

ಧಾರವಾಡದಲ್ಲಿ ಸೋಂಕಿನ ಭೀತಿಯಿಂದ ಮೂರು ಜನ ಆತ್ಮಹತ್ಯೆ : ಡೆತ್ ನೋಟ್ ನಲ್ಲಿ ಕರೋನಾ ಕರಾಳ ಛಾಯೆ :  ….!





ಧಾರವಾಡ prajakiran.com : ಕರೋನಾ ಆತಂಕದಿಂದ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯೊಬ್ಬರು ದಿಕ್ಕು ತೋಚದೆ ಕಂಗಲಾಗಿ ತನ್ನ ಪತ್ನಿ ಹಾಗೂ ಮಗಳಿಗೆ ವಿಷವುಣಿಸಿ ಆನಂತರ ಆತ ಕೂಡ ಸಾವಿನ ಕದ ಬಡಿದಿದ್ದಾನೆ.

ವಿದ್ಯಾನಗರಿ ಧಾರವಾಡದ ಮೆಹಬೂಬ್ ನಗರದಲ್ಲಿ ವಾಸವಾಗಿರುವ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಸಾವಿನ ಹಿಂದೆ ಹೃದಯ ವಿದ್ರಾವಕ ಕಥೆಯಿದೆ.

ಮೌನೇಶ ಪತ್ತಾರ (36), ಪತ್ನಿ ಅರ್ಪಿತಾ (28) ಹಾಗೂ ಮಗಳು ಶುಕೃತಾ (2) ಮೂವರು ಸಾವನ್ನಪ್ಪುವ ಮುನ್ನ ಆತ ಬರೆದ ಡೆತ್ ನೋಟ್ ನಲ್ಲಿ ಕರೋನಾ ಕರಾಳ ಛಾಯೆಯನ್ನು ಬಿಚ್ಚಿಟ್ಟಿದ್ದಾನೆ.



ಧಾರವಾಡದ ಗರಗ ರಸ್ತೆಯಲ್ಲಿರುವ ಟಾಟಾ ಮಾರ್ಕೋಪೋಲೋ ಕಂಪನಿಯ ಉದ್ಯೋಗಿಯಾಗಿದ್ದ  ಮೌನೇಶ್ ವೀರಪ್ಪ ಪತ್ತಾರ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನಅಸೂಟಿ ಗ್ರಾಮದವ.

ಟಾಟಾ ಮಾರ್ಕೋ ಪೋಲೋ ಕಂಪನಿಯ ಉದ್ಯೋಗಿಯಾಗಿದ್ದರಿಂದ ಈತ ಧಾರವಾಡದಲ್ಲಿ ನೆಲೆಸಿದ್ದ.

ಕಂಪನಿಯ 34 ನೌಕರರಿಗೆ ಕರೋನಾ ಪಾಸಿಟಿವ್ ಬಂದಿದ್ದರಿಂದ ಆತಂಕಗೊಂಡಿದ್ದ ಮೌನೇಶ ಕರೋನಾ ಸೋಂಕಿತ ಗೆಳೆಯರ ಜೊತೆಗೆ ಓಡಾಡಿದ್ದ. ಅಲ್ಲದೆ, ತನಗೂ ಸೋಂಕಿನ ಲಕ್ಷಣಗಳು ಕಂಡು ಬಂದ್ದಿದ್ದವು. 

ಜೊತೆಗೆ ಪತ್ನಿ ಹಾಗೂ ಮಗಳಿಗೆ ಕರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿವೆ ಎಂದು ಗಾಬರಿಗೊಂಡಿದ್ದ.



ಎಲ್ಲಿ ತಮಗೂ ಸೋಂಕು ಆವರಿಸಬಹುದು ಎಂದು ಕಳವಳ ಹೊಂದಿ  ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೆದರಿಕೊಂಡು ತನ್ನ ಹೆಂಡತಿ ಹಾಗೂ ಎರಡು ವರ್ಷದ ಮಗಳಿಗೆ ವಿಷ ನೀಡಿ ಅವರು ಸಾವನ್ನಪ್ಪಿದ್ದ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾನೆ.

ಇಂತಹ ಮನಕಲುಕುವ ಘಟನೆ ಶನಿವಾರ ಬೆಳ್ಳಂ ಬೆಳಗ್ಗೆ ಕೇಳಿದ ಧಾರವಾಡದ ಮೆಹಬೂಬ್ ನಗರದ ನಿವಾಸಿಗಳು ಮಮ್ಮಲ ಮರಗುತ್ತಿದ್ದಾರೆ. ಮೂವರ ಸಾವಿನ ಸುದ್ದಿ ಕೇಳಿದಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಮೌನೇಶ ಪತ್ತಾರ ಕುಟುಂಬದ ದಯನೀಯ ಪರಿಸ್ಥಿತಿ ಕಂಡು ಧಾರವಾಡದ ಟಾಟಾ ಮಾರ್ಕೋಪೋಲೋ ಉದ್ಯೋಗಿಗಳು ಕೂಡ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.



ಈ ಕುರಿತು ಪ್ರಕರಣ ದಾಖಲಿಸಿಕೊಂಡ ಧಾರವಾಡದ ಉಪನಗರ ಪೊಲೀಸ್ ಠಾಣೆ ಪೊಲೀಸರು ಮೂವರ ಪ್ರಾರ್ಥಿವ ಶರೀರವನ್ನುಮರಣೋತ್ತರ ಪರೀಕ್ಷೆಗೆ ರವಾನಿಸಿ ಡೆತ್ ನೊಟ್ ವಶಪಡಿಸಿಕೊಂಡು ತನಿಖೆ ಕೈಗೊಂಡಿರುವುದು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿದ್ದಾರೆ.

ಡೆತ್ ನೋಟ್ ವಿವರ : ಧಾರವಾಡದ ಟಾಟಾ ಮಾರ್ಕೋಪೋಲೋ ಉದ್ಯೋಗಿ ಮೌನೇಶ ಪತ್ತಾರ ಬರದಿದ್ದಾನೆ ಎನ್ನಲಾದ ಡೆತ್ ನೋಟ್ ವಿವರ ಹೀಗಿದೆ.



ತನ್ನಿಂದ ಪತ್ನಿ ಹಾಗೂ ಮಗಳಿಗೂ ಕರೋನಾ ವ್ಯಾಪಿಸುವ ಸಾಧ್ಯತೆಗಳಿವೆ. ಟಾಟಾ ಮಾರ್ಕೋಪೋಲೋ ಕಂಪನಿಯ 30 ಜನ ಸ್ನೇಹಿತರಿಗೆ ಈಗಾಗಲೇ ಕರೋನಾ ಪಾಸಿಟಿವ್ ಬಂದಿದೆ.

ನಾನು ಕೂಡ ಅವರ ಜೊತೆಗೆ ಓಡಾಡಿದ್ದೇನೆ. ಹೀಗಾಗಿ ನಮ್ಮ ಸಾವಿಗೆ ನಾವೇ ಹೊಣೆ ಎಂದು ಮೌನೇಶ ಪತ್ರದಲ್ಲಿ ಬರೆದಿದ್ದಾನೆ ಎಂದು ಪೊಲೀಸರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *