ನವದೆಹಲಿ prajakiran.com : ದೇಶದಲ್ಲಿ ಕೊರೋನಾ ಮತ್ತಷ್ಟು ಉಲ್ಬಣವಾಗಿದೆ. ಹಲವು ರಾಜ್ಯವು ಕೊರೋನಾ ಕಾಟದಿಂದ ಮತ್ತೆ ಲಾಕ್ಡೌನ್ ಗೆ ಮೊರೆಹೋಗುತ್ತಿವೆ.
ಇಷ್ಟಾದರೂ ಕೊರೋನಾ ಅಟ್ಟಹಾಸ ನಿಲ್ಲುತ್ತಿಲ್ಲ. ಕಳೆದ 24 ಗಂಟೆಯಲ್ಲಿ 2,59,170 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದೆ.
ಈ ಕುರಿತು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,59,170 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,53,21,089 ರಷ್ಟು ಹೆಚ್ಚಾಗಿದೆ.
ಸೋಮವಾರ ದೇಶದಲ್ಲಿ 1,54,761 ಸೋಂಕಿತರು ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 1,31,08,582 ಕ್ಕೆ ಏರಿಕೆಯಾಗಿದೆ.
ಸೋಮವಾರ ದೇಶದಲ್ಲಿ 1,761 ಮಂದಿ ಸೋಂಕಿತರು ಮೃತಪಟ್ಟಿದ್ದು, ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,80,530 ಕ್ಕೆ ಏರಿಕೆಯಾಗಿದೆ.