ಲಕ್ನೋ (ಉತ್ತರ ಪ್ರದೇಶ) Prajakiran.com: ಮಹಾಮಾರಿ ಕೊರೋನಾ ದೇಶದಲ್ಲಿ ಒಂದಾದಮೇಲೊಂದು ಅನಾಹುತವನ್ನು ಸೃಷ್ಟಿಸುತ್ತಲೇ ಇದೆ. ಇಂದು ರಾಜಕೀಯ ನಾಯಕನನ್ನು ಬಲಿ ಪಡೆದಿದೆ.
ಕೋವಿಡ್ ಸೋಂಕಿಗೆ ತುತ್ತಾಗಿದ್ದ ಉತ್ತರ ಪ್ರದೇಶದ ಸಚಿವ ಹನುಮಾನ್ ಮಿಶ್ರಾ ಮಂಗಳವಾರ ನಿಧನ ಹೊಂದಿದರು..
ಕೋವಿಡ್ ದೃಢಪಟ್ಟಿದ್ದರಿಂದಾಗಿ ಲಕ್ನೋನ ಸಂಜಯ್ ಗಾಂಧಿ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ಚಿಕಿತ್ಸೆ ಫಲಿಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದಾರೆ.