ರಾಜ್ಯ

ರಾಜ್ಯದಲ್ಲಿ  ಶುಕ್ರವಾರ  ಸೋಂಕಿಗೆ ಬರೋಬ್ಬರಿ 84 ಸಾವು, 5483 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶುಕ್ರವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 84 ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 5483 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,24,115 ಕ್ಕೆ ಏರಿಕೆಯಾಗಿದೆ.

 ಇಂದು ರಾಜ್ಯದಲ್ಲಿ 3130 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  49788 ಜನ ಗುಣಮುಖರಾಗಿದ್ದು72005 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 609 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಶುಕ್ರವಾರವೂ 84 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 2314ಕ್ಕೆ ಏರಿಕೆಯಾದಂತಾಗಿದೆ.

ಶುಕ್ರವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ 2220 ಬರೋಬ್ಬರಿ ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.

ಇನ್ನೂಳಿದಂತೆ ಬಳ್ಳಾರಿ 340, ಬೆಳಗಾವಿ 217, ಉಡುಪಿ 213, ದಕ್ಷಿಣ ಕನ್ನಡ ಹಾಗೂಮೈಸೂರು 204, ಧಾರವಾಡ 180, ಶಿವಮೊಗ್ಗ 158, ಕಲಬುರಗಿ 144, ದಾವಣಗೆರೆ 122, ರಾಯಚೂರು 119, ವಿಜಯಪುರ 118, ಬೆಂಗಳೂರು ಗ್ರಾಮಾಂತರ 105, ಬೀದರ 104, ಹಾಸನ 100, ತುಮಕೂರು 95, ಉತ್ತರ ಕನ್ನಡ ಹಾಗೂ ಗದಗ 92, ರಾಮನಗರ 89, ಬಾಗಲಕೋಟೆ 88, ಚಿಕ್ಕಮಗಳೂರು 74, ಮಂಡ್ಯ 65, ಹಾವೇರಿ 57, ಯಾದಗಿರಿ 56, ಚಿಕ್ಕಬಳ್ಳಾಪುರ 48, ಚಾಮರಾಜನಗರತ 44, ಕೊಪ್ಪಳ 38, ಚಿತ್ರದುರ್ಗ 35, ಕೋಲಾರ 32, ಕೊಡಗು 30 ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಶುಕ್ರವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ  20  ಜನ ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ10, ಧಾರವಾಡ 7, ಕಲಬುರಗಿ 6, ಬೆಳಗಾವಿ , ಮೈಸೂರು ಹಾಗೂ ವಿಜಯಪುರ ತಲಾ 5, ತುಮಕೂರು, ಶಿವಮೊಗ್ಗ ತಲಾ 4, ಕೊಡಗು ಹಾಗೂ ಗದಗ 3, ದಾವಣಗೆರೆ, ರಾಯಚೂರು, ಬೀದರ ತಲಾ 2, ಹಾಸನ, ಉತ್ತರಕನ್ನಡ, ರಾಮನಗರ, ಬಾಗಲಕೋಟೆ, ಯಾದಗಿರಿ ಹಾಗೂ ಚಾಮರಾಜನಗರ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *