ರಾಜ್ಯ

ಧಾರವಾಡ : ಅಕಾಲಿಕ ಮಳೆಗೆ ಹಾನಿಯಾದ 1,968 ಮನೆಗಳಿಗೆ ಪರಿಹಾರ

12,09,22,800/- ರೂ.ಗಳ ಪರಿಹಾರ

ಬೆಳೆ ಹಾನಿಯಾದ 93,401 ರೈತ ಫಲಾನುಭವಿಗಳಿಗೆ ರೂ.74,40,36,601/- ಕೋಟಿ ಪರಿಹಾರ ಹಣ 

ಧಾರವಾಡ prajakiran.com ಡಿ.18: ಅತಿಯಾದ ಮಳೆಯಿಂದಾಗಿ ವಾಸದ ಮನೆಯೊಳಗೆ ಮಳೆನೀರು ಬಂದ ಸುಮಾರು 57 ಪ್ರಕರಣಗಳಿಗೆ ಮಾರ್ಗಸೂಚಿ ಪ್ರಕಾರ 2.17 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. 

2 ಜಾನುವಾರು ಹಾನಿ ಹಾಗೂ ಪೌಲ್ಟ್ರಿಫಾರಂ ಹಾನಿಯಾದ ಪ್ರಕರಣಕ್ಕೆ 65 ಸಾವಿರ ಪರಿಹಾರ ನೀಡಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜುಲೈ ತಿಂಗಳಿನಿಂದ ಡಿಸೆಂಬರ್ 15 ರ ವರೆಗೆ ಜಿಲ್ಲೆಯಲ್ಲಿ 7 ಪೂರ್ಣ ಪ್ರಮಾಣದ ಮನೆ ಹಾನಿಯಾಗಿದ್ದು, ರೂ.6,65,700/- ಪರಿಹಾರ ನೀಡಲಾಗಿದೆ. ಬಿ1, ಬಿ2 ಕೆಟಗೇರಿ ಸೇರಿ ಒಟ್ಟು 681 ಮನೆಗಳಿಗೆ ಹಾನಿಯಾಗಿದ್ದು, ರೂ.5,90,57,100/- ಪರಿಹಾರವನ್ನು ನೀಡಲಾಗಿದೆ.

ಸಿ ಕೆಟಗೇರಿಯ 1,280 ಮನೆಗಳಿಗೆ ಹಾನಿಯಾಗಿದ್ದು, ರೂ.6,12,00,000/- ಪರಿಹಾರವನ್ನು ನೀಡಲಾಗಿದೆ
ಒಟ್ಟಾರೆ ಮನೆ ಹಾನಿಯಾದ ಎ.ಬಿ ಮತ್ತು ಸಿ ಕೆಟಗೇರಿಯ ಒಟ್ಟು 1,968 ಮನೆಗಳಿಗೆ ಇಲ್ಲಿಯವರೆಗೆ 12,09,22,800/- ರೂ.ಗಳ ಪರಿಹಾರವನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸುಮಾರು 13 ಹಂತಗಳಲ್ಲಿ ಒಟ್ಟು 93,401 ರೈತ ಫಲಾನುಭವಿಗಳಿಗೆ ಒಟ್ಟು ರೂ.74,40,36,601/- ಕೋಟಿಗಳಷ್ಟು ಪರಿಹಾರ ಹಣ ವಿತರಿಸಲಾಗಿದೆ.

ಉಳಿದ ರೈತರಿಗೂ ಹಂತ ಹಂತವಾಗಿ ಸರಕಾರದಿಂದ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸುಮಾರು 56.41 ಕಿ.ಮೀ. ರಾಜ್ಯ ಹೆದ್ದಾರಿ, 43.42 ಕಿ.ಮೀ.ಜಿಲ್ಲಾ ಮುಖ್ಯರಸ್ತೆ ಮತ್ತು 5 ಸೇತುವೆಗಳು ಹಾನಿಯಾಗಿದ್ದು, ಅಂದಾಜು ಹಾನಿ ಮೊತ್ತ 4490 ಲಕ್ಷ ಆಗಿದೆ.

27 ಪ್ರಾಥಮಿಕ ಶಾಲೆಗಳು ಭಾಗಶ: ಹಾನಿಯಾಗಿದ್ದು, ಅವುಗಳ ದುರಸ್ತಿಗೆ ಸುಮಾರು 81 ಲಕ್ಷ ವೆಚ್ಚದ ಅಂದಾಜು ಮಾಡಲಾಗಿದೆ. 46 ಸರ್ಕಾರಿ ಕಟ್ಟಡಗಳು ಹಾನಿಯಾಗಿದ್ದು, ಹಾನಿ ಮೊತ್ತ 118 ಲಕ್ಷ ಅಂದಾಜಿಸಲಾಗಿದೆ.

ಮೂಲಸೌಕರ್ಯದ ಹಾನಿಯ ಒಟ್ಟು ಮೊತ್ತ 1.99 ಲಕ್ಷ ರೂ. ಅಂದಾಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ, 433 ಲಕ್ಷ ರೂ.ಗಳ ಹಾನಿಯನ್ನು ಅಂದಾಜಿಸಲಾಗಿದೆ. ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ, ಮಹಾನಗರ ಪಾಲಿಕೆಯು ಸೇರಿ ಅಳ್ನಾವರ, ಕಲಘಟಗಿ, ನವಲಗುಂದ ಮತ್ತು ಅಣ್ಣಿಗೇರಿ ಪಟ್ಟಣಗಳಲ್ಲಿ 112.93 ಕಿ.ಮೀ. ರಸ್ತೆ ಹಾಳಾಗಿದ್ದು, ರೂ. 3472.7 ಲಕ್ಷ ವೆಚ್ಚ ಅಂದಾಜಿಸಲಾಗಿದೆ.

ಕುಡಿಯುವ ನೀರು ಸರಬರಾಜು ಸಂಬಂಧಿಸಿದ ಸುಮಾರು 7 ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದು, 150 ಲಕ್ಷ ರೂ. ಗಳ ವೆಚ್ಚ ಅಂದಾಜಿಸಲಾಗಿದೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೆನಕೋಪ್ಪ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *