ಬೆಂಗಳೂರು prajakiran.com :
ಸುಮಾರು ೫೦ ಲಕ್ಷಕ್ಕೂ ಅಧಿಕ ಮೌಲ್ಯದ ೧೦೦೦ಕ್ಕೂ ಹೆಚ್ಚು ಎಲ್ ಎಸ್ ಡಿ ಸ್ಟ್ರಿಪ್ಸ್ ವಶಕ್ಕೆ ತೆಗೆದುಕೊಂಡು,ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರಿಂದ ೨ ಮೊಬೈಲ್ ೧೬೦೦೦ ಹಣ ವಶಕ್ಕೆ ಪಡೆಯಲಾಗಿದೆ. ನಿಖರ ಮಾಹಿತಿ ಆಧರಿಸಿ ಬೆಂಗಳೂರು ಸಿಸಿಬಿ ಪೊಲೀಸರು ನಡೆಸಿದ ಈ ದಾಳಿಯಲ್ಲಿ ಮತ್ತಿಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ ಗಳ ಬಂಧನವಾಗಿದೆ.
ಬಂಧಿತರನ್ನ ರಾಹುಲ್ ಹಾಗೂ ೨೧ ವರ್ಷದ ದರ್ಶನ್ ಅಂತ ಗುರುತಿಸಲಾಗಿದೆ.
ಬಂಧಿತರಿಂದ ೧೦೦೦ ಎಲ್ಎಸ್ ಡಿ ಸ್ಟ್ರಿಪ್ಸ್ ಹಾಗೂ ೨ ಮೊಬೈಲ್ ಸೇರಿದಂತೆ ೧೬೦೦೦ ರೂಪಾಯಿ ಹಣ ಜಪ್ತಿ ಮಾಡಿದ್ದಾರೆ.
ಬೆಂಗಳೂರು ನಗರದವರೇ ಆದ ೨೬ ವರ್ಷದ ರಾಹುಲ್, ಹಾಗೂ ೨೧ ವರ್ಷದ ದರ್ಶನ್ ಎಂಬ ಈ ಇಬ್ಬರು ಆರೋಪಿಗಳು ಡಾರ್ಕ್ ನೆಟ್ ಮುಖಾಂತರ ವಿದೇಶಗಳಿಂದ ನಿಷೇಧಿತ ಡ್ರಗ್ಸ್ ಪಡೆದು, ಮಾರಾಟ ಮಾಡುತ್ತಿದ್ದರು ಎನ್ನುವುದು ತನಿಖೆಯಿಂದ ದೃಢ ಪಟ್ಟಿದೆ.
ಸಿಸಿಬಿ ಪಿಐ ವಿರೂಪಾಕ್ಷ ಸ್ವಾಮಿ ಹಾಗೂ ತಂಡದವರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.