ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ
ವರದಿ : ಪ್ರಶಾಂತ ಹೂಗಾರ
ಬೆಳಗಾವಿ prajakiran.com : ಪಾಪಿ ತಂದೆ ಮಗಳ ಮೇಲೆ ಅತ್ಯಾಚಾರ ನಡೆಸಿದ ಘಟನೆಯೊಂದು ಶುಕ್ರವಾರ ಬೆಳಕಿಗೆ ಬಂದಿದೆ.
ತಾಲೂಕಿನ ಸಾಂಬ್ರಾ ದಲ್ಲಿ ಈ ಘಟನೆ ನಡೆದಿದ್ದು ತಾಯಿಯೆ ಪೋಲಿಸರಿಗೆ ದೂರನ್ನು ನೀಡಿದ್ದಾಳೆ
ಮಾದಿಹಾಳ ಪೋಲಿಸರ ಮಾಹಿತಿ ಪ್ರಕಾರ ಮಾರ್ಚ 24 ರ ಮಧ್ಯಾಹ್ನ ಮೂರು ಗಂಟೆಗೆ 50 ವರ್ಷದ ವ್ಯಕ್ತಿಯೊಬ್ಬ ತನ್ನ 16 ವರ್ಷ ಮಗಳನ್ನು ಪಕ್ಕಕ್ಕೆ ಕರೆದು ಅಶ್ಲೀಲವಾಗಿ ವರ್ತಿಸಿ ಅತ್ಯಾಚಾರ ನಡೆಸಿದ್ದಾನೆ.
ತಾಯಿ ಬಂದ ಮೇಲೆ ಬಾಲಕಿ ವಿಷಯ ತಿಳಿಸಿದ್ದು, ಈ ಘಟನೆ ಕುರಿತು ಮಾದಿಹಾಳ ಪೋಲಿಸ್ ಠಾಣೆಯಲ್ಲಿ ತಾಯಿ ದೂರನ್ನು ನೀಡಿದ್ದಾಳೆ
ಮಾದಿಹಾಳ ಠಾಣೆ ಸಿಪಿಐ ಡಿ,ಎಸ್,ಮನಸೂರ ನೇತೃತ್ವದಲ್ಲಿ ತನಿಕೆ ನಡೆಯುತ್ತಿದೆ.