ಅಂತಾರಾಷ್ಟ್ರೀಯ

ಸೋನಿಯಾ ಗಾಂಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಂದ ಹತ್ತು ಪ್ರಶ್ನೆ

ನವದೆಹಲಿ prajakiran.com : ಚೀನಾ ಮತ್ತು ಭಾರತದ ನಡುವೆ ಸಂಬಂಧ ಹದಗೆಡುತ್ತಿರುವ ಬೆನ್ನಹಿಂದೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವಾಕ್ಸಮರ ತಾರರಕ್ಕೆ ಏರಿದೆ.

ಅದರಲ್ಲೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ನಾಯಕರು ಮುಗಿಬಿದಿದ್ದಾರೆ.

ಅದರಲ್ಲೂ ಸೋನಿಯಾ ಗಾಂಧಿ ನೇತೃತ್ವದ ರಾಜೀವ್ ಗಾಂಧಿ ಫೌಂಡೇಶನ್ ಚೀನಾದಿಂದ ದೇಣಿಗೆ ಹಣ ಸ್ವಿಕರಿಸಿದ್ದು ಏಕೆ, ವೈಯಕ್ತಿಕ ಟ್ರಸ್ಟ್ ಗೆ ಹಣ ಪಡೆದು ರಾಷ್ಟ್ರದ ಹಿತಾಸಕ್ತಿ ಬಲಿಕೊಟ್ಟಿದ್ದು ಏಕೆ ಎಂದು ಸವಾಲು ಹಾಕಿದೆ.



ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಕಮ್ಯೂನಿಷ್ಟ್ ಪಕ್ಷದ ಚೀನಾ ನಡುವೆ ಇರುವ ಸಂಬಂಧವೇನು, ಅಂಕಿತ ಹಾಕಲ್ಪಟ ಹಾಗೂ ಹಾಕದ ನಿಯಮಗೇಳೆನು ಎಂದು ಪ್ರಶ್ನಿಸಿದೆ.

ಈಸ್ಟ್ ಏಷ್ಯಾ ಹಾಗೂ ಎಫ್ ಟಿ ಎ ನಲ್ಲಿ ಭಾರತದ ಆರ್ಥಿಕ ಸ್ಥಾನ ಮಾನವನ್ನು ಕಾಂಗ್ರೆಸ್ ದುರ್ಬಲಗೊಳಿಸಿದ್ದು ಏಕೆ, ಚೀನಾ ದಿಂದ ಹಣ ಸ್ವೀಕರಿಸಿದ ಪ್ರತಿಫಲವೇ ಎಂದು ತಿರುಗೇಟು ನೀಡಿದೆ.

ರಾಜೀವ್ ಗಾಂಧಿ ಫೌಂಡೇಶನ್ ಮೂಲಕ ಚೀನಾ ಏಜೆನ್ಸಿಗಳ ಪ್ರಭಾವ ಹಾಗೂ ಅತಿಕ್ರಮಣ ಎಷ್ಟು ಬಾರಿ ನಡೆದಿದೆ ಎಂಬುದಕ್ಕೆ ಸೋನಿಯಾ ಗಾಂಧಿ ಉತ್ತರಿಸಬೇಕು ಎಂದು ಆಗ್ರಹಿಸಿದೆ.



ಇದಲ್ಲದೆ, 2005ರಿಂದ 2008ರವರೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮೊತ್ತವನ್ನು ರಾಜೀವ್ ಗಾಂಧಿ ಫೌಂಡೇಶನ್ ಗೆ ತಿರುಗಿಸಿದ್ದು ಏಕೆ .

ಜನರು ಕಷ್ಟಪಟ್ಟು ದುಡಿದ ಹಣವನ್ನು ಕಾಂಗ್ರೆಸ್ ರ್ದುಬಳಕೆ ಮಾಡಿಕೊಂಡಿದ್ದು ನಾಚಿಕೆಯಾಗಿಲ್ಲವೇ ಎಂದು ಕುಟುಕಿದೆ.




ಹೀಗೆ ಒಟ್ಟು ಹತ್ತು ಪ್ರಶ್ನೆಗಳನ್ನು ಏಸೆದಿರುವ @JPNaddaಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೋನಿಯಾ ಗಾಂಧಿ ಹಾಗೂ

@INCIndia ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದೆ. ಕಾಂಗ್ರೆಸ್ ಪಕ್ಷಕ್ಕೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಲು ದೇಶ ಬಯಸುತ್ತಿದೆ.

ಅವರ ಬಳಿ ಉತ್ತರವಿದೆಯೇ ?ಎಂದು ವ್ಯಂಗ್ಯವಾಡಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಕಾದು ನೋಡಬೇಕಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *