ಅಪರಾಧ

ಬೈಕ್ ಖರೀದಿಸಲು ಹೋದ ಧಾರವಾಡ ಯುವಕ ಭೀಕರ ಅಪಘಾತಕ್ಕೆ ಬಲಿ

ಧಾರವಾಡ Prajakiran.com : ಬೈಕ್ ಖರೀದಿ ಮಾಡಲು ಹೋದ ಯುವಕನೊಬ್ಬ ಭೀಕರ ಅಪಘಾತಕ್ಕೆ ಬಲಿಯಾದ ಘಟನೆ ಭಾನುವಾರ ನಡೆದಿದೆ.   

                                                           

ಯಲ್ಲಾಪೂರದ ಬಳಿ ರಸ್ತೆ ಅಪಘಾತದಲ್ಲಿ ಧಾರವಾಡದ ಜಯನಗರದ ಕಿರಣ (35) ಎನ್ನುವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ.

ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುವಕ ಸಾವನ್ನಪ್ಪಿದಾನೆ ಎಂದು ತಿಳಿದುಬಂದಿದೆ.




ಬೆಂಗಳೂರಿನಲ್ಲಿ (IBM)ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕಿರಣ ಹವ್ಯಾಸಿ ಛಾಯಾಗ್ರಾಹಕ ನಾಗಿದ್ದ. 

ಅಪಘಾತ ಹಿನ್ನೆಲೆಯಲ್ಲಿ  ಲಾರಿ ವಶಕ್ಕೆ ಪಡೆದು ಚಾಲಕ ಸಾತಪ್ಪನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ತನಿಖೆ ಮುಂದುವರೆದಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *