ರಾಜ್ಯ

ಮನಗುಂಡಿಯ ಬಸವಾನಂದ ಸ್ವಾಮೀಜಿಯವರ ಸಲಹೆ ಮೇರೆಗೆ 11ನೇ ದಿನಕ್ಕೆ ಕೊರವರ ಆಮರಣ ಉಪವಾಸ ಹಿಂದಕ್ಕೆ, ಹೋರಾಟದಿಂದ ಹಿಂದೆ ಸರಿಯುವುದಿಲ್ಲ

ಶಾಂತಿಯುತ ಹೋರಾಟದ ಸ್ವರೂಪ ಬದಲಿಸಲು ಸಲಹೆ

ಕರ್ನಾಟಕ ವಿದ್ಯಾವರ್ಧಕ ಸಂಘದ ಶಂಕರ ಹಲಗತ್ತಿ ಬೆಂಬಲ

ಧಾರವಾಡ  ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳ ಕಾಲ ನೀರು ಸರಬರಾಜು ಮಾಡಿದ 358 ನೀರು ಸರಬರಾಜು ನೌಕರರ ಮರುನೇಮಕ ಹಾಗೂ 7 ತಿಂಗಳ ಸಂಬಳ ಬಿಡುಗಡೆಗೆ ಒತ್ತಾಯಿಸಿ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಹಾಗೂ ಉಪಾಧ್ಯಕ್ಷ ನಾಗರಾಜ ಕಿರಣಗಿ ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹವನ್ನು ಏಳೆನೀರು ಹಾಗೂ ರಾಗಿ ಗಂಜಿ ಕುಡಿಸುವ ಮೂಲಕ ಹೋರಾಟದ ಸ್ವರೂಪ ಬದಲಿಸಲು ಮನಗುಂಡಿಯ ಶ್ರೀ ಗುರು ಬಸವ ಮಹಾಮನೆಯ ಪರಮ ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿಯವರು ಸಲಹೆ ‌ನೀಡಿದರು.

ಅವರು ಗುರುವಾರ ಮಹಾನಗರ ಪಾಲಿಕೆ ಆವರಣಕ್ಕೆ ಆಗಮಿಸಿ ತಮ್ಮ ಬೆಂಬಲ ಸೂಚಿಸಿ, ಬಳಿಕ‌ ಮಾತನಾಡಿದರು.

ಜಡ್ಡುಗಟ್ಟಿದ ವ್ಯವಸ್ಥೆ ವಿರುದ್ಧ ಇಂತಹ ಗಟ್ಟಿ ಹೋರಾಟ ನಡೆಸುವವರು ಸಮಾಜಕ್ಕೆ ಬೇಕು. ಶಾಂತಿಯುತ ಹೋರಾಟ ಬಿಟ್ಟು ಉಳಿದ ಬೇರೆ ಹಂತದಲ್ಲಿ ಚಳುವಳಿ ತೀವ್ರಗೊಳಿಸಲು ಸಲಹೆ ನೀಡಿದರು.

ಜೊತೆಗೆ ಜಲಮಂಡಳಿ 800 ಕೋಟಿ ಪ್ರಸ್ತಾಪ ಸಲ್ಲಿಸಿದರೂ,
ನಾಲ್ಕು ನೂರು ಕೋಟಿ ಹೆಚ್ಚುವರಿಯಾಗಿ ಎಲ್ ಆಂಡ್ ಟಿಗೆ ಕಂಪನಿಗೆ ಕೊಟ್ಟಿದ್ದು ಹೊಣೆ ಯಾರು ಹೊರಬೇಕು ಎಂದು ಶ್ರೀ ಬಸವಾನಂದ ಸ್ವಾಮಿಯವರು ಪ್ರಶ್ನಿಸಿದರು.

ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ,
ಮನಗುಂಡಿಯ ಬಸವಾನಂದ ಸ್ವಾಮೀಜಿಯವರು ಏಳೆನೀರು ಕುಡಿಸಿ ಆಮರಣ ಉಪವಾಸ ಕೈ ಬಿಡಲು ಸಲಹೆ ನೀಡಿದ್ದರಿಂದ ಅವರ ಮಾತಿಗೆ ಮಣಿದು ಆಮರಣ ಉಪವಾಸ ಹಿಂದಕ್ಕೆ ಪಡೆದು ಹೋರಾಟದ ಸ್ವರೂಪ ಬದಲಿಸುತ್ತೇವೆ ಎಂದು ಹೇಳಿದರು.

ನಮ್ಮ ಹೋರಾಟ ಯಾರನ್ನು ಒಲಿಸಲೋ ಅಥವಾ ಯಾರನ್ನು ತೆಗಳುವುದಕ್ಕಲ್ಲ. ನಮ್ಮ ಬೇಡಿಕೆ ಕೇವಲ 358 ನೌಕರರ ಬಡ ಕುಟುಂಬದ ಸದಸ್ಯರ ಹಿತದೃಷ್ಟಿಯಿಂದ ಹೊರತು ಯಾವುದೇ ಬೇರೆ ಕಾರಣ ಇಲ್ಲ.

ಮೇಯರ್ ಆರೋಗ್ಯ ವಿಚಾರಿಸಲು ಬಂದಾಗ ಒಂದು ವಾರದಲ್ಲಿ ಏಳು ತಿಂಗಳ ಸಂಬಳ ಬಿಡುಗಡೆ ಗೊಳಿಸುವ ಭರವಸೆ ನೀಡಿದ್ರು.

ಆದರೆ ಮರುನೇಮಕಕ್ಕೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು .
ಅಲ್ಲದೆ, ನೀರಿನ ಖಾಸಗೀಕರಣ ಆಗಬಾರದು ಎಂದು ಅಂತರ್ ರಾಷ್ಟ್ರೀಯ ಜಲತಜ್ಞರು ಧಾರವಾಡದ ವಾಲ್ಮಿಗೆ ಆಗಮಿಸಿ ಸಲಹೆ ನೀಡಿದ್ರು. ಸರಕಾರಕ್ಕೆ ಅರಿವು ಬಂದಿಲ್ಲ ಎಂದು ಕಿಡಿ ಕಾರಿದರು.

ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಶಾಂತ ಹೋರಾಟ ನಡೆಸಿದ್ದೇವೆ. ಹತ್ತು ದಿನ ಕಳೆದರೂ ಅದಕ್ಕೆ ಸ್ಪಂದಿಸುವ ಕನಿಷ್ಟ ಪರಿಜ್ಞಾನ ಆಡಳಿತ ನಡೆಸುವವರಿಗೆ ಇಲ್ಲ.

ಬಡವರ ಮಕ್ಕಳನ್ನು ಬೀದಿಗೆ ತರಬೇಡಿ ಎಂದು ಅಂಗಲಾಚಿದರೂ ನೋವಿಗೆ ಸ್ಪಂದಸದ ದಪ್ಪ ಚರ್ಮದ ಸರಕಾರದ ವಿರುದ್ಧ ಆಮರಣ ಉಪವಾಸ ಕೈ ಬಿಟ್ಟು ಸರದಿ ಉಪವಾಸ ಹಾಗೂ ಪ್ರತಿ ದಿನ ಬೇರೆ ಬೇರೆ ರೀತಿಯ ಹೋರಾಟ ಮುಂದುವರೆಸುತ್ತೇವೆ.

ಜೊತೆಗೆ ಪ್ರತಿ ದಿನ ಒಂದೊಂದು ಹಗರಣ ಬಯಲಿಗೆ ತರುತ್ತೇವೆ. ನಿಮ್ಮ ಈ ಅಧಿಕಾರ ಶಾಶ್ವತ ಅಲ್ಲ. ಅಧಿಕಾರದ ಆಸೆಗಾಗಿ, ಸ್ವಾರ್ಥಕ್ಕಾಗಿ ಬಡವರ ಹಿತ ಬಲಿಕೊಡಬಾರದು. ಸರ್ವಾಧಿಕಾರಿ ಧೋರಣೆ ಹೋಗಬೇಕು ಎಂದರು.

ನಾವು ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ರಾಜಕೀಯ ಲಾಭಕ್ಕಾಗಿ ಅನೇಕರು ನಮ್ಮ ಹೋರಾಟಕ್ಕೆ ಬಂದು ಹೋದರೂ, ಆದರೆ ಯಾರೊಬ್ಬರೂ ನಿರಂತರವಾಗಿ ನಮ್ಮ ಜೊತೆಗೆ ನಿಲ್ಲಲಿಲ್ಲ. ಅಂದಿನ ಕಾಂಗ್ರೆಸ್,ಆನಂತರ ಬಂದ ಕಾಂಗ್ರೆಸ್ ಜೆಡಿಎಸ್ ಸಮ್ಮೀಶ್ರ ಸರ್ಕಾರ ಹಾಗೂ ಇಂದಿನ ಬಿಜೆಪಿ ಸರ್ಕಾರದ ಜನವಿರೋಧಿ ನಿಲುವನ್ನು ನಾವು ಖಂಡಿಸುತ್ತೇವೆ.

ಕೇವಲ ಒಂದು ಪೋಟೋ, ಸಾಮಾಜಿಕ ಜಾಲತಾಣದ ಪ್ರಚಾರಕ್ಕಾಗಿ ನಮ್ಮ ಬೆಂಬಲಿಸಿ ಒಂದು ದಿನ ಬಂದು ಹೋಗಬೇಡಿ. ನಮ್ಮ ವ್ಯವಸ್ಥೆ ಸರಿಪಡಿಸಲು ನಾವು ಸಂವಿಧಾನ ಬದ್ದ ಹೋರಾಟ ನಡೆಸಬೇಕು. ಹೋರಾಟ ನಿತ್ಯ ನಿರಂತರವಾಗಿ ನಡೆಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಬೆಂಬಲ ನೀಡುವ ಮೂಲಕ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಜನಜಾಗೃತಿ ಸಂಘ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ನಾಚಿಗೇಡಿ ನಾಲಾಯಕ್ ಸರಕಾರಕ್ಕೆ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸೊಣ ಎಂದು ಹೇಳಿದರು .

ಉದ್ಯಮಿ ಗಿರೀಶ ಶೆಟ್ಟಿ,
ಧಾರವಾಡ ತಾಲೂಕಿನ ಕೋಟೂರ ಗ್ರಾಪಂ‌ ಮಾಜಿ ಅಧ್ಯಕ್ಷ ಶಂಕ್ರಯ್ಯ ಮಠಪತಿ, ಹೆಬ್ಬಳ್ಳಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಈರಣ್ಣ ಹಡಪದ, ಹಾಲಿ ಸದಸ್ಯ ಬಸವರಾಜ ಹೆಬ್ಬಾಳ, ಅಶೋಕ ಲಕ್ಮಮ್ಮನವರ, ಹಟೇಲ್ ಸಾಬ ಗುಡಿಸಲಮನಿ, ಕಲ್ಲಪ್ಪ ಹಡಪದ, ರಮೇಶ ದೊಡ್ಡಮನಿ, ಸೇರಿದಂತೆ ನೂರಾರು ನೌಕರರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು  ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *