ರಾಜ್ಯ

ಜು. 26 ರಿಂದ ಕವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ತರಗತಿ ಆರಂಭ

ಕವಿವಿ: ಕೋವಿಡ್ ನಿಂದ ತಡೆ ಹಿಡಿದ ಎಲ್ಲಾ ಪರೀಕ್ಷೆಗಳಿಗೆ ದಿನಾಂಕ ನಿಗದಿ

ಧಾರವಾಡ prajakiran.com : ಕೋವಿಡ್ 2ನೇ ಆಲೆ ಹಾಗೂ ಸಾರಿಗೆ ಬಸ್ ಮುಷ್ಕರದಿಂದ ಮುಂದೂಡಲ್ಪಟ್ಟಿದ್ದ 2020 -21 ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ಪರೀಕ್ಷೆಗಳನ್ನು ಯುಜಿಸಿ ಮಾರ್ಗಸೂಚಿ ಹಾಗೂ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನಗಳನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ತಿಗೊಳಿಸಲು ವಿಶ್ವವಿದ್ಯಾಲಯ ನಿರ್ಧರಿಸಲಾಗಿದೆ ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 26 ರಿಂದ ವಿವಿ ಆವರಣ ಸೇರಿದಂತೆ ಎಲ್ಲ ಪದವಿ ಕಾಲೇಜುಗಳಲ್ಲಿ ಬೋಧಕ ತರಗತಿಗಳು (ಆಫ್ಲೈನ್) ಆರಂಭವಾಗಲಿವೆ.

ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದುಕೊಂಡು ತರಗತಿಗಳಿಗೆ ಕೋವಿಡ್ ನಿಯಮ ಪಾಲನೆಯೊಂದಿಗೆ ಹಾಜರಾಗಲು ಸೂಚಿಸಲಾಗಿದೆ ಎಂದರು.

2020-21 ನೇ ಸಾಲಿನ ಈಗಾಗಲೇ ಮುಂದೂಡಲ್ಪಟ್ಟ ಸ್ನಾತಕ, ಸ್ನಾತಕೋತ್ತರ ಮತ್ತು ಡಿಪ್ಲೋಮಾ ಪದವಿಗಳ ಬೆಸ (1,3,5) ಇತ್ಯಾದಿ) ಸೆಮಿಸ್ಟರ್ ಪರೀಕ್ಷೆಗಳನ್ನು ಆಗಸ್ಟ16ರಿಂದ ನಡೆಸಲಾಗುವುದು.

ಈ ಹಿಂದೆ ನಿರ್ಣಯಿಸಿದ್ದ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷಾ ವಿಧಾನವನ್ನು ಕೈಬಿಡಲಾಗಿದೆ.

ಬದಲಾಗಿ ಪ್ರಶ್ನೆಗಳು ಹಿಂದಿನ ಪದ್ಧತಿಯಂತೆ ವಿವರಣಾತ್ಮಕ ಉತ್ತರ ಬರೆಯುವ ವಿಧಾನದಲ್ಲಿ ಇರುತ್ತವೆ ಎಂದು ಸ್ಪಷ್ಟಪಡಿಸಿದರು.

ಪದವಿಯ ಅಂತಿಮ ವರ್ಷದ ಅಂತಿಮ ಸೆಮಿಸ್ಟರ್ (ಮೂರು ವರ್ಷದ ಪದವಿಗೆ 6ನೇ ಸೆಮಿಸ್ಟರ್‌, ನಾಲ್ಕು ವರ್ಷದ ಪದವಿಗೆ 8ನೇ ಸೆಮಿಸ್ಟರ್) ಪರೀಕ್ಷೆಗಳನ್ನು ನಡೆಸಿ, ನಂತರ ಪ್ರಸ್ತುತ ಸಾಲಿನ ಮಧ್ಯಂತರ ಸಮ ಸಮಸ್ಟರ್‌ (2, 4 ಇತ್ಯಾದಿ) ಫಲಿತಾಂಶವನ್ನು (ಯುಜಿಸಿ 2020ರ ನಿಯಮಗಳನ್ನು ಅನುಸರಿಸಿ) ಪ್ರಕಟಿಸಲು ನಿರ್ಧರಿಸಲಾಗಿದೆ.

ಸಮ ಸೆಮಿಸ್ಟರ್‌ಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 15 ರಿಂದ ಅಂತಿಮ ಸೆಮಿಸ್ಟರ್‌ಗಳಿಗೆ ವಿವರಣಾತ್ಮಕ ಉತ್ತರ ಬರೆಯುವ ವಿಧಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗಳು ಜರುಗಲಿವೆ ಎಂದರು.

ಮಧ್ಯಂತರ ಸಮ ಸೆಮಿಸ್ಟರ್‌ಗಳಿಗೆ ಸಂಬಂಧಿಸಿದಂತೆ ಆ ಸೆಮಿಸ್ಟರ್ ಗಳ ಅಂತರಿಕ ಅಂಕಗಳು ಹಾಗೂ ಹಿಂದಿನ ಸೆಮಿಸ್ಟರ್‌ ನ ಅಂಶಗಳ ಆಧಾರದ ಮೇಲೆ (ಯುಜಿಸಿ 20200 ನಿಯಮಗಳನ್ವಯ) ಫಲಿತಾಂಶ ಪ್ರಕಟಿಸಲಾಗುವುದು.

ಸ್ನಾತಕೋತ್ತರ ಹಂತದಲ್ಲಿ 2ನೇ ಸೆಮಿಸ್ಟರ್ ಅವಧಿಯ ಪರೀಕ್ಷೆ ರದ್ದುಪಡಿಸಲಾಗಿದ್ದು, ಕೇವಲ ಆಂತರಿಕ ಅಂಕ ಮತ್ತು ಹಿಂದಿನ ಸೆಮಿಸ್ಟರ್‌ಗಳ ಅಂಕಗಳ ಆಧಾರದ ಮೇಲೆ ಫಲಿತಾಂಶ ಘೋಷಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಅಂತಿಮ ಸೆಮಿಸ್ಟರ್‌ಗಳಿಗೆ ಬರುವ ಸಪ್ಟೆಂಬರ 15 ರಿಂದ ಪರೀಕ್ಷೆಗಳು ಪಾರಂಭವಾಗಲಿವೆ.

2021-22ರ ಶೈಕ್ಷಣಿಕ ಸಾಲಿನ ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳು ಬರುವ ಅಕ್ಟೋಬರ್ ಒಂದರಿಂದ ಪ್ರಾರಂಭಗೊಳ್ಳಲಿದೆ ಎಂದರು.

ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜುಗಳಲ್ಲಿ ಕೋವಿಡ್ ನಿಯಮಾನುಸಾರ ಮುಂಜಾಗ್ರತಾ ಕ್ರಮ ಜರುಗಿಸಲು ಸೂಚಿಸಿಲಾಗಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಲಸಿಕೆ ಪಡೆದು ತರಗತಿಗಳಿಗೆ ಸೂಚಿಸಲಾಗಿದೆ.

108 ಲಕ್ಷ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ‘ಲಸಕೀಕರಣದಲ್ಲಿ ಶೇಕಡಾ 98ರಷ್ಟು ಪ್ರಗತಿ ಸಾಧನೆಯಾಗಿದೆ ಎಂದು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *