ರಾಜ್ಯ

ನಕಲಿ‌ ಪೊಲೀಸ್ ಅಭ್ಯರ್ಥಿ ಸೇರಿ ಎಪಿಸಿ ಆಕಾಂಕ್ಷಿಯಾಗಿದ್ದ ಐವರ ಜಾಮೀನು ಅರ್ಜಿ ವಜಾ

ಧಾರವಾಡ prajakiran.com : ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಶಿವಪ್ಪ ಎಫ್ ಪಡೆಪ್ಪನವರ ಇತನ ಬದಲಾಗಿ ಬೇರೆ ವ್ಯಕ್ತಿ ದೈಹಿಕ ಸಾಮರ್ಥ್ಯ ಮತ್ತು ದೇಹದಾಢ್ರ್ಯತೆ ಪರೀಕ್ಷೆ [ET/PST] ಗೆ ಹಾಜರಾಗಿ ವಂಚನೆ ಎಸಗಿದ್ದ ಐವರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿ ಧಾರವಾಡದ ಪ್ರಿನ್ಸಿಪಾಲ್ ಸಿಜೆ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

ಪ್ರಿನ್ಸಿಪಾಲ್ ಸಿಜೆ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕುರಣಿಕಾಂತ ಅವರು ಮಹತ್ವದ ಆದೇಶ ಹೊರಡಿಸಿದರು.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಸವಿತಾ ಹಾನಗಲ್ ವಾದ ಮಂಡಿಸಿದರು‌.

ಪ್ರಕರಣದ ವಿವರ ;
ಧಾರವಾಡ ಜಿಲ್ಲಾ ಪೊಲೀಸ್ ಘಟಕದ ಸಶಸ್ತ್ರ ಮೀಸಲು ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿಯಲ್ಲಿ ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಶಿವಪ್ಪ ಎಫ್ ಪಡೆಪ್ಪನವರ 17-03-2021 ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೆ 03-04-2021 ರಂದು ವರದಿ ಮಾಡಿಕೊಂಡಿದ್ದ.

ನಂತರ ಧಾರವಾಡ ಪೊಲೀಸ್ ಅಧೀಕ್ಷಕರು ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಪಡೆದ ಬೆರಳು ಮುದ್ರೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರನ್ವಯ ಪೊಲೀಸ್ ಇನ್ಸಪೆಕ್ಟರ್, ಬೆರಳು ಮುದ್ರೆ ಘಟಕ, ಜಿ.ಪೊ.ಕ., ಧಾರವಾಡ ಅವರು ಪರಿಶೀಲನೆ ಮಾಡಿದಾಗ
ವೈಧ್ಯಕೀಯ ಪರೀಕ್ಷೆಯ ಕಾಲಕ್ಕೆ ಮತ್ತು ದೇಹದಾಡ್ರ್ಯತೆ ಪರೀಕ್ಷೆಯ ಕಾಲಕ್ಕೆ ಪಡೆದ ಎಡಗೈ ಹೆಬ್ಬರಳಿನ ಮುದ್ರೆಯೊಂದಿಗೆ ಹೊಂದಾಣಿಕೆಯಾಗಿರುವುದಿಲ್ಲ.

ಆದ್ದರಿಂದ ಅಭ್ಯರ್ಥಿಯಾದ ಶಿವಪ್ಪ ಎಫ್ ಪಡೆಪ್ಪನವರ ನೇಮಕಾತಿ ಹೊಂದುವ ಉದ್ದೇಶದಿಂದ ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸುವ ಉದ್ದೇಶದಿಂದ ಮಂಜುನಾಥ ಕರಿಗಾರನನ್ನು ಸಂಪರ್ಕಿಸಿದ್ದ.

ಆತ ಬಸವರಾಜ ಮೇಲ್‍ಮಟ್ಟಿ ಸಾ: ನಲ್ಲನಟ್ಟಿ ತಾ: ಗೋಕಾಕ ನೇತೃತ್ವದ ತಂಡದವರು ಈ ಕೆಲಸದಲ್ಲಿ ಸಹಾಯ ಮಾಡುತ್ತಾರೆ ಅಂತಾ ಹೇಳಿ ಅವರನ್ನು ಪರಿಚಯಿಸಿದ್ದ.

ನಂತರ ಶಿವಪ್ಪನು, ಬಸವರಾಜ ಮೇಲ್‍ಮಟ್ಟಿ, ಅವರಿಗೆ ಬದಲಿ ಒಬ್ಬನನ್ನು ನಿಲ್ಲಿಸಿ ಪರೀಕ್ಷೆ ಪಾಸ್ ಮಾಡಿಕೊಡಲು ಕೇಳಿಕೊಳ್ಳುತ್ತಾನೆ ಅದಕ್ಕೆ ಮೇಲ್‍ಮಟ್ಟಿಯು 2,30,000/- ರೂಪಾಯಿಗೆ ಬೇಡಿಕೆ ಇಟ್ಟು ಪಡೆದುಕೊಂಡಿದ್ದ.

ಈ ಗುಂಪಿನಲ್ಲಿರುವ ಬಸವರಾಜ ದೇವರಮನಿ 1,95,000/- ರೂಗಳು, ಆನಂದ ಕೋಳೂರ 30,000/- ರೂಗಳನ್ನು ಹಂಚಿಕೊಂಡಿರುತ್ತಾರೆ. ಆ ಗುಂಪು ಆನಂದ ಕೋಳೂರು ರವರನ್ನು ಶಿವಪ್ಪ ಎಫ್ ಪಡೆಪ್ಪನವರ ಬದಲಿಗೆ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಮಾಡಿ ಅರ್ಹತೆ ಪಡೆದಿದ್ದು ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾಗಿದ್ದ.

ಈ ಪ್ರಕರಣದ ಆರೋಪಿ ಆನಂದ ಕೋಳೂರನು ಹಾಸನದ ನಗರದ ಬಡವಾಣೆ ಠಾಣೆ ಇದೇ ತರಹದ ಪ್ರಕರಣವೊಂದರಲ್ಲಿ ಭಾಗಿಯಾಗಿರುತ್ತಾನೆ ಎನ್ನಲಾಗಿದೆ.

ಸರ್ಕಾರಕ್ಕೆ ವಂಚಿಸಿ ಬೇರೆ ವ್ಯಕ್ತಿಯನ್ನು ತನ್ನ ಬದಲಾಗಿ ಹಾಜರಾಗಿ ಸಹಿ ಮಾಡುವಂತೆ ದೈಹಿಕ ಪರೀಕ್ಷೆಗೆ ಹಾಜರಾಗಲು ದುಷ್ಪ್ರೇರಣೆ ನೀಡಿದ್ದು, ಅದರಂತೆ ಬೇರೆ ವ್ಯಕ್ತಿ ಶಿವಪ್ಪ ಎಫ್ ಪಡೆಪ್ಪನವರ ಇತನ ಹೆಸರಿನಲ್ಲಿ ದೈಹಿಕ ಪರೀಕ್ಷೆಗೆ ಹಾಜರಾಗಿ ತಾನೇ ನೈಜ ಅಭ್ಯರ್ಥಿ ಎಂದು ನಂಬಿಸಿ ಸುಳ್ಳು ದಾಖಲಾತಿಗಳನ್ನು ನೀಡಿ ವಂಚನೆ ಎಸಗಿ ಶಿವಪ್ಪ ಎಫ್ ಪಡೆಪ್ಪನವರ ಇತನು ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಕಾರಣರಾಗಿ ಮೋಸ ವಂಚನೆ ಅಪರಾಧ ಎಸಗಿರುವುದು ದಾಖಲಾತಿಗಳಿಂದ ಕಂಡುಬಂದಿತ್ತು.

ಈ ಹಿನ್ನೆಲೆಯಲ್ಲಿ ಧಾರವಾಡದ ಉಪ-ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *