ರಾಜ್ಯ

ಭಕ್ತರ ತುಲಾಭಾರ ನಿರಾಕರಿಸಿದ ಅಮ್ಮಿನಬಾವಿ ಶ್ರೀಗಳು

ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ೮೭ನೇ ವರ್ಧಂತಿ ಮಹೋತ್ಸವ

ಧಾರವಾಡ prajakiran.com : ಕೋವಿಡ್-೧೯ ವೈರಸ್ ಹಾವಳಿ, ರಾಜ್ಯದೆಲ್ಲೆಡೆ ಅತಿಯಾದ ಮಳೆಯಿಂದ ತೆಲೆದೋರಿರುವ ಪ್ರವಾಹದ ಸಾವು-ನೋವುಗಳನ್ನು ಗಮನದಲ್ಲಿಟ್ಟುಕೊಂಡು ಧಾರವಾಡ   ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು ತಮ್ಮ ೮೭ನೇ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಭಕ್ತರ ತುಲಾಭಾರ ಸೇವೆ  ನಿರಾಕರಿಸಿದ್ದಾರೆ.

 ಸಾಮಾಜಿಕಅಂತರವನ್ನು ಪಾಲನೆ ಮಾಡುವ ಜೊತೆಗೆ ಶ್ರೀಮಠದ ಪ್ರಾಂಗಣದಲ್ಲಿ ಗುರುವಾರ ಆ.೧೩ರಂದು ಭಕ್ತರು ಪ್ರೀತಿಯಿಂದ ಹಮ್ಮಿಕೊಂಡಿದ್ದ ಸಕ್ಕರೆ, ಅಕ್ಕಿ, ಬೆಲ್ಲ, ರವೆ ಹಾಗೂ ತೆಂಗಿನಕಾಯಿಗಳ ತುಲಾಭಾರ ಸೇವೆಗಳನ್ನು ನಯವಾಗಿ ನಿರಾಕರಿಸಿ ಭಕ್ತರನ್ನು ಆಶೀರ್ವದಿಸಿದರು.

ಗುರುಪಾದಪೂಜೆ : ತಮ್ಮಗುರುವರ್ಯರು ಶತಾಯುಷಿಗಳಾಗಿ ಸಮಸ್ತ ಭಕ್ತ ಸಂಕುಲದ ಬಾಳು ಬಲಿಯಲು ನಿರಂತರತಮ್ಮತಪೋಬಲದ ಆಶೀರ್ವಾದವನ್ನು ನೀಡುವಂತಾಗಲೆಂಬ ಸಂಕಲ್ಪದೊಂದಿಗೆಅಮ್ಮಿನಬಾವಿಪಂಚಗೃಹ ಹಿರೇಮಠದಕಿರಿಯ ಶ್ರೀಗಳಾದ ಅಭಿನವಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ವೀರಶೈವಧರ್ಮ ಸಿದ್ಧಾಂತದಂತೆ ಶಾಸ್ತ್ರೋಕ್ತವಾಗಿಗುರುಪಾದಪೂಜೆ ನೆರವೇರಿಸಿ ಭಕ್ತಿಯ ನಮನಗಳನ್ನು ಸಮರ್ಪಿಸಿದರು.

 ವಕೀಲ ಅಶೋಕ ಗುಡಿ, ಖಾದಿ ಕಾರ್ಯಕರ್ತ ಬಿ.ಸಿ. ಕೊಳ್ಳಿ, ಕಿತ್ತೂರರಾಣಿಚೆನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಂಕಿನ ಇನಾಂಹೊಂಗಲ ಶಾಖೆಯಉಪಾಧ್ಯಕ್ಷರಾಮಣ್ಣಜಕ್ಕಣ್ಣವರ, ಪ್ರೌಢ ಶಾಲಾ ನಿವೃತ್ತಅಧ್ಯಾಪಕ ವ್ಹಿ.ಬಿ. ಕೆಂಚನಗೌಡರ, ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಹ ಸಂಪಾದಕಡಾ. ಗುರುಮೂರ್ತಿ ಯರಗಂಬಳಿಮಠ, ಶಿವಾನಂದಸ್ವಾಮಿ ಹಿರೇಮಠ, ಚಂದ್ರಶೇಖರಕೋಲ್ಹಾರದೇಸಾಯಿಇದ್ದರು.  

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *