ರಾಜ್ಯ

ಸಿ. ಡಿ. ಯುವತಿ, ಸಹೋದರ ಮಾತನಾಡಿರುವ ಆಡಿಯೊ ವೈರಲ್

ಬೆಂಗಳೂರು prajakiran.com : ಸಿ.ಡಿ.ಪ್ರಕರಣದ ಯುವತಿ, ಅವರ ಸಹೋದರ ಹಾಗೂ ಸ್ನೇಹಿತರು ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆ ಆಡಿಯೊದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಸರು ಸಹ ಪ್ರಸ್ತಾಪವಾಗಿದೆ.

ಹಾಗಿದ್ದರೆ ಆಡಿಯೊದಲ್ಲಿ ಏನಿದೆ?

ಯುವತಿ: ಹಲೋ
ಯುವತಿ ಸಹೋದರ: ಎಲ್ಲಿದ್ದೀಯಾ ?
ಯುವತಿ: ನಾನು ಆಕಾಶ್ (ಯುವತಿ ಸ್ನೇಹಿತ) ಇಬ್ಬರು ಒಟ್ಟಿಗೆ ಬಂದಿದ್ದೇವೆ. ಚಿನ್ನಿ (ಯುವತಿ ಸಹೋದರ) ನೀನು ನಂಬುವ ಕೃಷ್ಣನ ಮೇಲೆ ಆಣೆ ಮಾಡಿ ಹೇಳುತ್ತೇನೆ.

ವಿಡಿಯೋದಲ್ಲಿರುವುದು ನಾನಲ್ಲ? ನೀನಾದರೂ ನನ್ನ ನಂಬು. ಬೇರೆ ಯಾರು ನಂಬುತ್ತಿಲ್ಲ.

ಸಹೋದರ: ನಿನ್ನನ್ನು ನಂಬಿದ್ದೇನೆ.
ಯುವತಿ: ಆಕಾಶ್ ನಂಬಿದ್ದಾನೆ. ಬೇರೆ ಯಾರು ಕೂಡ ನನ್ನನ್ನು ನಂಬುತ್ತಿಲ್ಲ. ನಾನು
ಆ ರೀತಿ ಇಲ್ಲ ಚಿನ್ನಿ. ಸುದ್ದಿ ವಾಹಿನಿಗಳಿಗೆ ಪ್ರಸಾರ ಮಾಡಿದ ವಿಡಿಯೋ ಗ್ರಾಫಿಕ್ಸ್.
ನಾನು ಏಕೆ ಅಂತಹ ಕೆಲಸಕ್ಕೆ ಹೋಗಲಿ. ಸ್ವಲ್ಪ ನೀನು ಯೋಚನೆ ಮಾಡು.

ಸಹೋದರ: ನಿನ್ನದೇ ಎಲ್ಲ ಧ್ವನಿ ಇದೆಯಲ್ಲ? ಆಡಿಯೋದಲ್ಲಿ ಬಿಯರ್ ಕುಡಿಯುವ ಬಗ್ಗೆ ಎಲ್ಲ
ಸಂಭಾಷಣೆ ಇದೆ.

ಯುವತಿ: ಬೇರೆ ಹುಡುಗಿ ಮಾತನಾಡಿರುವುದು. ನಾನು ಮಾತನಾಡಿರುವ ಆಡಿಯೋ ಅಲ್ಲ.
ವಿಡಿಯೋ ಎಲ್ಲವನ್ನು ಕಳುಹಿಸುತ್ತೇನೆ.

ಸಹೋದರ: ವಿಡಿಯೋ ಕಳುಹಿಸು.
ಯುವತಿ: ನನ್ನ ಬಳಿ ವಿಡಿಯೋ ಇಲ್ಲ. ಡಿ.ಕೆ.ಶಿವಕುಮಾರ್ ಅವರ ಕಡೆಯವರು ನಮ್ಮ
ಭೇಟಿಗೆ ಬರುತ್ತಿದ್ದಾರೆ. ಅವರ ಬಳಿ ವಿಡಿಯೋ ಇದೆ. ನಿನಗೆ ಆ ಮೇಲೆ ವಿಡಿಯೋ ಕಳುಹಿಸಿ
ಕೊಡುತ್ತೇನೆ.

ಸಹೋದರ: *** ನಿನಗೆ ಇದೆಲ್ಲ ಏಕೆ ಬೇಕಿತ್ತು?. ಡಿ.ಕೆ.ಶಿವಕುಮಾರ್ ಅವರೆಲ್ಲ ಏಕೆ?
ಮೂರು ಹೊತ್ತಿನ ಊಟ ಮಾಡೋಣ ಸಾಕು.

ಆಕಾಶ್ (ಯುವತಿ ಪ್ರಿಯತಮ): ಬಾಯ್ ಏನಾಗಲ್ಲ, ಆರಾಮ್ ಆಗಿ ಇರಿ. ನಾವು ಅಲ್ಲೇ
ಬಂದಿದ್ದೇವೆ. ಅರ್ಧ ತಾಸು ಅವರು ಬರುತ್ತಾರೆ. ಪುನಃ ನಿನ್ನ ಬಳಿ ಮಾತನಾಡುತ್ತೇವೆ.

ಸಹೋದರ: ಬ್ರೋ ಪ್ಲಿಸ್ ಮನೆಯಲ್ಲಿ ಎಲ್ಲರೂ ಆತಂಕದಿಂದ ಇದ್ದಾರೆ.
ಸಹೋದರ: ನಿನಗೆ ಯಾರಿಂದ ಆದರೂ ಬೆದರಿಕೆ ಅಥವಾ ಒತ್ತಡದ ಕಾಲ್ ಬರುತ್ತಿದ್ದೆಯೇ?

ಯುವತಿ: ಆ ರೀತಿ ಯಾವುದೇ ಕರೆ ಬರುತ್ತಿಲ್ಲ.
ಸಹೋದರ: ನಾಳೆ ನೀನು ಸ್ಟೇಟ್‌ಮೆಂಟ್ ಕೊಡಬೇಕು ಅನ್ನುತ್ತಿದ್ದಾರೆ.
ಯುವತಿ: ನಾನು ಅಲ್ಲಿ ತನಕ ಹೋಗುವುದಿಲ್ಲ. ನೀನು ಟೆನ್ಷನ್ ಆಗಬೇಡ.

ಸಹೋದರ: ನಾಳೆ ಆತ ರಾಜೀನಾಮೆ ಕೊಡಬೇಕಿದೆ.
ಆಕಾಶ್: ಸ್ಟೇಟ್‌ಮೆಂಟ್ ಏನು?
ಸಹೋದರ: ನಾಳೆ ಕರೆಯುತ್ತಾರೆ. ಮತ್ತೇ ಮಾಧ್ಯಮಗಳಿಗೆ ಮಾತನಾಡಿರುವ ವಿಡಿಯೋ ಇದೆಯಲ್ಲ?

ಯುವತಿ: ವಾಯ್ಸ್‌ನ್ನು ನಕಲು ಮಾಡಿದ್ದಾರೆ. ನಾನು ಎಲ್ಲಿಯೂ ಬರಲ್ಲ. ‘ದಟ್ ಇಸ್
ನಾಟ್ ಮಿ’. ನನಗೆ ಯಾರು ಕೂಡ ಗೊತ್ತಿಲ್ಲ.

ಏಕೆ ನೀವು ಇಷ್ಟೊಂದು
ಹೆದರಿಕೊಳ್ಳುತ್ತೀರಾ. ಮನೆಯವರಾಗಿ ನೀವು ಬೆಂಬಲ ಕೊಡದಿದ್ದಾರೆ ಹೇಗೆ?

ಸಹೋದರ: ನಾವು ನಿಮ್ಮ ಜತೆಗೆ ಇದ್ದೀವಿ. ನಿನ್ನ ಮೇಲೆ ಯಾರಾದರೂ ಒತ್ತಡ ಹಾಕಿದರೆ ಏನು ಮಾಡುವುದು.
ಯುವತಿ: ನನ್ನ ಮೇಲೆ ಯಾರು ಕೂಡ ಒತ್ತಡ ಹಾಕುತ್ತಿಲ್ಲ. ಅವರೇ ಎಲ್ಲರೂ ಬರುತ್ತಿದ್ದಾರೆ.

ಸಹೋದರ: ವಿಷಯ ಬಹಳ ಗಂಭೀರವಾಗಿದೆ. ಆತ ಶಾಸಕ ನಾಳೆ ರಾಜೀನಾಮೆ ನೀಡಬೇಕಂತೆ.

ಯುವತಿ: ನಾನು ಆಕಾಶ್ ಇಬ್ಬರು ಹೋಗುತ್ತಿದ್ದೇವೆ. ನನ್ನ ಜತೆ ಆಕಾಶ್ ಇರುತ್ತಾನೆ.
ಅಷ್ಟಾದರೂ ನಂಬು.

ಸಹೋದರ: ಆಯ್ತು. ಮಮ್ಮಿ ಜತೆ ಒಂದೆರೆಡು ಮಾತನಾಡು.
ಯುವತಿ ತಾಯಿ: ಹಲೋ
ಯುವತಿ: ಅವ್ವ ನೀನಾದರೂ ನನ್ನ ನಂಬು.
ತಾಯಿ: ನಂಬಿದ್ದೇನೆ.
ಯುವತಿ: ನೀವೇ ಮನೆಯವರು ನಂಬಲಿಲ್ಲ ಅಂದರೆ ಹೇಗೆ? ಆಕಾಶ್ ಹಾಗೂ ಸ್ನೇಹಿತರೆಲ್ಲ
ಬೆಂಬಲ ನೀಡುತ್ತಿದ್ದಾರೆ. ನಿಮ್ಮ ಕಾಲಿಗೆ ಬೀಳುತ್ತೇನೆ. ನೀವು ಬೆಂಬಲ ನೀಡದಿರುವುದು
ಅಂಜಿಕೆ ಉಂಟು ಮಾಡಿದೆ.

ತಾಯಿ: ನಿನ್ನನ್ನು ನಂಬಿದ್ದಕ್ಕೆ ಇಲ್ಲಿ ತನಕ ಬೆಂಗಳೂರಿನಲ್ಲಿ ಬಿಟ್ಟಿದ್ದೇನೆ.
ಯುವತಿ: ಅದು ನಾನಲ್ಲ, ಅದೆಲ್ಲ ಗ್ರಾಫಿಕ್ಸ್ ಮಮ್ಮಿ.
ತಾಯಿ: ನಿನ್ನ ಫೋಟೋ ಎಲ್ಲ ತೋರಿಸಿದ್ದರಲ್ಲ.
ಯುವತಿ: ಆ ಫೋಟೋ ಎಲ್ಲ ನಾಳೆ ಡಿಲೀಟ್ ಆಗಲಿದೆ. ಕಣ್ಣೀರು…!

ತಾಯಿ: ನೀನು ಸ್ವಲ್ಪ ದಿನ ಊರಿಗೆ ಬಂದು ಬಿಡು.
ಯುವತಿ: ಬರುತ್ತೇನೆ. ಸ್ವಲ್ಪ ಎಲ್ಲ ಕ್ಲಿಯರ್ ಮಾಡಿಕೊಂಡು ಬರುತ್ತೇನೆ.
ತಾಯಿ: ನಾನು ಅಂದೇ ನಿನಗೆ ಹೇಳಿದ್ದೀನಿ ಬೇಡ ಅಂತ. ರಾಜಕೀಯದವರ ಜತೆ ಹೋಗಬೇಡ ಅಂತ.
ರಾಜಕೀಯದವರು ಬಹಳ ಇದ್ದಾರೆ. ಆ ಬಗ್ಗೆ ಎಲ್ಲರ ಬಾಯಿಯಲ್ಲೂ ಕೇಳುತ್ತೇವೆ. ನಮಗೆ
ರಾಜಕೀಯ ಬೇಡ.

ಯುವತಿ: ನೀನು ತಲೆ ಕೆಡಿಸಿಕೊಳ್ಳ ಬೇಡ, ಪ್ಲಿಸ್. ನಿನ್ನ ಕಾಲಿಗೆ ಬೀಳುತ್ತೇನೆ.
ತಾಯಿ: ನಿಮ್ಮ ಡ್ಯಾಡಿಗೆ ಹೇಳಿದರೆ ಸತ್ತು ಹೋಗುತ್ತಾರೆ.
ಯುವತಿ: ಡ್ಯಾಡಿಗೆ ಏನು ಹೇಳಿದ್ಯಾ?
ತಾಯಿ: ನಿಮ್ಮ ಡ್ಯಾಡಿಗೆ ಇನ್ನು ಏನು ಗೊತ್ತಿಲ್ಲ. ನಾವು ಏನು ಹೇಳಿಲ್ಲ. ನೀನು
ದಯವಿಟ್ಟು ಊರಿಗೆ ಬಂದು ಬಿಡು.

ಯುವತಿ: ಆಯ್ತು.
ಸಹೋದರ: ಹಲೋ
ಯುವತಿ: ಚಿನ್ನಿ, ಅಪ್ಪ-ಅಮ್ಮನನ್ನು ಹ್ಯಾಂಡಲ್ ಮಾಡು.
ಸಹೋದರ: ನಾನು ನೋಡಿಕೊಳ್ಳುತ್ತೇನೆ. *** ಮಗ ಎಲ್ಲ ತೋರಿಸಿದ್ದಾನೆ. ನಿನ್ನ ಮುಖ,
ಧ್ವನಿ ಎಲ್ಲ ಕ್ಲಿಯರ್ ಇದೆ.
ಯುವತಿ: ಅದು ನನ್ನಲ್ಲ ಚಿನ್ನಿ, ಗ್ರಾಫಿಕ್ಸ್.

ಸಹೋದರ: ಏನು ಗ್ರಾಫಿಕ್ಸ್. ಯಾರಾದರೂ ಗ್ರಾಫಿಕ್ಸ್ ಅಂದರೆ ನಂಬಲು ಸಾಧ್ಯವೇ.
ಯುವತಿ: ನಾನು ಎಲ್ಲವನ್ನು ಕ್ಲಿಯರ್ ಮಾಡಿಸುತ್ತೇನೆ. ಆಗ ನಂಬಿಕೆ ಬರುತ್ತಾ.

ಸಹೋದರ: ಆ ವಿಡಿಯೋ ಇನ್ನ ಭಯಂಕರ ವೈರಲ್ ಆಗಲಿದೆ. ನೀನು ಈಗ ಯಾರ ಜತೆ ಮಾತನಾಡುವುದು?

ಯುವತಿ: ನಾನು ಡಿ.ಕೆ.ಶಿವಕುಮಾರ್ ಅವರ ಮನೆ ಬಳಿ ಬಂದಿದ್ದೇನೆ.
ಸಹೋದರ: ನಿನ್ನ ಸಂಪರ್ಕ, ಲೊಕೇಷನ್‌ನನ್ನು ನಾಲ್ವರಿಗೆ ಕಳುಹಿಸು

ಯುವತಿ: ಆಯ್ತು.
ಸಹೋದರ: ಇದು ಬಹಳ ಡೇಂಜರ್. ಆಕಾಶ್ ಇದ್ದಾನೆ ಎಂದೇನು ಅಲ್ಲ. ನಾಳೆ ಅವರು
ಸರ್ಕಾರವನ್ನು ಬೀಳಿಸುತ್ತಾರೆ. ಸುಮ್ಮನೆ ಬಿಡುವುದಿಲ್ಲ. ಸುಲಭವಾಗಿ ಅವರು
ಬಿಡುವುದಿಲ್ಲ. ನಿನ್ನ ಕಾಲು ಹಿಡಿದುಕೊಳ್ಳುತ್ತೇನೆ. ಹುಷಾರಾಗಿ ಇರು. ಯಾವುದೇ
ತೀರ್ಮಾನ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚನೆ ಮಾಡು.

ಯುವತಿ: ಆಯ್ತು ಅಪ್ಪಿ.
ಸಹೋದರ: ನಾಳೆ ಹೇಳಿಕೆ ನೀಡಲು ನಿನ್ನ ಕರೆದರೆ, ನೂರು ಬಾರಿ ಯೋಚನೆ ಮಾಡು. ಆತನ
ಪರವಾಗಿ ಹೇಳಿಕೆ ನೀಡಿದರೆ ಏನು ಪರಿಣಾಮ, ವಿರುದ್ಧವಾಗಿ ಹೇಳಿಕೆ ನೀಡಿದರೆ ಏನಾಗಲಿದೆ
ಎಂಬುದನ್ನು ಯೋಚಿಸಿ ಹೇಳಿಕೆ ನೀಡು ಅಕ್ಕ.ಅವರು ನಮ್ಮ ರೀತಿ ಸಾಮಾನ್ಯ ಜನರಲ್ಲ.

ನಿನಗೆ ಏನಾದರೂ ತೊಂದರೆ ಇದ್ಯಾ ಹೇಳು.
ಯುವತಿ: ನನಗೆ ಯಾರು ತೊಂದರೆ ನೀಡುತ್ತಿಲ್ಲ. ಈಗ ಅವರೇ ಬಂದು ಖುದ್ದು ಮಾತನಾಡುತ್ತಾರೆ.
ಸಹೋದರ: ಯಾರು?
ಯುವತಿ: ಆ ಮೇಲೆ ಮಾತನಾಡುತ್ತೇನೆ. ನಾನು ಕಾಲ್ ಮಾಡಿದರೆ ಪಿಕ್ ಮಾಡು. ಮೊಬೈಲ್
ಸೈಲೆಂಟ್ ಇಡಬೇಡ. ನಿದ್ರೆ ಮಾಡಬೇಡ ಇವತ್ತು.
ಸಹೋದರ: ಆಗಲಿ

ಹೀಗೆ ಸಂಭಾಷಣೆಯ ಟೇಪ್ ಭಾರೀ ಕುತೂಹಲ ಕೆರಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *