ಕಲಬುರಗಿ prajakiran.com : ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ವಿಮಾನ ಪ್ರಯಾಣ ಮಾಡಲು ಕಾಯುತ್ತಿದ್ದ ಕಲ್ಯಾಣ ಕರ್ನಾಟಕ ಭಾಗದ ಜನರ ಕನಸು ಇದೀಗ ನನಸಾಗುತ್ತಿದೆ.
ಬರುವ ಜನೇವರಿ ತಿಂಗಳಿನಿಂದ ಕಲಬುರಗಿ ಯಿಂದ ತಿರುಪತಿಗೆ ಸ್ಟಾರ್ ಏರ್ ಲೈನ್ಸ್ ಸೇವೆ ಒದಗಿಸಲಿದೆ.
ಜನೇವರಿ 11 ರಿಂದ ವಾರದಲ್ಲಿ ನಾಲ್ಕು ದಿನಗಳ ಕಾಲ ತನ್ನ ಸೇವೆಯನ್ನು ಆರಂಭಿಸಲಿದೆ. ವಾರದಲ್ಲಿ ಸೋಮವಾರ, ಗುರುವಾರ, ಶುಕ್ರವಾರ, ಹಾಗೂ ಭಾನುವಾರ ಸ್ಟಾರ್ ಏರ್ ಲೈನ್ಸ್ ಸಂಚರಿಸಲಿದೆ.
ಕಲಬುರಗಿಯಿಂದ ತಿರುಪತಿಗೆ ಬೆಳಿಗ್ಗೆ 9:55 ಗಂಟೆಗೆ ಹೊರಟು ಬೆಳಿಗ್ಗೆ 11 ಗಂಟೆಗೆ ತಿರುಪತಿ ತಲುಪಲಿದೆ.
ಅದೇ ರೀತಿ ತಿರುಪತಿಯಿಂದ ಮಧ್ಯಾಹ್ನ2:25 ಕ್ಕೆ ಹೊರಟು 3:30 ಕ್ಕೆ ಕಲಬುರಗಿಗೆ ಬಂದು ತಲುಪಲಿದೆ.
ಹೀಗಾಗಿ ಕಲ್ಯಾಣ ಕರ್ನಾಟಕದ ಜನ ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ಇದೀಗ ವಿಮಾನಯಾನ ಮಾಡಲು ಕಾಲ ಕೂಡಿ ಬಂದಂತಾಗಿದೆ ಎಂದರೆ ತಪ್ಪಾಗಲಾರದು.