ರಾಜ್ಯ

ಶಾಲಾ, ಕಾಲೇಜುಗಳಿಗೆ ಅನುದಾನ ವಿಸ್ತರಿಸಲು ಆಗ್ರಹಿಸಿ ಪ್ರತಿಭಟನೆ

ಧಾರವಾಡ prajakiran.com : 1995 ನಂತರ ಆರಂಭವಾದ ಕನ್ನಡ ಶಾಲಾ, ಕಾಲೇಜುಗಳಿಗೆ ಅನುದಾನ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಸದಸ್ಯರು ಶನಿವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವೇತನ ಕೊಡಿಸುವುದು. ಎನ್ ಪಿಎಸ್ ರದ್ಧತಿ ಮಾಡುವುದು. ಕಾಲ್ಪನಿಕ ವೇತನ ಬಡ್ತಿಗಾಗಿ ಬಸವರಾಜ ಹೊರಟ್ಟಿ ವರದಿ ಜಾರಿ ಮಾಡಬೇಕು.

ಜ್ಯೋತಿ ಸಂಜೀವಿನಿ ಅನುದಾನಿತ ಶಾಲಾ ಸಿಬ್ಬಂದಿಗಳಿಗೂ ವಿಸ್ತರಿಸುವುದು, ಖಾಲಿ ಹುದ್ದೆಗಳ ಭರ್ತಿಗೆ ವಿಧಿಸಿದ ಆರ್ಥಿಕ ಮಿತವ್ಯಯ ಹಿಂಪಡೆಯುವುದು.

ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಂತೆ, ನಮ್ಮ ರಾಜ್ಯದಲ್ಲಿಯೂ ಕೂಡ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಲಾಯಿತು.

ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲು ಹುಬ್ಬಳ್ಳಿಯ ಲೆಮಿಂಗಟನ್ ಪ್ರೌಢಶಾಲೆಯಲ್ಲಿ  ಸೆ. ೨೬  ರಂದು ಬೆಳಿಗ್ಗೆ ೧೧  ಗಂಟೆಗೆ ಮತ್ತೆ ಸಭೆ ಸೇರಿ ತೀವ್ರತರದ ಹೋರಾಟ ರೂಪುರೇಷೆಗಳನ್ನು ಹಾಕಿಕೊಳ್ಳಲು ಸಭೆ ಕರೆಯಲಾಗಿದೆ ಎಂದು ಆಡಳಿತ ಮಂಡಳಿಯ ಪರವಾಗಿ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ  ತಿಳಿಸಿದರು.

ಪ್ರತಿಭಟನೆಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ಯಾಮ ಮಲ್ಲನಗೌಡರ, ಜಿಲ್ಲಾಧ್ಯಕ್ಷ ವಿ.ಎಸ್. ಹುದ್ದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಸವಣೂರ, ಶಿವಶಂಕರ ಕಲ್ಲೂರ, ಆಡಳಿತ ಮಂಡಳಿಯ ಪರವಾಗಿ ಮಲ್ಲನಗೌಡ ಪಾಟಿಲ್, ಎನ್.ಎಸ್. ಗೋವಿಂದರೆಡ್ಡಿ, ವಿ.ಎಸ್. ರೇಶ್ಮಿ, ವೀರಣ್ಣ ಶಿರಗುಪ್ಪಿ, ಎನ್.ಹೆಚ್. ಕಾಳೆ, ವರ್ಧಮಾನ ಕುರಕುರಿ, ಆಯ್. ಎಮ್. ಮುಲ್ಲಾ, ಎಮ್.ಜಿ. ಕೊಡ್ಲಿ, ಎಸ್. ಆರ್. ಮುರಕಟ್ಟಿ, ವಿ.ಕೆ. ಕುರಕುರಿ, ಬಿ.ಕೆ. ಮಳಗಿ,  ಎಸ್.ವಿ. ಪಟ್ಟಣಶೆಟ್ಟಿ, ಪಿ.ಸಿ. ವಲಮಣ್ಣವರ, ಪಿ.ಆಯ್. ಕುಂಬಾರ, ಸಂತೋಷ ಬಿಜಾಪೂರ,  ಸಂತೋಷ ಪಾಟೀಲ, ರವಿಕುಮಾರ ಬೆಳಹಾರ, ಹೆಚ್.ಎನ್. ಕರೆಮ್ಮನವರ,  ಜಿ.ಎಸ್. ಗೌಡಪ್ಪನವರ, ಮಹಾದೇವ ಮಾನೆ, ಶಂಕರ ಮರೇದ ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *