ಧಾರವಾಡ prajakiran.com : ಧಾರವಾಡ ಜಿಲ್ಲೆಯ ಕರೋನಾ ಪಾಸಿಟಿವ್ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಸೋಂಕಿತರ ಸಂಖ್ಯೆ ಗುರುವಾರ ಕೊಂಚ ತಗ್ಗಿದೆ.
ಇಂದು ಮತ್ತೆ ಬರೋಬ್ಬರಿ 737 ಜನರಿಗೆ ಕರೋನಾ ಪಾಸಿಟಿವ್ ಬಂದಿದೆ.
ದುರಂತದ ಸಂಗತಿಯೆಂದರೆ ಇಂದು ಕೂಡ 9 ಸೋಂಕಿತರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ 3 ಹಾಗೂ ಧಾರವಾಡ ಜಿಲ್ಲಾಸ್ಪತ್ರೆ ಯಲ್ಲಿ 4, ಸುಶ್ರುತಾ ಮತ್ತು ಧಾರವಾಡದ ಎಸ್ ಡಿಎಂನಲ್ಲಿ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.
ಆತಂಕದ ವಿಚಾರವೆಂದರೆ 514 ಜನ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5592 ಕ್ಕೆ ಎರಿಕೆ ಆಗಿದೆ.
ಸಮಾಧಾನದ ಸಂಗತಿಯೆಂದರೆ 859 ಸೋಂಕಿತರು ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.